[go: up one dir, main page]

ವಿಷಯಕ್ಕೆ ಹೋಗು

ಸಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಗರ
ಸಗರನ ಕಲಾತ್ಮಕ ಚಿತ್ರಣ
ಮಕ್ಕಳುಅಸಮಂಜಸ (ಕೇಶಿನಿ), ೬೦,೦೦೦ ಪುತ್ರರು (ಸುಮತಿ)
ಗ್ರಂಥಗಳುರಾಮಾಯಣ, ಮಹಾಭಾರತ, ಪುರಾಣಗಳು
ಪ್ರದೇಶಅಯೋಧ್ಯೆ
ತಂದೆತಾಯಿಯರು
  • ಬಾಹುಕ (ತಂದೆ)
  • ಯಾದವಿ (ತಾಯಿ)


ಸಗರ (ಸಂಸ್ಕೃತ: सगर, ರೋಮನೈಸ್ಡ್: Sagara, lit. 'ವಿಷದೊಂದಿಗೆ ಜನಿಸಿದವನು') ಹಿಂದೂ ಧರ್ಮದಲ್ಲಿ ಜನಿಸಿದ ಸೂರ್ಯವಂಶದ ರಾಜ. ಈತನು ಬಾಹುಕನ ಮಗ. ಸಗರನಿಗೆ ಇಬ್ಬರು ಹೆಂಡತಿಯರು ಮತ್ತು ೬೦,೦೦೧ ಪುತ್ರರಿದ್ದಾರೆ. ಸಗರನು ಅಯೋಧ್ಯಾ ನಗರವನ್ನು ಆಳುತ್ತಿದ್ದನು.

ದಂತಕಥೆ

[ಬದಲಾಯಿಸಿ]

ಸಗರನು ಬಾಹುಕ ಮತ್ತು ಅವನ ಹೆಂಡತಿ ಯಾದವಿಗೆ ಜನಿಸಿದವನು. ಹೇಹಯ ರಾಜನಾದ ತಾಲಜಂಗನ ದಾಳಿಗೆ ಒಳಗಾದ ಬಾಹುಕ ಮತ್ತು ಅವನ ಹೆಂಡತಿ ಯಾದವಿ ಋಷಿ ಔರ್ವರ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದಾಗ ಸಗರನು ಜನಿಸಿದನು. ಯಾದವಿ ತನ್ನ ಗರ್ಭಾವಸ್ಥೆಯ ಏಳನೇ ತಿಂಗಳಲ್ಲಿದ್ದಾಗ ಅವಳ ಸಹ-ಪತ್ನಿ(ಸವತಿ) ಅವಳಿಗೆ ವಿಷವನ್ನು ನೀಡಿದ್ದಳು. ಇದರಿಂದಾಗಿ ಅವಳು ಏಳು ವರ್ಷಗಳವರೆಗೆ ಗರ್ಭಿಣಿಯಾಗಿದ್ದಳು. ಬಾಹುಕನು ಆಶ್ರಮದಲ್ಲಿ ಮರಣಹೊಂದಿದಾಗ ಯಾದವಿಯು ಅವನ ಅಂತ್ಯಕ್ರಿಯೆಯ ಚಿತಾಗಾರದಲ್ಲಿ ಅವನನ್ನು ಹಿಂಬಾಲಿಸಲು ಸಿದ್ಧಳಾಗಿದ್ದಳು. ಆದರೆ ಋಷಿ ಔರ್ವರರು ನಿನಗೆ ಹುಟ್ಟುವ ಮಗುವು ಶ್ರೇಷ್ಠ ಮತ್ತು ಅದೃಷ್ಟಶಾಲಿ ಚಕ್ರವರ್ತಿಯಾಗಿ ಬೆಳೆಯುತ್ತದೆ ಎಂದು ಭರವಸೆ ನೀಡಿ ಅವಳನ್ನು ತಡೆದರು. ನಂತರ ಯಾದವಿ ಮಗುವನ್ನು ಹೆತ್ತಳು. ಅವಳ ಸಹ-ಪತ್ನಿ ನೀಡಿದ ವಿಷವು (ಗರ) ಅವಳ ಗರ್ಭಾವಸ್ಥೆಯನ್ನು ನಿಶ್ಚಲಗೊಳಿಸಿತ್ತು. ಆದ್ದರಿಂದ ಋಷಿ ಔರ್ವ ಯಾದವಿಯ ಮಗನಿಗೆ ಸಗರ (ಸ-ಜೊತೆಗೆ, ಗರ-ವಿಷ ಅಂದರೆ ವಿಷದೊಂದಿಗೆ ಜನಿಸಿದವನು) ಎಂದು ಹೆಸರಿಟ್ಟರು.

ಆಳ್ವಿಕೆ

[ಬದಲಾಯಿಸಿ]

ಋಷಿ ಔರ್ವ ಸಗರನ ಉಪನಯನ ಸಮಾರಂಭವನ್ನು ನಡೆಸಿದರು. ಸಗರನಿಗೆ ವೇದಗಳನ್ನು ಕಲಿಸಿದರು. ಒಮ್ಮೆ ಸಗರನು ಋಷಿಯನ್ನು 'ತಂದೆ' ಎಂದು ಸಂಬೋಧಿಸುವುದನ್ನು ಕೇಳಿ ಯಾದವಿಯು ದುಃಖ ಪಡುತ್ತಾಳೆ. ಸಗರನು ಅವಳ ದುಃಖವನ್ನು ವಿಚಾರಿಸಿದಾಗ ಅವಳು ಅವನ ನಿಜವಾದ ತಂದೆ ಮತ್ತು ಪರಂಪರೆಯ ಬಗ್ಗೆ ಹೇಳಿದಳು.

ತಾಳಜಂಗನ ಭಯದಲ್ಲಿ ವಾಸಿಸುತ್ತಿದ್ದ ಅಯೋಧ್ಯೆಯ ಜನರು ವಸಿಷ್ಠರ ಸಲಹೆಯನ್ನು ಕೇಳಿದರು. ಆಗ ವಸಿಷ್ಠರು ರಾಜ್ಯವನ್ನು ಪುನಃ ವಶಪಡಿಸಿಕೊಳ್ಳಲು ಸಗರನನ್ನು ಮರಳಿ ಕರೆತರಲು ಸಲಹೆ ನೀಡಿದರು. ಸಗರನಿಗೆ ಈ ವಿಷಯವನ್ನು ತಿಳಿಸಲು ಜನಸಾಮಾನ್ಯರು ಐದು ದಿನಗಳ ಕಾಲ ಔರ್ವರ ಆಶ್ರಮದ ಹೊರಗೆ ಕಾಯುತ್ತಿದ್ದರು. ಋಷಿಗಳ ಆಶೀರ್ವಾದದಿಂದ ಸಗರನು ತಾಳಜಂಗನೊಂದಿಗೆ ಹೋರಾಡಿದನು. ಅವನ ರಾಜ್ಯವನ್ನು ಪುನಃ ವಶಪಡಿಸಿಕೊಂಡನು ಮತ್ತು ಸ್ವತಃ ರಾಜನಾಗಿ ಪಟ್ಟಾಭಿಷಿಕ್ತನಾದನು.

ಮಕ್ಕಳು

[ಬದಲಾಯಿಸಿ]

ಸಗರನಿಗೆ ಸುಮತಿ ಮತ್ತು ಕೇಶಿನಿ ಎಂಬ ಇಬ್ಬರು ಪತ್ನಿಯರಿದ್ದರು. ಸಗರನು ತನ್ನ ಇಬ್ಬರು ಹೆಂಡತಿಯರೊಂದಿಗೆ ಹಿಮಾಲಯಕ್ಕೆ ಹೋಗಿ ಭೃಗುಪ್ರಸ್ರವಣ ಪರ್ವತದಲ್ಲಿ ತಪಸ್ಸನ್ನು ಮಾಡಲು ಪ್ರಾರಂಭಿಸಿದನು. ಹೀಗೆ ಒಂದು ಶತಮಾನದ ನಂತರ, ಭೃಗು ಋಷಿಯು ಕಾಣಿಸಿಕೊಂಡು ಸಗರನಿಗೆ ತನ್ನ ಹೆಂಡತಿಯರಲ್ಲಿ ಒಬ್ಬರು ೬೦,೦೦೦ ಪುತ್ರರಿಗೆ ಜನ್ಮ ನೀಡುವಂತೆ ಮತ್ತು ಇನ್ನೊಬ್ಬರು ಒಂದು ಮಗುವಿಗೆ ಜನ್ಮ ನೀಡುವಂತೆ ಮುಂದೆ ಆ ಮಗು ರಾಜವಂಶದ ವೈಭವವನ್ನು ಹೆಚ್ಚಿಸುತ್ತದೆ ಎಂದು ಆಶೀರ್ವದಿಸಿದರು. ಸುಮತಿಯು ೬೦,೦೦೦ ಮಕ್ಕಳನ್ನು ಹೆರಲು ಆರಿಸಿಕೊಂಡಳು ಮತ್ತು ಕೇಶಿನಿಯು ಒಬ್ಬ ಮಗನನ್ನು ಹೆರಲು ನಿರ್ಧರಿಸಿದಳು. ರಾಜ ಮತ್ತು ಅವನ ರಾಣಿಯರು ಅಯೋಧ್ಯೆಗೆ ಹಿಂದಿರುಗಿದರು. ಸರಿಯಾದ ಸಮಯದಲ್ಲಿ, ಕೇಶಿನಿಯು ಅಸಮಂಜಸ ಎಂಬ ಒಬ್ಬ ಮಗನನ್ನು ಪಡೆದಳು. ಸುಮತಿಯು ಮಾಂಸದ ಮುದ್ದೆಗೆ ಜನ್ಮ ನೀಡಿದಳು. ಅದು ಶಿವನಿಂದ ಸಾವಿರಾರು ಪ್ರಕಾಶಮಾನ ತುಂಡುಗಳಾಗಿ ಕತ್ತರಿಸಿದ ನಂತರ ೬೦,೦೦೦ ಮಕ್ಕಳು ಬಂದವು.

ಸಾಗರ ತನ್ನ ಪುತ್ರರೊಂದಿಗೆ ವಿಜಯೋತ್ಸವದ ಪ್ರವಾಸವನ್ನು ಕೈಗೊಂಡನು ಮತ್ತು ವಿಜಯದ ಯುದ್ಧವನ್ನು ಪ್ರಾರಂಭಿಸಿದನು. ಭೂಮಿಯ ಉತ್ತರ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಅವನು ದಕ್ಷಿಣದ ಕಡೆಗೆ ಚಲಿಸಿದನು. ಅವನ ವಸ್ತು ಮಹಿಷ್ಮತಿ, ಹೇಹಯರ ಸಾಮ್ರಾಜ್ಯ. ಸಗರನು ತನ್ನ ತಂದೆಯ ದರೋಡೆಕೋರರ ಸಾಮ್ರಾಜ್ಯವನ್ನು ಯುದ್ಧದಲ್ಲಿ ಸಂಪೂರ್ಣವಾಗಿ ನಾಶಪಡಿಸಿದನು.

ಸಗರ ಪುತ್ರರ ಸಾವು

[ಬದಲಾಯಿಸಿ]

ವಿಷ್ಣು ಪುರಾಣದ ಪ್ರಕಾರ, ಸಗರ ರಾಜನು ಭೂಮಿಯ ಮೇಲೆ ತನ್ನ ಆಳ್ವಿಕೆಯನ್ನು ಸ್ಥಾಪಿಸಲು ಅಶ್ವಮೇಧ ಯಜ್ಞವನ್ನು ಮಾಡಿದನು. ದೇವತೆಗಳ ರಾಜನಾದ ಇಂದ್ರನು ಯಜ್ಞದ ಫಲಿತಾಂಶಗಳಿಂದ ಭಯಭೀತನಾದನು ಮತ್ತು ಪರ್ವತದ ಬಳಿ ಯಜ್ಞದ ಕುದುರೆಯನ್ನು ಕದಿಯಲು ನಿರ್ಧರಿಸಿದನು. ಅವರು ಆಳವಾದ ಧ್ಯಾನದಲ್ಲಿ ನಿರತರಾಗಿದ್ದ ಕಪಿಲ ಋಷಿಯ ಬಳಿ ಪಾತಾಳದಲ್ಲಿ ಕುದುರೆಯನ್ನು ಬಿಟ್ಟರು. ರಾಜ ಸಗರನು ತನ್ನ ೬೦,೦೦೦ ಪುತ್ರರು ಮತ್ತು ಅವನ ಮಗ ಅಸಮಂಜಸ, ಒಟ್ಟಾಗಿ ಸಗರಪುತ್ರರು (ಸಗರನ ಮಕ್ಕಳು) ಎಂದು ಕರೆಯಲ್ಪಡುವ ಸಗರನ ಮಕ್ಕಳಿಗೆ ಕುದುರೆಯನ್ನು ಹುಡುಕಲು ಆದೇಶಿಸಲಾಯಿತು. ೬೦,೦೦೦ ಪುತ್ರರು ಅಷ್ಟದಿಗ್ಗಜಗಳನ್ನು ಪ್ರದಕ್ಷಿಣೆ ಹಾಕಿದಾಗ ಋಷಿಯ ಬಳಿ ಕುದುರೆ ಮೇಯುತ್ತಿರುವುದನ್ನು ಕಂಡು ಅವರು ಗಲಾಟೆ ಮಾಡಿದರು. ಕೋಪಗೊಂಡ ಋಷಿ ಕಣ್ಣು ತೆರೆದಾಗ ಅವರ ಮೇಲೆ ಕಣ್ಣು ಹಾಯಿಸಿದರು. ಆಗ ಅವರು ತಕ್ಷಣವೇ ಸುಟ್ಟು ಬೂದಿಯಾದರು.

ತಲೆಮಾರುಗಳ ನಂತರ, ಸಗರನ ವಂಶಸ್ಥರಲ್ಲಿ ಒಬ್ಬನಾದ ಭಗೀರಥನು ತನ್ನ ಪೂರ್ವಜರ ಆತ್ಮಗಳನ್ನು ಪಾತಾಳದಿಂದ ಮುಕ್ತಗೊಳಿಸುವ ಕಾರ್ಯವನ್ನು ಕೈಗೊಂಡನು. ಅವರು ಗಂಗಾ ಮಾತೆಗೆ ತಪಸ್ಸನ್ನು ಮಾಡುವ ಮೂಲಕ ಈ ಕಾರ್ಯವನ್ನು ಮಾಡಿದನು.[] ಗಂಗಾ ನದಿಯಾಗಿ ಸ್ವರ್ಗದಿಂದ ಭೂಮಿಗೆ ಇಳಿಯುವಂತೆ ಮಾಡುವಲ್ಲಿ ಯಶಸ್ವಿಯಾದನು.[] ಪಾತಾಳದಲ್ಲಿ ೬೦,೦೦೦ ಸತ್ತ ಪುತ್ರರಿಗೆ ಅಂತ್ಯಕ್ರಿಯೆಯ ವಿಧಿಗಳನ್ನು ನೆರವೇರಿಸಿದರು.

ಪದತ್ಯಾಗ

[ಬದಲಾಯಿಸಿ]

ಸಗರನ ಪುತ್ರರ ಮರಣದ ನಂತರ, ಸಗರನು ಅಯೋಧ್ಯೆಯ ಸಿಂಹಾಸನವನ್ನು ತ್ಯಜಿಸಿದನು. ಅಸಮಂಜಸನ ಮಗನಾದ ಅಂಶುಮಾನನನ್ನು ತನ್ನ ಉತ್ತರಾಧಿಕಾರಿಯಾಗಿ ಅಭಿಷೇಕಿಸಿದನು. ಸರನು ಔರ್ವರ ಆಶ್ರಮಕ್ಕೆ ಹೋದನು. ಗಂಗೆಯು ತನ್ನ ಮಗನ ಚಿತಾಭಸ್ಮದ ಮೇಲೆ ಇಳಿಯುವಂತೆ ತಪಸ್ಸು ಮಾಡಲು ಪ್ರಾರಂಭಿಸಿದನು.

ಜೈನ ಧರ್ಮ

[ಬದಲಾಯಿಸಿ]

ಜೈನ ಸಂಪ್ರದಾಯದಲ್ಲಿ, ಸಗರನು ಅಜಿತಾನಾಥ (ಎರಡನೆಯ ತೀರ್ಥಂಕರ)ನ ಕಿರಿಯ ಸಹೋದರನಾಗಿದ್ದನು. ಅವರು ಅಯೋಧ್ಯೆಯ ಇಕ್ಷ್ವಾಕು ರಾಜವಂಶದ ಕ್ಷತ್ರಿಯ ರಾಜ ಜಿತಶತ್ರು ಮತ್ತು ರಾಣಿ ವಿಜಯಂತಿ (ಯಸೋಮತಿ)ಗೆ ಜನಿಸಿದರು. ಅವರು ಅವಸರ್ಪಿಣಿಯ ಎರಡನೇ ಚಕ್ರವರ್ತಿ ಆಡಳಿತಗಾರರಾಗಿದ್ದರು (ಜೈನ ವಿಶ್ವವಿಜ್ಞಾನದ ಪ್ರಕಾರ ಲೌಕಿಕ ಕಾಲಚಕ್ರದ ಪ್ರಸ್ತುತ ಅರ್ಧದಷ್ಟು) ಅವರು ತಮ್ಮ ಏಳು ಆಭರಣಗಳಿಂದ ಜಗತ್ತನ್ನು ಗೆದ್ದರು. ಅವನ ರಾಣಿಯರು ಸುಮತಿ ಮತ್ತು ಭದ್ರ. ಅವನು ತನ್ನ ರಾಣಿಯರಿಂದ ಅರವತ್ತು ಸಾವಿರ ಮಕ್ಕಳನ್ನು ಹೊಂದಿದ್ದನು. ಜಹ್ನು ಹಿರಿಯನಾಗಿದ್ದನು. ಜಹ್ನು ನಾಗಾ ಸಾಮ್ರಾಜ್ಯವನ್ನು ಗಂಗಾ ನದಿಯ ನೀರಿನಿಂದ ತುಂಬಿಸಿದನು. ಇದರಿಂದ ಕೋಪಗೊಂಡ ನಾಗರಾಜನು ಕೋಪದಿಂದ ಸಗರನ ಎಲ್ಲಾ ಮಕ್ಕಳನ್ನು ಸುಟ್ಟುಹಾಕಿದನು. ಸಗರನು ತನ್ನ ಮೊಮ್ಮಗನಾದ ಭಗೀರಥನನ್ನು ಸಿಂಹಾಸನದಲ್ಲಿ ಕೂರಿಸಿ ತಪಸ್ಸಿಗೆ ಹೊರಟನು.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಸಗರ&oldid=1252919" ಇಂದ ಪಡೆಯಲ್ಪಟ್ಟಿದೆ