[go: up one dir, main page]

ವಿಷಯಕ್ಕೆ ಹೋಗು

ಝುಣಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಝುಣಕಾ ಭಾಕ್ರಿ

ಝುಣಕ ಮಹಾರಾಷ್ಟ್ರ, ಗೋವಾ ಮತ್ತು ಉತ್ತರ ಕರ್ನಾಟಕದಲ್ಲಿ ತಯಾರಿಸಲ್ಪಡುವ ಒಂದು ಸಸ್ಯಾಹಾರಿ[] ಸಾಂಪ್ರದಾಯಿಕ[] ಭಾರತೀಯ ಖಾದ್ಯವಾಗಿದೆ.[][] ಇದು ಮೂಲಭೂತವಾಗಿ ಕಡಲೆ ಹಿಟ್ಟಿನ ಗಂಜಿಯಾಗಿದೆ. ಇದನ್ನು ಪಿಠಲಾ ಅಥವಾ ಪಿಠಲೆ ಎಂಬ ಹೆಸರಿನಿಂದಲೂ ಕರೆಯಲಾಗುತ್ತದ್. ಇದರ ಮುಖ್ಯ ಘಟಕಾಂಶವೆಂದರೆ ಕಡಲೆ ಹಿಟ್ಟು. ಕಡಲೆ ಹಿಟ್ಟನ್ನು ನೀರಿನೊಂದಿಗೆ ಸೇರಿಸಿ ಅರೆಘನ ಪೇಸ್ಟ್‌ನ್ನು ಮಾಡಿಕೊಳ್ಳಲಾಗುತ್ತದೆ. ನಂತರ ಇದನ್ನು ಎಣ್ಣೆಯಲ್ಲಿ ಹುರಿಯಲಾಗುತ್ತದೆ. ಜೊತೆಗೆ ಹಸಿರು ಮೆಣಸಿನಕಾಯಿ, ಕೆಂಪು ಖಾರದ ಪುಡಿ, ಅರಿಸಿನ, ಉಪ್ಪು, ಕರಿದ ಈರುಳ್ಳಿ, ಸಾಸಿವೆ ಬೀಜಗಳು, ಶುಂಠಿ-ಬೆಳ್ಳುಳ್ಳಿ, ಜೀರಿಗೆ ಬೀಜಗಳು, ಕೊತ್ತಂಬರಿ ಎಲೆಗಳಂತಹ ಯಾವುದೇ ಇತರ ಬೇರ್ಪಡಿಸಿದ ಘಟಕಾಂಶಗಳನ್ನು ಸೇರಿಸಲಾಗುತ್ತದೆ. ಇದನ್ನು ರೋಟಿ ಅಥವಾ ಹೆಚ್ಚು ಸಾಂಪ್ರದಾಯಿಕವಾಗಿ ಭಕ್ರಿ/ಜೋಳದ ರೊಟ್ಟಿಯೊಂದಿಗೆ ಬಡಿಸಲಾಗುತ್ತದೆ.[] ಈ ಖಾದ್ಯವನ್ನು ಎಂದೂ ಝುಣಕಾ ಭಾಕರ್ ಅಥವಾ ಪಿಠಲಾ ಭಾಕ್ರಿ ಎಂದೂ ಕರೆಯಲಾಗುತ್ತದೆ.

ಇದರಲ್ಲಿರುವ ನಾರು, ಪ್ರೋಟೀನ್, ಕಾರ್ಬೊಹೈಡ್ರೇಟುಗಳು ಮತ್ತು ಪೊಟ್ಯಾಷಿಯಂನ ಸಮತೋಲಿತ ಒಳಾಂಶದ ಕಾರಣ ಝುಣಕಾ/ಪಿಠಲಾವನ್ನು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Mishra, Garima (2011-02-18). "At 91, his love of great outdoors remains undimmed". The Indian Express. New Delhi: The Indian Express Limited. Retrieved 17 July 2012.
  2. Ranade, Vidya; Tyagi, Akanksha (2011-10-06). "Hinterland dreams". Pune Mirror. Archived from the original on 2013-07-02. Retrieved 6 April 2013.
  3. Godha, Ashishwang (2011-11-02). "Simply seafood". Mid Day. Retrieved 6 April 2013.
  4. Deshpande, Meeta (2008-01-28). "From stalls to five-stars". The Indian Express. Retrieved 6 April 2013.[ಶಾಶ್ವತವಾಗಿ ಮಡಿದ ಕೊಂಡಿ]
  5. Das, Soma (2013-03-28). "Just like home". Mid Day. Retrieved 6 April 2013.
"https://kn.wikipedia.org/w/index.php?title=ಝುಣಕ&oldid=1197551" ಇಂದ ಪಡೆಯಲ್ಪಟ್ಟಿದೆ