[go: up one dir, main page]

ವಿಷಯಕ್ಕೆ ಹೋಗು

ಶನೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chanel
ಸಂಸ್ಥೆಯ ಪ್ರಕಾರPrivately held
ಸ್ಥಾಪನೆ1909 / 1910
ಸಂಸ್ಥಾಪಕ(ರು)Gabrielle "Coco" Chanel
ಮುಖ್ಯ ಕಾರ್ಯಾಲಯFrance Paris, ಫ್ರಾನ್ಸ್ 135 Avenue Charles de Gaulle
92521 Neuilly-sur-Seine Cedex
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Alain Wertheimer, co-owner
Gerard Wertheimer, co-owner
Karl Lagerfeld, head designer
ಉದ್ಯಮfashion
ಉತ್ಪನ್ನhaute couture, Perfume, Jewellery, Fashion accessory
ಜಾಲತಾಣwww.chanel.com

ಶನೆಲ್ ಎಸ್.ಎ. , ಸಾಮಾನ್ಯವಾಗಿ "ಶನೆಲ್" ಎಂದು ಹೆಸರುವಾಸಿ '(English pronunciation: /ʃəˈnɛl/), ಇದು ಆಟ್ ಕೂಟೂರ್‌ನಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟ ಹಾಗೂ ಫ್ಯಾಷನ್ ವಿನ್ಯಾಸಕಾರರಾದ ದಿವಂಗತ ಗೇಬ್ರಿಯೆಲ್ "ಕೊಕೊ" ಶನೆಲ್ ಅವರಿಂದ ಸ್ಥಾಪನೆಯಾದ ಒಂದು ಪರ್ಷಿಯನ್ ಫ್ಯಾಷನ್ ಹೌಸ್, ಐಷಾರಾಮಿ ಸಾಮಗ್ರಿಗಳನ್ನು ತಯಾರಿಸುವಲ್ಲಿ ನಿಷ್ಣಾತವಾಗಿದೆ (ಆಟ್ ಕೂಟೂರ್, ಸಿದ್ಧ-ಉಡುಪುಗಳು, ಕೈಚೀಲಗಳು, ಸುಗಂಧ ದ್ರವ್ಯಗಳು, ಮತ್ತು ಪ್ರಸಾಧನ ಸಾಮಾನುಗಳು ಮತ್ತು ಇತರೆಯವು ಸೇರಿವೆ).[] ಫೋರ್ಬ್ಸ್ ‌ನ ಪ್ರಕಾರ, ಹೌಸ್ ಆಫ್ ಶನೆಲ್ ಎಲೇನ್ ವರ್ತೈಮರ್ ಮತ್ತು ಜೆರಾರ್ಡ್ ವರ್ತೈಮರ್ ಅವರುಗಳ ಖಾಸಗಿ ಜಂಟಿ ಸ್ವಾಧೀನದಲ್ಲಿದೆ, ಇವರು ಆರಂಭದ (1924) ಶನೆಲ್ ಪಾಲುಗಾರ ಪಿಯರ್ ವರ್ತೈಮರ್‌ನ ಮರಿ ಮೊಮ್ಮಕ್ಕಳು.

ಈ ಕಂಪನಿಯು ಮೊದಲಿನಿಂದಲೂ ಅನೇಕ ಜನಪ್ರಿಯ ಪ್ರಸಿದ್ಧ ವ್ಯಕ್ತಿಗಳನ್ನು ರೂಪದರ್ಶಿಗಳನ್ನಾಗಿ ಹೊಂದಿದೆ, ಅವರಲ್ಲಿ ಕ್ಯಾಥರಿನ್ ಡೆನೆವ್ (1970ರ ದಶಕದ ಶನೆಲ್ ನಂ. 5 ರೂಪದರ್ಶಿ ವಕ್ತಾರ), ನಿಕೋಲ್ ಕಿಡ್ಮನ್ (2000 ದಶಕದ ಆರಂಭದ ಶನೆಲ್ ನಂ. 5 ರೂಪದರ್ಶಿ ವಕ್ತಾರ), ಆಡ್ರೆ ಟಟೌ (ಈಗಿನ ಶನೆಲ್ ನಂ. 5 ರೂಪದರ್ಶಿ ವಕ್ತಾರ), ಕೀರ ನೈಟ್ಲಿ (ಈಗಿನ ಕೊಕೊ ಮೇಡ್‌ಮೊಸೆಲ್‌ನ ರೂಪದರ್ಶಿ ವಕ್ತಾರ), ಮತ್ತು ಪ್ರಖ್ಯಾತ ನಟಿ ಮರ್ಲಿನ್ ಮನ್ರೊಳು (1950ರ ದಶಕದ ಶನೆಲ್ ನಂ. 5 ರೂಪದರ್ಶಿ ವಕ್ತಾರ) ಶನೆಲ್ ನಂ. 5 ಅನ್ನು ಅಕೆಯೇ ತನ್ನ ಮೇಲೆ ಎರಚಿಕೊಳ್ಳುತ್ತಿರುವಂತೆ ಚಿತ್ರೀಕರಿಸಲಾಗಿತ್ತು. ಈ ಚಿತ್ರವು ಶನೆಲ್ ಜಾಹೀರಾತುಗಳಲ್ಲಿ ಅತ್ಯಂತ ಹೆಸರುವಾಸಿಯಾದುದು, ಮತ್ತು ಮಾರುಕಟ್ಟೆಯ ಇತಿಹಾಸದಲ್ಲೇ ಬಹು ಜನಪ್ರಿಯ ಜಾಹೀರಾತು ಚಿತ್ರಗಳಲ್ಲೊಂದಾಗಿ ಮುಂದುವರೆದಿದೆ, ಎಣಿಕೆಯಿಲ್ಲದಷ್ಟು ಜೀವನ ಚರಿತ್ರೆಗಳಲ್ಲಿ ಬಳಸಲಾಗಿದೆ, ಮತ್ತು ಮರ್ಲಿನ್ ಮನ್ರೊ ರೂಪದರ್ಶಿಯಾಗಿರುವ ಇದನ್ನು ಈಗಲೂ ದೊಡ್ಡ ಪ್ರಮಾಣದಲ್ಲಿ ಭಿತ್ತಿ ಪತ್ರವಾಗಿ ಮಾರಲಾಗುತ್ತಿದೆ ಹಾಗೂ ಕಲಾತ್ಮಕ ಚಿತ್ರವಾಗಿ ಕೂಡ ಬಳಸಲಾಗುತ್ತಿದೆ. ಮರ್ಲಿನ್ ಮನ್ರೊರವರು ಈ ಸುಗಂಧ ದ್ರವ್ಯವನ್ನು ಖ್ಯಾತಿಗೊಳಿಸಿದರು.[]

ಚಿತ್ರ:Robe chanel.jpg
2007/8ರ ಶರತ್ಕಾಲ-ಚಳಿಗಾಲದ ಉತ್ತಮ ಉಡುಪುಗಳ ಸಂಗ್ರಹಣೆಯಿಂದ ಶನೆಲ್‌ ಮದುವೆಯ ಉಡುಪು

ಇತಿಹಾಸ

[ಬದಲಾಯಿಸಿ]

ಕೊಕೊ ಶನೆಲ್ ಯುಗ

[ಬದಲಾಯಿಸಿ]

ಗೇಬ್ರಿಯಲ್ "ಕೊಕೊ" ಶನೆಲ್‌ರವರು ಹೊಸ ವಿನ್ಯಾಸಗಳ ಹರಿಕಾರರು ಮತ್ತು ಲಾಲಿತ್ಯ, ಅಂತಸ್ತು, ಮತ್ತು ಸ್ವಂತಿಕೆಗಳ ಮೂಲ "ಬುನಾದಿಗೆ ವಾಪಸ್ಸು" ಎಂಬ ಮಂತ್ರದಿಂದ ಫ್ಯಾಷನ್ ಉದ್ಯಮದಲ್ಲಿ ಕ್ರಾಂತಿ ಮೂಡಿಸಿದರು. [ಸೂಕ್ತ ಉಲ್ಲೇಖನ ಬೇಕು]1909–1971ರವರೆಗೆ ಅವಳ ಬಲವಾದ ಆಳ್ವಿಕೆಯಲ್ಲಿ, ಕೊಕೊ ಶನೆಲ್ ಅವರು ’ಪ್ರಧಾನ ವಿನ್ಯಾಸಕಾರ’ ಎಂಬ ಅಧಿಕಾರವನ್ನು 1971 ಜನವರಿ 10 ರಂದು ಆಕೆಯು ನಿಧನ ಹೊಂದುವವರೆಗೆ ಹೊಂದಿದ್ದರು.

ಸ್ಥಾಪನೆ ಮತ್ತು ಮನ್ನಣೆ: 1909ರಿಂದ 1920ರ ದಶಕದವರೆಗೆ

[ಬದಲಾಯಿಸಿ]

1909ರಲ್ಲಿ, ಗೇಬ್ರಿಯಲ್ ಶನೆಲ್ ಪ್ಯಾರಿಸ್‌ನ ಬಾಲ್ಸನ್ ಬಹು ಮಹಡಿ ಕಟ್ಟಡದ ನೆಲ ಮಹಡಿಯಲ್ಲಿ ಒಂದು ವ್ಯಾಪಾರಿ ಮಳಿಗೆಯನ್ನು ತೆರೆದರು - ಮುಂದೆ ಪ್ರಪಂಚದಲ್ಲೇ ಬಹು ದೊಡ್ಡ ಫ್ಯಾಷನ್ ಸಾಮ್ರಾಜ್ಯವಾಗುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿತ್ತು.[] ಬಾಲ್ಸನ್‌ ಕಟ್ಟಡವು ತಮ್ಮ ಸದಭಿರುಚಿಯ ಪತ್ನಿಯರ ಜೊತೆಯಲ್ಲಿ ಫ್ರಾನ್ಸ್‌ನ ಗಣ್ಯರು ಭೇಟಿಯಾಗುತ್ತಿದ್ದ ಸ್ಥಳವಾಗಿತ್ತು, ಇದರಿಂದ ಆ ಮಹಿಳೆಯರಿಗೆ ಅಲಂಕಾರಿಕ ಟೋಪಿಗಳನ್ನು ವಿನ್ಯಾಸಗೊಳಿಸಿ ಮಾರುವ ಅವಕಾಶ ಕೊಕೊಗೆ ದೊರೆಯಿತು. ಈ ಸಮಯದಲ್ಲಿ ಕೊಕೊ ಶನೆಲ್‌ರವರು, ಬಾಲ್ಸನ್ ಗಂಡಸರ ಗುಂಪಿನ ಸದಸ್ಯರಾಗಿದ್ದ ಆರ್ಥರ್ ’ಬಾಯ್’ ಕ್ಯಾಪಲ್ ಎಂಬುವರ ಜೊತೆ ಸಂಬಂಧ ಬೆಳೆಸಿದರು.

ಅವರು ಕೊಕೊನಲ್ಲಿ ಒಬ್ಬ ವ್ಯಾಪಾರೀ ಹೆಣ್ಣನ್ನು ನೋಡಿದರು ಮತ್ತು ಅವರಿಗೆ 1910ರಲ್ಲಿ ಪ್ಯಾರಿಸ್‌ನಲ್ಲಿರುವ 31 ರೂ ಕ್ಯಾಂಬನ್‌ನಲ್ಲಿ ಜಾಗ ಕೊಳ್ಳಲು ಸಹಾಯ ಮಾಡಿದರು.[] ಆಗಲೇ ಆ ಕಟ್ಟಡದಲ್ಲಿ ಒಂದು ಫ್ಯಾಷನ್ ಮಳಿಗೆಯಿತ್ತು, ಮತ್ತು ಆದ್ದರಿಂದ ಕೊಕೊ ಅವರಿಗೆ ಅಲ್ಲಿ ಫ್ಯಾಷನ್ ಬಟ್ಟೆಗಳನ್ನು ನಿರ್ಮಿಸಲು ಆಕೆಯ ಗುತ್ತಿಗೆಯಲ್ಲಿ ಅವಕಾಶ ನೀಡಿರಲಿಲ್ಲ.[] 1913ರಲ್ಲಿ, ಶನೆಲ್‌ರವರು ಫ್ರಾನ್ಸ್‌ನ ಡೀವಿಲ್‌ ಮತ್ತು ಬಿಯರ್ರಿಟ್ಝ್‌ನಲ್ಲಿರುವ ತಮ್ಮ ಹೊಸ ಮಳಿಗೆಗಳಲ್ಲಿ ಮಹಿಳೆಯರಿಗಾಗಿ ಕ್ರೀಡಾ ಉಡುಪುಗಳನ್ನು ಪರಿಚಯಿಸಿದರು. ಅವರು ಈ ರೆಸಾರ್ಟ್‌ಗಳಿಗೆ ಬರುವ ಮಹಿಳೆಯರ ಶೈಲಿಗಳನ್ನು ನೋಡಿ ಹೇಸಿಗೆ ಪಡುತ್ತಿದ್ದರು.[] ಶನೆಲ್‌ರವರ ವಿನ್ಯಾಸಗಳು ಬಹಳ ಸರಳವಾಗಿದ್ದು ಶ್ರೀಮಂತ ನೋಟವನ್ನು ನೀಡುತ್ತಿದ್ದವು (ಬೆಲ್ ಇಪೋಖ್‌ ಫ್ಯಾಷನ್‌ನ ಸಾಮಾನ್ಯ ಆಟ್ ಕೂಟೂರ್ ಶೈಲಿ).[] ಒಂದನೇ ವಿಶ್ವ ಸಮರ ಫ್ಯಾಷನ್‌ನ ಮೇಲೆ ಪರಿಣಾಮ ಬೀರಿತು. ಇದ್ದಿಲಿನ ಅಭಾವವಿತ್ತು ಮತ್ತು ಮಹಿಳೆಯರು ಕಾರ್ಖಾನೆಗಳಲ್ಲಿ ಯುದ್ಧಕ್ಕೆ ಮೊದಲು ಪುರುಷರು ಮಾಡುತ್ತಿದ್ದ ಕೆಲಸಗಳಲ್ಲಿ ತೊಡಗಿದರು; ಅಂಥ ಸ್ಥಳಗಳಲ್ಲಿ ಕೆಲಸ ಮಾಡಲು ಅವರಿಗೆ ಬೆಚ್ಚಗಿನ ಉಡುಪುಗಳು ಬೇಕಿದ್ದವು. ಶನೆಲ್‌ ಫೊಸೆಲ್ಲಾರ ವಿನ್ಯಾಸಗಳು ಮಹಿಳೆಯರ ಕ್ರೀಡಾ ಉಡುಪುಗಳ ಹೊಸ ಆಲೋಚನೆಗಳ ಮೇಲೆ ಪರಿಣಾಮ ಬೀರಿದವು. ಒಂದನೇ ವಿಶ್ವ ಸಮರದ ವೇಳೆಯಲ್ಲಿ, ರೂ ಕ್ಯಾಂಬನ್‌ನಲ್ಲಿರುವ ಪ್ಯಾರಿಸ್‌ನ ರಿಟ್ಝ್ ಹೋಟೆಲ್‌ನ ಎದುರಿಗೆ ಕೊಕೊ ಇನ್ನೊಂದು ದೊಡ್ಡ ಅಂಗಡಿಯನ್ನು ಪ್ರಾರಂಭಿಸಿದರು.[] ಇಲ್ಲಿ ಅವರು ನೇಯ್ದ ಉಣ್ಣೆ ಬಟ್ಟೆಯ ಕೋಟುಗಳನ್ನು, ನಾರು ಬಟ್ಟೆಯ ಲಂಗಗಳು, ನಾವಿಕರ ಮೇಲಂಗಿಗಳು, ಉದ್ದದ ಬಿಗಿಕವಚದ ಹೊರ ಅಂಗಿಗಳು ಮತ್ತು ಲಂಗ-ಕೋಟುಗಳನ್ನು ಮಾರಾಟ ಮಾಡಿದರು.ಆಕೆಯ ವಿನ್ಯಾಸ ವೃತ್ತಿಯ ಆರಂಭದಲ್ಲಿ ಹಣಕಾಸಿನ ಪರಿಸ್ಥಿತಿಯು ಅನಿಶ್ಚಿತತೆಯಲ್ಲಿದ್ದುದರಿಂದ, ಶನೆಲ್ ಒಳಗವಚವನ್ನು ಬಹಳ ಕಡಿಮೆ ಬೆಲೆಗೆ ಕೊಂಡುಕೊಂಡಿತು. ಬಟ್ಟೆಯು ಚೆನ್ನಾಗಿ ಹೊಂದಿಕೊಂಡಿತು ಮತ್ತು ಶನೆಲ್‌ರ ವಿನ್ಯಾಸಗಳಿಗೆ ಸೂಕ್ತವಾಯಿತು, ಅವು ಸರಳವಾಗಿದ್ದವು, ಪ್ರಾಯೋಗಿಕವಾಗಿದ್ದವು, ಮತ್ತು ನಂತರದಲ್ಲಿ ಪುರುಷರ ಉಡುಪುಗಳಿಗೆ ಪ್ರೇರಕವಾದವು, ವಿಶೇಷವಾಗಿ 1914ರಲ್ಲಿ ವಿಶ್ವ ಸಮರದ ಸಮಯದಲ್ಲಿ ಸಮವಸ್ತ್ರಗಳು ವ್ಯಾಪಕವಾಗಿ ಬಳಕೆಯಲ್ಲಿದ್ದವು.[] 1915ರಲ್ಲಿ ಆಕೆ ಫ್ಯಾಷನ್ ಫ್ರಾನ್ಸ್‌ನಲ್ಲೆಲ್ಲಾ ಅದರ ಸರಳತೆಗೆ ಪ್ರಸಿದ್ಧಿ ಪಡೆಯಿತು. 1915 ಮತ್ತು 1917ರಲ್ಲಿ, ಶನೆಲ್‌ ಹೆಸರು "ಪ್ರತೀ ಖರೀದಿಸುವವರ ಪಟ್ಟಿಯಲ್ಲಿ ಇರುತ್ತದೆ" ಎಂದು ಹಾರ್ಪರ್ ಬಜಾರ್ ಉಲ್ಲೇಖಿಸಿತು.[] 31 ರೂ ಕ್ಯಾಂಬನ್‌ನಲ್ಲಿರುವ ಅವರ ಮಳಿಗೆಯಲ್ಲಿ ದಿನದ ಸರಳವಾದ ಉಡುಪು-ಮತ್ತು-ಕೋಟು ಮತ್ತು ಕಪ್ಪು ಸಂಜೆಯ ಉಡುಪುಗಳು ಕಸೂತಿ ಪಟ್ಟಿ ಅಥವ ಜೆಟ್ ಕಸೂತಿ ಮಾಡಿದ ಬಲೆಗಳನ್ನು (ರೆಕ್ಕೆಗಳ ಮೆತ್ತೆಗಳು, ತುಪ್ಪುಳ ಮತ್ತು ಪೀಠೋಪಕರಣಗಳ ಮೇಲೆ ಹಾಕುವ ಬೂದು ಮತ್ತು ಹಳದಿ ಕಿತ್ತಳೆ ಮಿಶ್ರ ಬಣ್ಣದ ಲೋಹದ ಬಟ್ಟೆ) ಪೂರ್ವ ವೀಕ್ಷಣೆಗಾಗಿ ಇಟ್ಟಿದ್ದರು.[]

ಕೊಕೊ ಶನೆಲ್ ಅವರು ಅತಿಸೂಕ್ಷ್ಮವಾದ ಫ್ಯಾಷನ್ ವಿನ್ಯಾಸಕಾರರೆಂದು ಗುರುತಿಸಿಕೊಂಡರು.[] 1920ರ ದಶಕದ ಫ್ಯಾಷನ್ ಒಲವನ್ನು ಅನುಸರಿಸಿ, ಶನೆಲ್‍ರವರು ಮಣಿಗಳನ್ನು ಹೊಂದಿದ ಉಡುಪುಗಳನ್ನು ವಿನ್ಯಾಸಗೊಳಿಸಿದರು.[] 1920ರಲ್ಲಿ ತಯಾರಿಸಿದ ಎರಡು ಅಥವಾ ಮೂರು ಪೀಸ್‌ಗಳ ಉಡುಗೆ ಆಧುನಿಕ ಫ್ಯಾಷನ್‌ ಜಗತ್ತಿನಲ್ಲಿ ಇನ್ನೂ ಉಳಿದಿದೆ. ಈ ಉಡುಪನ್ನು "1915ರ ಹಿಂದಿನಂತೆ ಮಧ್ಯಾಹ್ನದ ಮತ್ತು ಸಂಜೆಯ ಹೊಸ ಸಮವಸ್ತ್ರ" ಎಂದು ವಾದಿಸಲಾಯಿತು. 1921ರಲ್ಲಿ ಶನೆಲ್‌ರವರು ಶನೆಲ್ ನಂ .5 ಸುಗಂಧ ದ್ರವ್ಯವನ್ನು ಪರಿಚಯಿಸಿದರು.[] ಅರ್ನೆಸ್ಟ್ ಬಿಯಕ್ಸ್ ಅವರು ಸುಗಂಧವನ್ನು ಕೊಕೊರವರಿಗಾಗಿ ಸೃಷ್ಟಿಸಿದರು ಮತ್ತು ಅವರು ತಮ್ಮ ಅದೃಷ್ಟದ ಅಂಕಿಯಾದ 5ನ್ನು ಹೆಸರಿನ ಜೊತೆ ಸೇರಿಸಿದರು.[] ಸುಗಂಧವು ಯಶಸ್ವಿಯಾಯಿತು. ಅವರ ವೈಶಿಷ್ಟ್ಯತೆಯ ಸುಗಂಧವು ಮೂಢನಂಬಿಕೆಗಳ ಮೇಲಿದ್ದ ಆಕೆಯ ನಂಬಿಕೆಯ ಪ್ರತಿಫಲವಾಗಿತ್ತು. ಅವರು ತಮ್ಮ ಸಂಗ್ರಹವನ್ನು ಐದನೇ ತಿಂಗಳ ಐದನೇ ದಿನ ತೋರಿಸಲು ನಿಶ್ಚಯಿಸಿದರು.[] 1923ರಲ್ಲಿ ಕೊಕೊ "ಸರಳತೆಯೇ ನಿಜವಾದ ಲಾವಣ್ಯಕ್ಕೆ ಆಧಾರ" ಎಂದು ಹಾರ್ಪರ್ಸ್ ಬಜಾರ್‌ ಪತ್ರಿಕೆಗೆ ತಿಳಿಸಿದರು.[]

ಪರ್ಫೂಮ್ಸ್ ಶನೆಲ್: 1920ರ ದಶಕದ ಕೊನೆಯಲ್ಲಿ

[ಬದಲಾಯಿಸಿ]
ಚಿತ್ರ:Chanel No 5.jpg
1921ರಲ್ಲಿ ಪರಿಚಯಿಸಿದ ಶನೆಲ್ ನಂ. 5 - ಕೊಕೊ ಬಹುಮಹಡಿ ಕಟ್ಟಡದಲ್ಲಿರುವ ಪುರಾತನ ಕನ್ನಡಿಯಿಂದ ಪ್ರೇರೆಪಿತವಾದ ಗಾಜಿನ ಮುಚ್ಚಳ.

1924ರಲ್ಲಿ ಸುಗಂಧ ದ್ರವ್ಯಗಳನ್ನು ಮತ್ತು ಸೌಂದರ್ಯದ ಸಾಧನಗಳನ್ನು ತಯಾರಿಸಲು ಮತ್ತು ಮಾರಲು ಪರ್ಫೂಮ್ಸ್ ಶನೆಲ್ [] ಪಿಯರ್ ವರ್ತೈಮರ್ ಅವರಿಂದ ಸ್ಥಾಪಿಸಲ್ಪಟ್ಟಿತು.[] ಥಿಯೋಫೈಲ್ ಬೇಡರ್ ( ಯಶಸ್ವೀ ಫ್ರೆಂಚ್ ಸರಕು ಮಳಿಗೆಯಾದ ಗೆಲರೀಸ್ ಲಫಯೆಟ್‌ನ ಸ್ಥಾಪಕ) ಅವರು ವರ್ತೈಮರ್‌ಗೆ ಕೊಕೊರನ್ನು ಪರಿಚಯಿಸಿದರು.[] ಪರ್ಫೂಮ್ಸ್ ಶನೆಲ್‌ನ 70%ನಷ್ಟು ವರ್ತೈಮರ್, 20%ನಷ್ಟು ಬೇಡರ್ ಮತ್ತು ಉಳಿದ 10%ನಷ್ಟನ್ನು ಕೊಕೊ ಉಳಿಸಿಕೊಂಡರು.[] ಕೊಕೊ ಅವರನ್ನು ಪರ್ಫೂಮ್ಸ್ ಶನೆಲ್‌ನಲ್ಲಿ ಅಲ್ಲದೆ ಅವರ ಫ್ಯಾಷನ್ ಉದ್ಯಮದಲ್ಲೂ ಕಾರ್ಯನಿರ್ವಹಿಸುವಂತೆ ಒತ್ತಾಯಿಸಲಾಯಿತು.[] 1924ರಲ್ಲಿ, ಕೊಕೊ ಅವರು ಕಪ್ಪು ಮತ್ತು ಬಿಳಿಯ ಮುತ್ತಿನ ಓಲೆಗಳನ್ನು ಮೊದಲನೆಯದಾಗಿ ಪರಿಚಯಿಸಿದರು.[] ಆಕೆಯ ಆಟ್ ಕುಟೂರ್ ವ್ಯಾಪಾರದ ಯಶಸ್ಸಿನ ಜೊತೆಗೆ, ಕೊಕೊ ಅವರ "ಸಾಮಾಜಿಕ ಇಚ್ಛೆಗಳನ್ನು ಮತ್ತು ವೈಯಕ್ತಿಕ ಕಥೆಗಳನ್ನು" ವಿಸ್ತರಿಸಿದರು.[] ಅವರ ಜೀವನದ ಹೊಸ ಪ್ರಣಯ ವೆಸ್ಟ್‌ಮಿನ್‌ಸ್ಟರ್‌ನ ಡ್ಯೂಕ್ ಜೊತೆ ಆರಂಭವಾಗಿತ್ತು.[] 1925ರಲ್ಲಿ ವೈಶಿಷ್ಟ್ಯಪೂರ್ಣ ಉಣ್ಣೆಯ ಕೋಟನ್ನು ಪರಿಚಯಿಸಿದರು ಮತ್ತು 1926ರಲ್ಲಿ, ಸ್ಕಾಟ್ಲ್ಯಾಂಡ್‌ನ ಭೇಟಿಗಳಿಂದ ಪ್ರಭಾವಿತರಾಗಿ "ಚಿಕ್ಕ ಕಪ್ಪು ಉಡುಪು"ನ್ನು ಮತ್ತು ಒರಟು ಉಣ್ಣೆ ಬಟ್ಟೆಯನ್ನು ಪರಿಚಯಿಸಿದರು. ಸ್ವಲ್ಪ ಸಮಯದಲ್ಲೇ, ಕೊಕೊರವರು ಲೂವ್ರೆ ಹತ್ತಿರ ಒಂದು ಮಳಿಗೆಯನ್ನು ಪ್ರಾರಂಭಿಸಿದರು.[]

ಕುಟೂರ್ ಶನೆಲ್ ಮತ್ತು ಪರ್ಫೂಮ್ಸ್ ಶನೆಲ್ ಯಶಸ್ಸನ್ನು ಗಳಿಸುತ್ತಿರುವಂತೆ, ಕೊಕೊ ಮತ್ತು ಪಿಯರ್ ಸಂಬಂಧವು ಹಾಳಾಗತೊಡಗಿತು.[] ಅವರು ಪಿಯರ್ ವರ್ತೈಮರ್ ಜೊತೆಯ ಪಾಲುಗಾರಿಕೆಯಿಂದ ಕೋಪಗೊಂಡರು ಮತ್ತು ಅವರು 10%ಗೂ ಹೆಚ್ಚಾದ ಲಾಭ ಗಳಿಕೆಗೆ ಅರ್ಹರಾಗಿರುವರೆಂದು ನಂಬಿದ್ದರು, ಮತ್ತು ವರ್ತೈಮರ್ ಅವರುಗಳು ವೈಯಕ್ತಿಕ ಗಳಿಕೆಗಾಗಿ ತಮ್ಮ ಪ್ರತಿಭೆಯನ್ನು ದುಡಿಸಿಕೊಳ್ಳುತ್ತಿದ್ದಾರೆಂದುಕೊಂಡರು.[] ವರ್ತೈಮರ್ ಕೊಕೊಗೆ ಅವರ ಸಾಹಸೋದ್ಯಮಕ್ಕೆ ಹಣ ಸಹಾಯ ಮಾಡಿದ್ದರೆಂದು ನೆನಪಿಸಿದರು, ಮತ್ತು ಅವರು ಕೊಕೊರನ್ನು ಶ್ರೀಮಂತ ಮಹಿಳೆಯನ್ನಾಗಿ ಮಾಡಿದ್ದನ್ನು ಸ್ಮರಿಸಿದರು.[]

ಕೊಕೊರವರು ರೆನೆ ಡಿ ಶಾಂಬರ್ನ್ ಎಂಬ ನ್ಯಾಯವಾದಿಯನ್ನು ವರ್ತೈಮರ್ ಅವರುಗಳ ಜೊತೆ ನಿಬಂಧನೆಗಳನ್ನು ಮರುಸಂಧಾನ ಮಾಡುವುದಕ್ಕಾಗಿ ನೇಮಿಸಿಕೊಂಡರು,[] ಆದರೆ ಅದು ವಿಫಲವಾಯಿತು.

ಶನೆಲ್ ಮತ್ತು ನಾಝಿ ಪಾಲುಗಾರಿಕೆ: 1930ರ ದಶಕದಿಂದ 1950ರ ದಶಕದವರೆಗೆ

[ಬದಲಾಯಿಸಿ]

ಶನೆಲ್‌ರವರಿಂದ ಸಂಜೆಯ ಫ್ಯಾಷನ್ ಉಡುಪುಗಳು ನೀಳವಾದ ಸ್ತ್ರೀ ಶೈಲಿಯಲ್ಲಿ ರೂಪುಗೊಂಡವು.[] ಬೇಸಿಗೆಕಾಲದ ಉಡುಪುಗಳು ವಿಭಿನ್ನವಾದ ಮಿನುಗಿನ ಸೋಂಕಿತ್ತು (ಉದಾಹರಣೆಗೆ, ಕಪಟದ ಹರಳಿನ ಪಟ್ಟಿಗಳು ಮತ್ತು ಬೆಳ್ಳಿಯ ಸಣ್ಣತೂತುಗಳು).[] 1937ರಲ್ಲಿ, ಕೊಕೊ ಪುಟ್ಟ ಮಹಿಳೆಯರಿಗೆ ಉಡುಪುಗಳ ಪಂಕ್ತಿಯನ್ನು ವಿನ್ಯಾಸಗೊಳಿಸಿದರು.[] 1930ರ ದಶಕದುದ್ದಕ್ಕೂ, ಎಲ್ಸ ಶಿಯಪರೆಲ್ಲಿಯವರು ಶನೆಲ್ ಹೌಸ್‌ನೊಂದಿಗೆ ಬಲವಾಗಿ ಸ್ಪರ್ಧೆ ಇತ್ತು, ಆದರೆ ಇದು ಅಲ್ಪ ಕಾಲದ ಪ್ರತಿಸ್ಪರ್ಧೆಯಾಗಿತ್ತು. 1932ರಲ್ಲಿ ಶನೆಲ್ ಪ್ರಥಮ ಬಾರಿಗೆ ಒಡವೆಗಳ ಪ್ರದರ್ಶನವನ್ನು ವಜ್ರಕ್ಕೆ ಮೀಸಲಿಟ್ಟರು. 1993ರಲ್ಲಿ, ಶನೆಲ್‌ರವರು "ಕಾಮೆಟ್" ಮತ್ತು "ಫೌಂಟನ್" ಸರಗಳನ್ನೂ ಒಳಗೊಂಡಂತೆ ಹಲವಾರು ವಿನ್ಯಾಸಗಳನ್ನು ಮರು-ಪರಿಚಯಿಸಿದರು. 1939ರಲ್ಲಿ, ವಿಶ್ವ ಸಮರ II ಆರಂಭವಾದಾಗ, ಕೊಕೊ ಶನೆಲ್‌ರವರು ನಿವೃತ್ತಿ ಹೊಂದಿದರು ಮತ್ತು ಪ್ಯಾರಿಸ್‌ನ ಹೋಟೆಲ್ ರಿಟ್ಝ್‌ಗೆ ತಮ್ಮ ಸಂಗಾತಿಯಾದ ನಾಝಿ ಅಧಿಕಾರಿ ಹಾನ್ಸ್ ಗಂಥರ್ ವಾನ್ ಡಿಂಕ್ಲೇಜ್ ಅವರೊಂದಿಗೆ ತೆರಳಿದರು.[][][] ಈಗಾಗಲೇ ಇರುವ ಅವರ ಮಳಿಗೆಗಳಲ್ಲಿ ಸುಗಂಧ ದ್ರವ್ಯಗಳು ಮತ್ತು ಉಪಸಾಧನಗಳು ಮಾರಾಟವಾಗುತ್ತಿದ್ದವು.

1940ರಲ್ಲಿ, ಫ್ರಾನ್ಸ್ ಅಡೊಲ್ಫ್ ಹಿಟ್ಲರ್‌ನ ನಾಝಿ ಜರ್ಮನಿಯವರ ಹಿಡಿತದಲ್ಲಿ ಬಿದ್ದಾಗ, ನಾಝಿಗಳು ಶ್ರೀಮಂತಿಕೆಯ ಮತ್ತು ವಿಶಿಷ್ಟವಾದ ಹೋಟೆಲ್ ಮೆರಿಸ್ (ಲಿ ಮೆರಿಸ್) ಅನ್ನು ಕಟ್ಟಿದರು, ರೂಡು ರಿವೋಲಿಯಲ್ಲಿ ಅವರ ಫ್ರೆಂಚ್ ಪ್ರಧಾನ ಕೇಂದ್ರವಾದ ಲೂವ್ರೆಯ ಎದುರಿಗೆ ಸ್ಥಾಪಿತವಾಯಿತು. ಇದು ಕಾಕತಾಳೀಯವಾಗಿ ಶನೆಲ್‌ರವರ ರೂ ಕ್ಯಾಂಬನ್ ಸ್ಥಳಕ್ಕೆ (ಮೂಲೆಯ ಬಲಭಾಗದ ಹತ್ತಿರ) ಹತ್ತಿರವಾಗಿತ್ತು.[] 1940ರಲ್ಲಿ, ಪಿಯರ್ ವರ್ತೈಮರ್ ಮತ್ತು ಅವರ ಸಂಸಾರವು ಯುನೈಟೆಡ್ ಸ್ಟೇಟ್ಸ್‌ಗೆ ಸ್ಥಳಾಂತರಗೊಂಡಿತು, ಮತ್ತು ಕೊಕೊರವರು ಪಾರ್ಫಮ್ಸ್ ಶನೆಲ್‌ನ ನಿಯಂತ್ರಣ ತೆಗೆದುಕೊಳ್ಳುವ ಮುಂಚೆ, ವರ್ತೈಮರ್‌ರವರು ಕಂಪನಿಗೆ "ಆರ್ಯನ್ ಪ್ರಾಕ್ಸಿಯನ್ನು ಮಾಡಿದರು.[] ಕೊಕೊರವರು ಜರ್ಮನ್‌ರ ಜೊತೆ ಒಳ್ಳೆಯ ಸಂಬಂಧವನ್ನು ಹೊಂದಿದ್ದರು ಎಂಬ ವದಂತಿಯಿತ್ತು.[] ಶನೆಲ್‌ರವರ ಜೀವನಚರಿತ್ರೆ ಬರೆದ ಎಡ್ಮಂಡ್ ಚಾರ್ಲ್ಸ್-ರೂ ಹೇಳುವಂತೆ ಜರ್ಮನ್ ಇಂಟಲಿಜೆನ್ಸ್ ಆಕೆಯನ್ನು ರಹಸ್ಯ ಶಾಂತಿದೂತರಾಗಿ ವಿನ್ಸ್ಟನ್ ಚರ್ಚಿಲ್‌ರನ್ನು ಭೇಟಿ ಕಳುಹಿಸಿದ್ದರು. ಫ್ರಾನ್ಸ್‌ಗೆ ಸ್ವಾತಂತ್ರ್ಯ ದೊರೆತ ತಕ್ಷಣವೇ ಕೊಕೊ ಶನೆಲ್‌ರವರನ್ನು ಬಂಧಿಸಲಾಯಿತು ಮತ್ತು ಜರ್ಮನಿಗೆ ಕೆಡುಕನ್ನು ಬಯಸಿದ್ದಕ್ಕಾಗಿ ಆರೋಪಿಸಿದರು, ಆದರೆ ಅವರ ಪರವಾಗಿ ಚರ್ಚಿಲ್ ಮಧ್ಯೆ ಪ್ರವೇಶಿಸಿದರು ಮತ್ತು ಶನೆಲ್‌ರನ್ನು ಬಿಡುಗಡೆ ಮಾಡಿದರು."[] ನಾಝಿಗಳ ಸಾಮ್ರಾಜ್ಯ ಪತನದ ನಂತರ ಫ್ರಾನ್ಸ್ ಯಾವಾಗ ಸ್ವಾತಂತ್ರ್ಯವಾಯಿತೋ, ಆಗ ಫ್ರೆಂಚ್ ಜನಗಳು ನಾಝಿಗಳ ಜೊತೆ ಸಹಕರಿಸಿದ್ದರೆಂದು ನಂಬಲಾದ ಫ್ರೆಂಚ್ ಮಹಿಳೆಯರಿಗೆ ಶಿಕ್ಷೆ ವಿಧಿಸಿದರು. ಅವರುಗಳನ್ನು ಫ್ರೆಂಚ್‌ನಲ್ಲಿ "ಕೊಲಾಬರೇಟರ್ಸ್ ಹಾರಿಝಾಂಟಲೇಸ್" ಅಥವಾ ಇಂಗ್ಲಿಷ್‌ನಲ್ಲಿ "ಅವರ ಸಹೋದ್ಯಮಿಗಳ ಬೆನ್ನಲ್ಲಿ" ಎಂದು ಕರೆಯುತ್ತಾರೆ. ಕೊಕೊ ಶನೆಲ್‌ರವರು ಅಂತಹ ವಂದಂತಿಗಳಿಗೆ ವಿಷಯವಾದರು ಹಾಗೂ ಗುರಿಯಾದರು, ಮತ್ತು ಸಮರದ ನಂತರ ತಕ್ಷಣವೇ ಸ್ವಿಟ್ಝರ್ಲ್ಯಾಂಡ್‌ಗೆ ತೆರಳಿದರು.[][]

ಕೊಕೊರವರ ಗೈರುಹಾಜರಿಯಲ್ಲಿ, ಪಿಯರ್ ವರ್ತೈಮರ್ ಅವರು ವರ್ತೈಮರ್ ಕುಟುಂಬದ ಹಿಡುವಳಿಗಳನ್ನು ನಿಯಂತ್ರಣದಲ್ಲಿಡಲು ಪ್ಯಾರಿಸ್‌ಗೆ ವಾಪಸ್ಸಾದರು.[] ಹಗೆಯಿಂದ, ಕೊಕೊರವರು ತಮ್ಮದೇ ಆದ ಸುಗಂಧ ದ್ರವ್ಯಗಳ ಸಂಗ್ರಹವನ್ನು ಸ್ಥಾಪಿಸಿದರು. ವರ್ತೈಮರ್ ತಮ್ಮ ಕಾನೂನು ಹಕ್ಕುಗಳನ್ನು ಮೀರಿರುವುದಾಗಿ ಭಾವಿಸಿದರು, ಆದರೆ ಅವರಿಗೆ ಕಾನೂನು ಪ್ರಕಾರವಾದ ಹೋರಾಟ ಬೇಡವಾಗಿತ್ತು ಮತ್ತು ಕೊಕೊಗೆ $400,000 ಯುಎಸ್‌ಡಿಯಷ್ಟು ಹಣ ಕೊಟ್ಟು, ಶನೆಲ್‌ಗೆ ಎಲ್ಲಾ ಉತ್ಪನ್ನಗಳಿಂದ 2%ನಷ್ಟು ಗೌರವ ಧನ, ಮತ್ತು ಅವರದೇ ಸುಗಂಧ ದ್ರವ್ಯಗಳನ್ನು ಸ್ವಿಟ್ಝರ್ಲ್ಯಾಂಡ್‌‌ನಲ್ಲಿ ಮಾರಾಟ ಮಾಡಲು ಮಿತವಾದ ಅಧಿಕಾರಗಳನ್ನು ಕೊಟ್ಟು ಬಗೆಹರಿಸಿಕೊಂಡರು.[] ಕೊಕೊರವರು ಒಪ್ಪಂದದ ನಂತರ ಸುಗಂಧ ದ್ರವ್ಯ ಮಾಡುವುದನ್ನು ನಿಲ್ಲಿಸಿದರು. ಅವರು ತಮ್ಮ ಸಂಪೂರ್ಣ ಶನೆಲ್ ಸುಗಂಧ ದ್ರವ್ಯದ ಹೆಸರನ್ನು ವರ್ತೈಮರ್‌ಗಳಿಗೆ ಮಾರಿದರು, ಇದಕ್ಕೆ ಬದಲಾಗಿ ತಿಂಗಳ ಸಂಬಳ ಪಡೆದರು. ಆ ಸಂಬಳವು ಅವರ ಮತ್ತು ಅವರ ಸಂಗಾತಿಯಾದ ವಾನ್ ಡಿಂಕ್ಲೇಜ್‌ಗೆ ಆಧಾರವಾಯಿತು.[]

ಶನೆಲ್‌ರ ಪುನರಾಗಮನ: 1950ರ ದಶಕದಿಂದ 1970ರ ದಶಕದವರೆಗೆ

[ಬದಲಾಯಿಸಿ]

1953ರಲ್ಲಿ ಶನೆಲ್ [] ತಮ್ಮ ಫ್ಯಾಷನ್ ಉದ್ಯಮದಲ್ಲಿದ್ದ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು "ನ್ಯೂ ಲುಕ್‌"ನ ಮನ್ನಣೆ ಪಡೆದ ಕ್ರಿಶ್ಚಿಯನ್ ಡಿಯೋರ್ ಆಕ್ರಮಿಸಿರುವುದನ್ನು ನೋಡಲು ಪ್ಯಾರಿಸ್‌ಗೆ ಹಿಂದಿರುಗಿದರು. ಡಿಯೋರ್‌ರವರ "ನ್ಯೂ ಲುಕ್" ಒಂದೇ ಅತೀ ಮಹತ್ವದ ಇಡೀ 20ನೇ ಶತಮಾನದಲ್ಲಿಯಾದ ಶೈಲಿಗಳ ನಡುವೆಯ ನಿರ್ಗಮನ; 1940ರ ದಶಕದ ಕಡೆಯಲ್ಲಿ ಎರಡನೇ ವಿಶ್ವ ಸಮರದ ಕೊನೆಯಲ್ಲಿ ಬಹುಶಃ ಹೊಂದಿಕೆಯಾಗುವಂಥಹ ಬಿರುಕಿದು. ಕೊಕೊ ಶನೆಲ್‌ರವರು ಮೇಧಾವಿಯಾಗಿ ಸ್ಪರ್ಧೆಗೆ ಉತ್ತರ ಕೊಟ್ಟರು; ಅವರು ಫ್ಯಾಷನ್ ಉದ್ಯಮವು ಬದಲಾಗಿದೆಯೆಂದು ಅರಿತರು ಮತ್ತು ಅವರು ಅದಕ್ಕೆ ಹೊಂದಿಕೊಳ್ಳಬೇಕಿತ್ತು.[] ಮತ್ತೆ ಪ್ರತಿಸ್ಪರ್ಧಿಯಾಗಬೇಕೆಂದರೆ ಅತ್ಯಂತ ಹೆಚ್ಚಿನ ಬೆಲೆ ತೆರೆಬೇಕಾಗಿತ್ತು; ಶನೆಲ್‌ರವರು ಮಹತ್ವದ ಉಪಸ್ಥಿತಿಯನ್ನು ಉತ್ತಮ ಉಡುಪುಗಳು, ಪ್ರೆಟ್-ಎ-ಪೋರ್ಟರ್, ಒಡವೆಗಳು ಮತ್ತು ಸುಗಂಧ ದ್ರವ್ಯಗಳಲ್ಲಿ ತೋರಿಸಬೇಕಿತ್ತು. ಕೊಕೊ ತಮ್ಮ ಸ್ವಾಭಿಮಾನವನ್ನು ನುಂಗಿಕೊಂಡರು ಮತ್ತು ಪಿಯರ್‌ರವರನ್ನು ಮತ್ತೊಮ್ಮೆ ವ್ಯವಹಾರದ ಸಲಹೆಗಳು ಮತ್ತು ಹಣಕಾಸಿನ ಸಹಾಯಕ್ಕಾಗಿ ಕೋರಿದರು.[] ಇದಕ್ಕೆ ಬದಲಾಗಿ, ಪಿಯರ್‌ರವರು "ಶನೆಲ್" ಹೆಸರಿರುವ ಎಲ್ಲಾ ಉತ್ಪನ್ನ ಸಂಪೂರ್ಣ ಹಕ್ಕುಗಳ ಸಂಧಾನ ಮಾಡಿದರು.[] ಆದರೆ ಅವರ ಪುನಃ ಚೇತರಿಸಿಕೊಂಡ ಸಹಭಾಗಿತ್ವ ಶನೆಲ್ ಹೆಸರಿನಿಂದ ಬಹು ಲಾಭದಾಯಕವಾಯಿತು, ಶನೆಲ್‌ರ ಗುರಿತಪ್ಪದ ಫ್ಯಾಷನ್ ತಿಳುವಳಿಕೆ ಒಂದೇ, ಫ್ಯಾಷನ್ ಉದ್ಯಮದಲ್ಲಿ ಅತೀ ಪ್ರತಿಷ್ಠೆಯ ಪಟ್ಟಿಯಾಯಿತು.[] ತಮ್ಮ ವ್ಯಾಪಾರೀ ಗುರುತಿಗಾಗಿ ಮತ್ತು 1953ರಲ್ಲಿ, ಕೊಕೊರವರು ಆಭರಣಕಾರ ರಾಬರ್ಟ್ ಗೂಸೆನ್ಸ್ ಜೊತೆಗೂಡಿ ಅವರ ಸುಂದರವಾದ ಫ್ಯಾಷನ್ ಶನೆಲ್ ಒಡವೆಗಳ ಸಂಕೇತವಾದ ವಿನ್ಯಾಸವನ್ನು ಮಾಡಿದರು. ಉದಾಹರಣೆಗೆ, ಅವರ ಮರು-ಪರಿಚಯಿಸಿದ ವೈಶಿಷ್ಟ್ಯವಾದ "ಶನೆಲ್ ಉಡುಪು"ನ (ಉಣ್ಣೆ ಬಟ್ಟೆ ಹೊಲೆದ ಮೇಲಂಗಿ ಮತ್ತು ಅದಕ್ಕೆ ಹೊಂದುವ ಲಂಗ) ಜೊತೆ ಉದ್ದದ ಕಪ್ಪು ಮತ್ತು ಬಿಳುಪಿನ ಮುತ್ತಿನ ಪಟ್ಟಿಯೊಂದಿಗೆ ಉಡುಪನ್ನು ಸುಂದರವಾಗಿ ಮಾಡಿ ಅದೇ ಸಮಯದಲ್ಲಿ ಸ್ತ್ರೀ ಸಹಜಗುಣದ ದರ್ಜೆಯನ್ನೂ ಸೇರಿಸಿ ವಿನ್ಯಾಸಗೊಳಿಸಲಾಗಿತ್ತು."[] 1955ರ ಫೆಬ್ರವರಿಯಲ್ಲಿ ಅವರು ಶನೆಲ್ ಚಿನ್ನದ ಅಥವಾ ಲೋಹದ ಸರ- ಪಟ್ಟಿ ಮತ್ತು ಪದರಗಳನ್ನೊಳಗೊಂಡ ಚರ್ಮದ ಕೈಚೀಲಗಳನ್ನು ಪರಿಚಯಿಸಿದರು. ಇದರ ಸರಣಿ ಪರಿಚಯಿಸಿದ ದಿನ 2/55, ಆಂತರಿಕ "ಉಪಾಧಿ"ಯಾಗಿ ಪದರಗಳನ್ನೊಳಗೊಂಡ ಕೈಚೀಲಗಳ ಸರಣಿಗೆ ಹೆಸರಾಯಿತು. ವಿಶ್ವದಾದ್ಯಂತ ಈಗಲೂ "2/55" ಕೈಚೀಲಗಳೆಂದು ಹೆಸರಾಗಿದೆ ಮತ್ತು "ಶನೆಲ್ ಉಡುಪಿ"ನಂತೆ ಇದೂ ಫ್ಯಾಷನ್ ಜಗತ್ತಿನಿಂದ ಯಾವತ್ತೂ ಹೊರ ಬಿದ್ದಿಲ್ಲ. ಬಹುತೇಕ ಕೊಕೊ ಶನೆಲ್‌ರ ಎಲ್ಲಾ ವಿನ್ಯಾಸಗಳು, ಗಮನಾರ್ಹವಾಗಿ ಎಂದಿಗೂ ಹಳತಾಗದಂತಹ ವಿಶೇಷ ಗುಣ ಹೊಂದಿರುತ್ತವೆ, ಫ್ಯಾಷನ್ ಜಗತ್ತಿನಲ್ಲಿ ಈ ಗುಣ ಎಲ್ಲಾ ವಿನ್ಯಾಸಗಳಲ್ಲೂ ಅನನ್ಯವಾಗಿದೆ.[] ಐವತ್ತರ ದಶಕದುದ್ದಕ್ಕೂ, ಆಕೆಯ ಅಭಿರುಚಿಯು ಯಶಸ್ಸಿನ ಅನ್ವೇಷಣೆಯ ದಾರಿಯಲ್ಲಿಯೇ ಸಾಗಿತು, ಹೊಸ ಕ್ಷೇತ್ರಗಳಲ್ಲಿ ಅಡಿಯಿಟ್ಟರೂ ಯಶಸ್ಸು ಕಂಡರು. ಅವರ ಮೊದಲನೆಯ ಸಾಹಸವಾದ ಪುರುಷರ ಸುಗಂಧ ದ್ರವ್ಯಗಳೂ ಕೂಡ ಬಹುಕಾಲದ ಯಶಸ್ಸನ್ನು ಕಂಡಿತು, ಶನೆಲ್‌ನ ಗಂಡಸರ ಈ ಡಿ ಟಾಯ್ಲೆಟ್, ಪೋರ್ ಮಾನ್ಸಿಯೆ ("ಗಂಡಸರ ಸುವಾಸನಾ ದ್ರವ್ಯ" ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿವೆ), ಬಹುಕಾಲದಿಂದಿವೆ ಮತ್ತು ಈಗಲೂ ಮೊದಲನೆಯ ಗಂಡಸರ ಸುಗಂಧ ದ್ರವ್ಯವಾಗಿ ಉಳಿದಿದೆ, ಇದು ಹೊಸ ಮಾರುಕಟ್ಟೆಯಲ್ಲಿ ಬಂದಿರುವುದಕ್ಕೆ ಒಳ್ಳೆಯ ಪ್ರತಿಕ್ರಿಯೆ ಇದೆ. ಶನೆಲ್ ಮತ್ತು ಆಕೆಯ ವಸಂತ ಋತುವಿನ ಸಂಗ್ರಹಣೆಯು ಫ್ಯಾಷನ್ ಆಸ್ಕರ್ ಅನ್ನು 1957ರ ಡಲ್ಲಾಸ್‌ನಲ್ಲಿ ನಡೆದ ಫ್ಯಾಷನ್ ಅವಾರ್ಡ್ಸ್‌ನಲ್ಲಿ ಪಡೆಯಿತು. ಸುಗಂಧ ದ್ರವ್ಯಗಳ ವ್ಯಾಪಾರದ ಬೇಡರ್‌ನ 20% ಪಾಲನ್ನು ಪಿಯರ್‌ರವರು ಖರೀದಿಸಿದರು, ಇದರಿಂದ ಅವರ ಕುಟುಂಬಕ್ಕೆ 90% ಸಿಕ್ಕಂತಾಯಿತು.[] 1965ರಲ್ಲಿ ಪಿಯರ್‌ರವರ ಮಗನಾದ ಜಾಕೆಸ್ ವರ್ತೈಮರ್ ತನ್ನ ತಂದೆಯ ಸ್ಥಾನವನ್ನು ತುಂಬಿದನು.[] ಕೊಕೊರವರ ವಕೀಲರಾದ ಶ್ಯಾಂಬರ್ನ್ ಅವರು ಈ ಹೊಸ ಸಂಬಂಧವನ್ನು "ಆಕೆಯ ಮೇಲೆ ನಂಬಿಕೆ ಇಟ್ಟು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಭಾವನೆಯಿದ್ದರೂ ವ್ಯಾಪಾರಿಯ ಮನಸ್ಸನ್ನು ಅದು ಆಧರಿಸಿದೆ" ಎಂದರು.[] ಅವರು ಫೋರ್ಬ್ಸ್‌ ಗೆ ಹೀಗೆ ಹೇಳಿದರು, "ಪಿಯರ್ ಅವರು ಪ್ಯಾರಿಸ್‌ಗೆ ಹೆಮ್ಮೆ ಮತ್ತು ಸಂತಸಭರಿತರಾಗಿ ಹಿಂದಿರುಗಿದರು [ಅವರಲ್ಲಿದ್ದ ಒಂದು ಕುದುರೆಯು 1956ರ ಇಂಗ್ಲಿಷ್ ಡರ್ಬಿಯನ್ನು ಗೆದ್ದ ನಂತರ]. ಅವರು ಕೊಕೊ ಬಳಿ ಆತುರವಾಗಿ ಅಭಿನಂದನೆಗಳನ್ನು ಮತ್ತು ಹೊಗಳಿಕೆಯನ್ನು ಎದುರು ನೋಡುತ್ತ ಬಂದರು. ಆದರೆ, ಆಕೆ ಅವರ ಸಾಮೀಪ್ಯವನ್ನು ನಿರಾಕರಿಸಿದ್ದಲ್ಲದೇ ತಮ್ಮ ಜೀವನದುದ್ದಕ್ಕೂ ಅವರ ಕುರಿತು ಅಸಂತುಷ್ಟರಾಗಿದ್ದರು."[]

ಗೇಬ್ರಿಯಲ್ "ಕೊಕೊ" ಶನೆಲ್‌‌ರವರು 1971ರ ಜನವರಿ 10ರಂದು ತಮ್ಮ 87ನೆಯ ವಯಸ್ಸಿನಲ್ಲಿ ನಿಧನರಾದರು.[] ಅವರು ನಿಧನ ಹೊಂದುವ ಸಮಯದಲ್ಲಿ ಕೂಡ "ವಿನ್ಯಾಸಗೊಳಿಸುತ್ತಿದ್ದರು, ಇನ್ನೂ ಕೆಲಸ ಮಾಡುತ್ತಿದ್ದರು" .[] ಉದಾಹರಣೆಗೆ, ಪಿರಯ್ ಕಾರ್ಡಿನ್ ನಂತರದಲ್ಲಿ ಆಕೆಯು ಒಲಂಪಿಕ್ ಏರ್‌ವೇಸ್‌ನ ವಿಮಾನದ ಪರಿಚಾರಕರಿಗೆ ಸಮವಸ್ತ್ರಗಳನ್ನು (1966–1969) ವಿನ್ಯಾಸ ಮಾಡಿದರು, ಆಗ ಒಲಂಪಿಕ್ ಏರ್‌ವೇಸ್ ಆಗಿನ ಅತ್ಯಂತ ಐಷಾರಾಮಿ ವಿಮಾನ ವಾಹಕಗಳಲ್ಲೊಂದಾಗಿತ್ತು, ಇದು ಗ್ರೀಕ್ ಹಡಗುಗಳ-ಭಾರೀ ಉದ್ಯಮಿ ಅರಿಸ್ಟಾಟಲ್ ಒನಸಿಸ್ ಒಡೆತನದಲ್ಲಿತ್ತು. ಆಕೆಯ ನಿಧನದ ನಂತರ, ಸಂಸ್ಥೆಯ ಒಡೆತನವನ್ನು ಯುವಾನ್ ಡುಡಲ್‌, ಜೀನ್ ಕ್ಯಾಝುಬಾನ್ ಮತ್ತು ಫಿಲಿಪ್ ಗುಬೂರ್ಜ್‌ರವರಿಗೆ ಒಪ್ಪಿಸಲಾಯಿತು.[] ಈ ಹೌಸ್ ಸಾಧಾರಣವಾದ ಯಶಸ್ಸನ್ನು ಕಾಣುತ್ತಿತ್ತು, ಮತ್ತು ಜಾಕ್ವೆ ವರ್ತೈಮರ್ ಸಂಪೂರ್ಣ ಹೌಸ್ ಆಫ್ ಶನೆಲ್‌ ಅನ್ನು ಕೊಂಡುಕೊಂಡರು.[][] ಅವರ ಒಡೆತನದ ಸಮಯದಲ್ಲಿ ವಿಮರ್ಶಕರು ಹೀಗೆಂದರು, ಅವರ ಆಸಕ್ತಿ ಕುದುರೆ ಸಾಕಣೆ ಮೇಲಿತ್ತೇ ಹೊರತು, ಸಂಸ್ಥೆಗೆ ಹೆಚ್ಚು ಗಮನ ಕೊಡಲೇ ಇಲ್ಲ.[] 1974ರಲ್ಲಿ, ಹೌಸ್ ಆಫ್ ಶನೆಲ್ ಕ್ರಿಸ್ಟಾಲ್ ಈ ಡಿ ಟಾಯ್ಲೆಟ್ ಅನ್ನು ಪರಿಚಯಿಸಿದರು, ಕೊಕೊ ಶನೆಲ್‌ರವರು ಬದುಕಿದ್ದಾಗ ಇದನ್ನು ವಿನ್ಯಾಸ ಮಾಡಲಾಗಿತ್ತು. 1978ರಲ್ಲಿ, ಅವರಿಲ್ಲದ ಮೊದಲನೆಯ ಉತ್ತಮ ಉಡುಪುಗಳ ಪ್ರದರ್ಶನ ನಡೆಯಿತು, ಪ್ರೆಟ್-ಎ-ಪೋರ್ಟರ್ ಸರಣಿ ಮತ್ತು ವಿಶ್ವದಾದ್ಯಂತ ಉಪಸಾಧಕಗಳ ವಿತರಣೆ ನಡೆಯಿತು.

ಶನೆಲ್ ನಂ. 5: ದುರ್ಬಲಗೊಳ್ಳುತ್ತಿರುವ ಲಾಂಛನವನ್ನು ಪುನಶ್ಚೈತನ್ಯಗೊಳಿಸುವುದು ಹೇಗೆ

[ಬದಲಾಯಿಸಿ]

1974ರಲ್ಲಿ, ಜಾಕ್ವೆ ವರ್ತೈಮರ್‌ ಮಗನಾದ ಎಲೇನ್ ವರ್ತೈಮರ್ ಅವರು ಅಧಿಕಾರ ವಹಿಸಿಕೊಂಡರು.[][] ಯು.ಎಸ್.ನಲ್ಲಿ ಆಗ ಶನೆಲ್ ನಂ. 5ನ್ನು ಗತಕಾಲದ ಸುಗಂಧ ದ್ರವ್ಯದಂತೆ ಕಾಣುತ್ತಿದ್ದರು.[] ಎಲೇನ್‌ರವರು ಸುಗಂಧ ದ್ರವ್ಯಗಳ ಮಾರುಕಟ್ಟೆಯನ್ನು 18,000ರಿಂದ 12,000ಕ್ಕೆ ಇಳಿಸಿ ಶನೆಲ್ ನಂ. 5ರ ಮಾರಾಟವನ್ನು ನವೀಕರಿಸಿದರು. ಅವರು ಸುಗಂಧ ದ್ರವ್ಯಗಳನ್ನು ಔಷಧದಂಗಡಿಗಳ ಕಪಾಟಿನಿಂದ ತೆಗೆಸಿ, ಮತ್ತು ಶನೆಲ್ ಪ್ರಸಾಧನಗಳ ಜಾಹೀರಾತಿನ ಮೇಲೆ ಮಿಲಿಯನ್ ಡಾಲರ್‌ಗಳಷ್ಟು ಸುರಿದರು. ಇದರಿಂದ ನಂ. 5ಗೆ ಅಸಾಧಾರಣವಾದ ಅಭಾವದ ಅರಿವು ಮತ್ತು ಉತ್ಕೃಷ್ಟತೆಯನ್ನು ಖಚಿತಪಡಿಸಿಕೊಂಡರು, ಮತ್ತು ಸುಗಂಧ ದ್ರವ್ಯಕ್ಕಾಗಿ ಹೆಚ್ಚಿನ ಬೇಡಿಕೆ ಬಂದು ಮಾರಾಟಗಳು ಆಕಾಶದೆತ್ತರಕ್ಕೇರಿದವು.[] ತಮ್ಮ ಲಾಂಛನವನ್ನು ಬಹು ಎತ್ತರಕ್ಕೆ ಕೊಂಡೊಯ್ಯಬಹುದಾದ ಒಬ್ಬ ಹೊಸ ವಿನ್ಯಾಸಕಾರರನ್ನು ಹುಡುಕುತ್ತಿದ್ದರು, ಅವರು ಕಾರ್ಲ್ ಲೇಜರ್ಫೆಲ್ಡ್‌ರನ್ನು ಖ್ಲೊ ಒಪ್ಪಂದವನ್ನು ಮುರಿದು ಫ್ಯಾಶನ್ ಹೌಸ್ ಅನ್ನು ತೊರೆಯುವುದಕ್ಕಾಗಿ ಮನವೊಲಿಸುತ್ತಿದ್ದರು.

ಕೊಕೊ ನಂತರದಿಂದ ಇಲ್ಲಿಯವರೆಗೆ

[ಬದಲಾಯಿಸಿ]

ಲೇಜರ್ಫೆಲ್ಡ್‌‌ನ ಆಗಮನ

[ಬದಲಾಯಿಸಿ]

1981ರಲ್ಲಿ, ಶನೆಲ್ ಪುರುಷರಿಗಾಗಿ ಆಂಟಿಯಸ್ ಎಂಬ ಒಂದು ಹೊಸ ಈ ಡಿ ಟಾಯ್ಲೆಟ್ ಅನ್ನು ಪ್ರಾರಂಭಿಸಿದರು. 1983ರಲ್ಲಿ, ಲೇಜರ್ಫೆಲ್ಡ್‌‌ ಅವರು ಶನೆಲ್‌ನ ವಿನ್ಯಾಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.[] ಅವರು ಶನೆಲ್‌ನ ಹಳೆಯ ಸರಣಿಗಳನ್ನು ಚಿಕ್ಕದಾದ ಮತ್ತು ಆಕರ್ಷಕ ವಿನ್ಯಾಸಗಳಿಂದ ಬದಲಿಸಿದರು. 1980ರ ದಶಕದ ಸಮಯದಲ್ಲಿ, 40ಕ್ಕೂ ಹೆಚ್ಚು ಶನೆಲ್ ನಾಜೂಕಿನ ಅಂಗಡಿಗಳು ವಿಶ್ವದಾದ್ಯಂತ ತೆರೆದುಕೊಂಡವು.[] 1980ರ ದಶಕದ ಕೊನೆಯಲ್ಲಿ, ಈ ಅಂಗಡಿಗಳು ಒಂದು-ಔನ್ಸ್‌ಗೆ ಯುಎಸ್ 200 ಡಾಲರ್‌ಗಳಷ್ಟು ಸುಗಂಧದಿಂದ, ಯುಎಸ್ 225 ಡಾಲರ್‌ಗಳ ಬ್ಯಾಲೆರಿನಾ ಚಪ್ಪಲಿಗಳಿಂದ ಹಿಡಿದು ಯುಎಸ್ 11,000 ಡಾಲರ್‌ನ ಉಡುಪುಗಳವರೆಗೆ ಮತ್ತು ಯುಎಸ್ 2,000 ಡಾಲರ್‌ಗಳ ಚರ್ಮದ ಕೈಚೀಲಗಳವರೆಗೆ ಸರಕುಗಳನ್ನು ಮಾರಿದರು.[] ಶನೆಲ್ ಪ್ರಸಾಧನಗಳು ಮತ್ತು ಸುಗಂಧ ದ್ರವ್ಯಗಳ ಹಕ್ಕುಗಳು ಶನೆಲ್‌ ಬಳಿಯೇ ಇತ್ತು ಮತ್ತು ಯಾವುದೇ ಅಲಂಕಾರಿಕ ನಿರ್ಮಾತರಿಂದಾಗಲೀ ಅಥವ ವಿತರಕರ ಜೊತೆಯಾಗಲೀ ಹಂಚಿಕೊಂಡಿರಲಿಲ್ಲ.[] ಲೇಜರ್ಫೆಲ್ಡ್‌ರವರು ಮುಖ್ಯ ವಿನ್ಯಾಸಕರಾಗಿ ಅಧಿಕಾರ ವಹಿಸಿಕೊಂಡ ಮೇಲೆ, ಶನೆಲ್‌ನ ಇತರ ವಿನ್ಯಾಸಕರು ಮತ್ತು ಮಾರುಕಟ್ಟೆದಾರರು ಶ್ರೇಷ್ಠ ಶನೆಲ್ ನೋಟವನ್ನು ಶನೆಲ್ ಅತೀ ಪ್ರಸಿಧ್ಧವಾಗಿ ಮಾಡಲು ಶ್ರಮವಹಿಸಿದರು.[] ಶನೆಲ್ ಮಾರುಕಟ್ಟೆದಾರ ಜೀನ್ ಹೊಯೆನ್‌ರವರು ಹೀಗೆ ವಿವರಿಸಿದರು, "ಪ್ರತೀ 10 ವರ್ಷಗಳಿಗೆ ನಾವು ಹೊಸ ಸುಗಂಧವನ್ನು ಪರಿಚಯಿಸುತ್ತೇವೆ, ಇತರ ಪ್ರತಿಸ್ಪರ್ಧಿಗಳ ತರಹ ಪ್ರತೀ ಮೂರು ನಿಮಿಷಗಳಿಗಲ್ಲ. ಗ್ರಾಹಕರನ್ನು ನಾವು ಗೊಂದಲಗೊಳಿಸುವುದಿಲ್ಲ. ಶನೆಲ್‌ ಇಂದ ಏನು ನಿರೀಕ್ಷಿಸಬೇಕೆಂದು ಅವರಿಗೆ ಗೊತ್ತು. ಮತ್ತು ಅವರು ನಮ್ಮ ಬಳಿ ಮತ್ತೆ ಮತ್ತೆ ಬರುತ್ತಾರೆ, ಎಲ್ಲ ವಯಸ್ಸಿನಲ್ಲೂ, ಮಾರುಕಟ್ಟೆಗೆ ಬರುವಾಗ ಮತ್ತು ಹೋಗುವಾಗ."[] ಕೊಕೊ ಶನೆಲ್ ಅವರ ಗೌರವಾರ್ಥವಾಗಿ 1984ರಲ್ಲಿ ಹೊಸ ಸುಗಂಧ ಕೊಕೊ ವನ್ನು ಆರಂಭಿಸಿದರು, ಇದು ಶನೆಲ್‌ನ ಸುಗಂಧದ ವ್ಯಾಪಾರದಲ್ಲಿ ಯಶಸ್ಸನ್ನು ಮುಂದುವರೆಸಿತು.[] 1986ರಲ್ಲಿ, ಕೈಗಡಿಯಾರ ಮಾಡುವವರ ಜೊತೆ ಹೌಸ್ ಆಫ್ ಶನೆಲ್ ಒಪ್ಪಂದಕ್ಕೆ ಬಂದಿತು, ಮತ್ತು 1987ರಲ್ಲಿ ಶನೆಲ್ ಕೈಗಡಿಯಾರ ತನ್ನ ಮೊದಲ ಪ್ರವೇಶ ಮಾಡಿತು. ಆ ದಶಕದ ಕೊನೆಯಲ್ಲಿ, ಎಲೇನ್ ತಮ್ಮ ಕಾರ್ಯಸ್ಥಾನವನ್ನು ನ್ಯೂಯಾರ್ಕ್‌ಗೆ ಬದಲಿಸಿದರು.[]

1990ರ ದಶಕದಲ್ಲಿ

[ಬದಲಾಯಿಸಿ]
ಕ್ಯಾಲಿಫೋರ್ನಿಯದ ಬೆವರ್ಲಿ ಹಿಲ್ಸ್‌ನ ರೋಡಿಯೊ ಡ್ರೈವ್‌ನಲ್ಲಿರುವ ಶನೆಲ್ ಅಂಗಡಿ.

1990ರ ದಶಕದಲ್ಲಿ ಸಂಸ್ಥೆಯು ಸುಗಂಧ ನಿರ್ಮಿಸುವುದರಲ್ಲಿ ಮತ್ತು ವ್ಯಾಪಾರೋದ್ಯಮದಲ್ಲಿ ವಿಶ್ವದ ಮುಂದಾಳಾಗಿ ಸ್ಥಾನ ಪಡೆಯಿತು.[] ಮಾರುಕಟ್ಟೆ ಚಟುವಟಿಕೆಗಳಲ್ಲಿ ಭಾರಿ ಬಂಡವಾಳ ಹೂಡಿದ್ದರಿಂದ ಆದಾಯ ಹೆಚ್ಚಾಯಿತು.[] ಮೈಸನ್ ಡಿ ಶನೆಲ್‌ನ ಯಶಸ್ಸು ವರ್ತೈಮರ್ ಕುಟುಂಬಕ್ಕೆ ಯುಎಸ್‍ಡಿ 5 ಬಿಲಿಯನ್ ಡಾಲರ್‌ಗಳಷ್ಟು ಐಶ್ವರ್ಯ ತಂದಿತು.[] ಉತ್ಪನ್ನದ ಸರಣಿಗಳಾದ ಕೈಗಡಿಯಾರಗಳು (ಬಿಡಿ ಗಡಿಯಾರದ ಬೆಲೆ ಸುಮಾರು ಯುಎಸ್‌ಡಿ $7,000), ಚಪ್ಪಲಿಗಳು, ಉತ್ತಮ ದರ್ಜೆಯ ಬಟ್ಟೆಗಳು, ಪ್ರಸಾಧನಗಳು ಮತ್ತು ಉಪಸಾಧಕಗಳನ್ನು ವಿಸ್ತರಿಸಲಾಯಿತು.[] 1990ರ ದಶಕದ ಮೊದಲಲ್ಲಿ ಮಾರುಕಟ್ಟೆಯ ಕುಸಿತದಿಂದ ಮಾರಾಟಕ್ಕೆ ಹಾನಿಯಾಯಿತು, ಆದರೆ 1990ರ ದಶಕದ ಮಧ್ಯದಲ್ಲಿ ಶನೆಲ್ ಅಂಗಡಿಗಳ ವಿಸ್ತರಣೆಯಿಂದ ಚೇತರಿಸಿಕೊಂಡಿತು.[] 1990ರಲ್ಲಿ ಎಲ್‌ಝೀಯ ಆರಂಭವಾಯಿತು. ವ್ಯಾಪಾರವು ಮೇಲೇರುತ್ತಿದ್ದಂತೆ (ಇತರೆ ಫ್ಯಾಷನ್ ಸಂಸ್ಥೆಗಳನ್ನು ಕೊಳ್ಳುವುದು) ಶನೆಲ್—ಮೊಯೆಟ್ ಹೆನ್ನಿಸಿ • ಲೂಯಿ ವಿಟ್ಟಾನ್, ಗೂಚಿ ಮತ್ತು ಪ್ರಾಡಗಳಂತಹ ಅನೇಕ ಸಂಸ್ಥೆಗಳನ್ನು ಖರೀದಿಸಿತು.[] ಲೆಸ್ ಬ್ರಾಡರೀಸ್ ಲೆಮರಿ (ಪುಕ್ಕದ ಮತ್ತು ಹೂವಿನ ಕರಕುಶಲಮನೆ, ಇದು ಉತ್ತಮ ಉಡುಪುಗಳ ಉದ್ಯಮಕ್ಕೆ ಕಸೂತಿಯನ್ನು ಒದಗಿಸುತ್ತಿತ್ತು), ಎ. ಮೈಕಲ್ ಎಟ್ ಸಿ, ಮತ್ತು ಲೆಸಾಜ್‌ಗಳನ್ನು ಶನೆಲ್ ಖರೀದಿಸಿತು.[] ಮಸರೊ ಸಂಸ್ಥೆಯನ್ನು ಶನೆಲ್ ಕೊಳ್ಳಬಹುದೆಂಬ ವದಂತಿಯಿತ್ತು.[]

1996ರ ಹೊತ್ತಿಗೆ, ಶನೆಲ್ ಪಿಸ್ತೂಲು ತಯಾರಕರಾದ ಹಾಲೆಂಡ್ & ಹಾಲೆಂಡ್ ಅನ್ನು ಖರೀದಿಸಿದರು. 1996ರಲ್ಲಿ ಅಲ್ಲೂರ್ ಸುಗಂಧದ ಆರಂಭವಾಯಿತು ಮತ್ತು ಇದರ ಅಪಾರ ಜನಪ್ರಿಯತೆಯಿಂದ, ಪುರುಷರ ಆವೃತ್ತಿ ಅಲ್ಲೂರ್ ಹೋಮ್ ಅನ್ನು 1998ರಲ್ಲಿ ಆರಂಭಿಸಲಾಯಿತು. ಏರ್ಸ್ ಅನ್ನು ಖರೀದಿಸಿದ್ದರಿಂದ ಉತ್ತಮ ಯಶಸ್ಸು ಬಂದಿತು (ಇದು ಈಜುಡುಗೆಯ ಪಟ್ಟಿ). 1999ರಲ್ಲಿ, ಶನೆಲ್ ಮನೆಯು ತನ್ನ ಮೊದಲ ಚರ್ಮ ಆರೈಕೆಯ ಸರಣಿಯನ್ನು ಪ್ರಿಸಿಷನ್ ಮೂಲಕ ಆರಂಭಿಸಿತು. ಅದೇ ವರ್ಷದಲ್ಲಿ, ಶನೆಲ್ ಹೊಸ ಪ್ರಯಾಣದ ಸಂಗ್ರಹಣೆಯನ್ನು ಆರಂಭಿಸಿತು, ಮತ್ತು ಲಕ್ಸೋಟಿಕ ಜೊತೆಯಲ್ಲಿನ ಒಪ್ಪಂದದ ಪರವಾನಗಿಯಡಿಯಲ್ಲಿ, ಬಿಸಿಲಿನ ಕನ್ನಡಕಗಳ ಮತ್ತು ಕನ್ನಡಕದ ಚೌಕಟ್ಟುಗಳ ಸರಣಿಯನ್ನು ಪರಿಚಯಿಸಿದರು.

2000ದಿಂದ ಇಲ್ಲಿಯವರೆಗೆ

[ಬದಲಾಯಿಸಿ]

ಎಲೇನ್ ವರ್ತೈಮರ್ ಶನೆಲ್‌ನ ಅಧ್ಯಕ್ಷರಾಗಿದ್ದರೂ, ಸಿಇಒ ಹಾಗೂ ಕಾರ್ಯಾಧ್ಯಕ್ಷರಾದ ಫ್ರಾಂಕೊಯಿ ಮಾಂಟನೆ ಅವರು 21ನೇ ಶತಮಾನಕ್ಕೆ ಶನೆಲ್ ಅನ್ನು ಕರೆತರಬೇಕಿತ್ತು.[] 2000 ಇಸವಿಯು ಶನೆಲ್‌ನ ಮೊದಲ ಯೂನಿಸೆಕ್ಸ್ ಗಡಿಯಾರ, ಜೆ12 ಅನ್ನು ಕಂಡಿತು, ಇದು ಪುರುಷ ಮತ್ತು ಸ್ತ್ರೀಯರ ಸಮ್ಮಿಳನದ ಅಂಶಗಳಿಂದ ಮಾಡಿದ ಕ್ರಾಂತಿಕಾರಿ ಶೈಲಿಯದ್ದಾಗಿತ್ತು. 2001ರಲ್ಲಿ, ಬೆಲ್ & ರಾಸ್ ಅನ್ನು ಖರೀದಿಸಲಾಯಿತು (ಗಡಿಯಾರಗಳ ತಯಾರಕರು). ಅದೇ ವರ್ಷ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಪಸಾಧಕಗಳ ಕೆಲವು ಪ್ರಮುಖ ಆಯ್ಕೆಗಳು ಲಭ್ಯವಾಗುವಾಂತಹ ಶನೆಲ್ ಅಂಗಡಿಗಳನ್ನು ತೆರೆಯಲಾಯಿತು.[]

ಮಧ್ಯದ ಹಾಂಗ್ ಕಾಂಗ್‌ನ ಪ್ರಿನ್ಸ್ ಕಟ್ಟಡದಲ್ಲಿರುವ ಶನೆಲ್ ಅಂಗಡಿ.

2002ರಲ್ಲಿ, ಚಾನ್ಸ್ ಸುಗಂಧವನ್ನು ಆರಂಭಿಸಿತು, ಇದು ಆಶ್ಚರ್ಯಕರ ಹಾಗೂ ಮೋಹಕ ಪರಿಮಳಗಳನ್ನು ಹೊಂದಿತ್ತು ಹೌಸ್ ಆಫ್ ಶನೆಲ್ ಪಾರಫೆಕ್ಷನ್ ಎಂಬುದನ್ನೂ ಸ್ಥಾಪಿಸಿತು, ಇದರಲ್ಲಿ ಐದು ಏಟಲಿಯರ್ಸ್ ಡಿ ಆರ್ಟ್‌ಗಳಾದ ಅಲಂಕಾರಗಳಿಗಾಗಿ ಡೆಸ್ರೂಸ್, ಪುಕ್ಕಗಳಿಗಾಗಿ ಮತ್ತು ಗುಲಾಬಿ ಹೂಗಳ ಆಕಾರದ ಪೊದೆಗಳಿಗಾಗಿ ಲೆಮರೀ, ಕಸೂತಿಗಾಗಿ ಲೆಸಾಜ್, ಚಪ್ಪಲಿ ತಯಾರಿಕೆಯ ಮಸ್ಸಾರೊ, ಮತ್ತು ಹೆಂಗಸರ ಟೊಪ್ಪಿ ಮಾಡುವ ಮೈಕಲ್‌ಗಳನ್ನು ಒಟ್ಟು ಹಾಕಿದರು: . ಪ್ರೆಟ್-ಎ-ಪೋರ್ಟರ್ ಸಂಗ್ರಹವು ಕಾರ್ಲ್ ಲೇಜರ್ಫೆಲ್ಡ್ ಅವರಿಂದ ವಿನ್ಯಾಸಗೊಳಿಸಲ್ಪಟ್ಟಿತು. ಈಗ ಅದನ್ನು ಪ್ರತೀ ಡಿಸೆಂಬರ್‌ನಲ್ಲಿ ಸಾಂಪ್ರದಾಯಿಕ ಉಡುಗೊರೆಯಾಗಿ ನೀಡುತ್ತಾರೆ. 2002ರ ಜುಲೈನಲ್ಲಿ, ಮಾಡಿಸನ್ ಅವೆನ್ಯೂನಲ್ಲಿ ಒಡವೆಗಳ ಮತ್ತು ಗಡಿಯಾರಗಳ ಮುಖ್ಯ ಅಂಗಡಿಯೊಂದನ್ನು ತೆರೆದರು.[] ಕೆಲವು ತಿಂಗಳುಗಳಲ್ಲೇ, 1,000 ಚದರಡಿಯ ಜಾಗದಲ್ಲಿ ಚಪ್ಪಲಿಗಳ ಮತ್ತಿ ಕೈಚೀಲಗಳ ಅಂಗಡಿಯನ್ನು ಒಡವೆಗಳ ಮತ್ತು ಗಡಿಯಾರಗಳ ಅಂಗಡಿಯ ಪಕ್ಕದಲ್ಲೇ ತೆರೆಯಲಾಯಿತು.[] 2002ರಲ್ಲಿ ಶನೆಲ್‌ ಐಷಾರಾಮಿ ಸರಕುಗಳ ಪ್ಯಾರೀಷಿಯನ್ ಫ್ಯಾಷನ್ ಸಂಸ್ಥೆ ಹರ್ಮ್ಸ್ ಜೊತೆ ವಿಲೀನಗೊಳ್ಳುವ ವದಂತಿ ಹರಡಿತ್ತು.[] ಆದಾಗ್ಯೂ, ವಿಲೀನಗೊಂಡಿದ್ದರೆ ವಿಶ್ವದಲ್ಲಿಯೇ ಒಂದು ದೊಡ್ಡ ಫ್ಯಾಷನ್ ಸಂಸ್ಥೆಯಾಗುತ್ತಿತ್ತು, ಮತ್ತು ಎದುರಾಳಿಯಾದ ಮೊಯೆಟ್-ಹೆನ್ನಿಸಿ • ಲೂಯಿ ವಿಟ್ಟನ್‌ಗೆ ಇದು ಇಷ್ಟವಾಗದಿರಬಹುದು, ಆದರೆ ವಿಲೀನ ನೆರವೇರಲಿಲ್ಲ. ವಿಲೀನಗೊಳ್ಳುವ ವದಂತಿಗಳಿದ್ದರೂ, ಶನೆಲ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿಸ್ತರಿಸುವುದನ್ನು ಮುಂದುವರೆಸಿತು ಮತ್ತು 2002ರ ಡಿಸೆಂಬರ್ ಹೊತ್ತಿಗೆ ಯು.ಎಸ್.ನಲ್ಲಿ 25 ಮಳಿಗೆಗಳು ಕಾರ್ಯಾಚರಣೆ ನಡೆಸುತ್ತಿದ್ದವು.[] ಅನೇಕ ಅಂಗಡಿಗಳನ್ನು ಯು.ಎಸ್.ನ ಇತರ ನಗರಗಳಾದ ಅಟ್ಲಾಂಟ್ ಮತ್ತು ಸಿಯಾಟಲ್‌ಗಳಲ್ಲಿ ಅಂಗಡಿ ತೆರೆಯಲು ಆಸಕ್ತಿ ಹೊಂದಿದೆಯೆಂದು ಶನೆಲ್ ಹೇಳಿಕೊಂಡಿತು.

ಯುವ ಹಿಂಬಾಲಕರನ್ನು ಮೆಚ್ಚಿಸುವುದಕ್ಕೋಸ್ಕರ, ಶನೆಲ್ ಕೊಕೊ ಮಡೆಮ್‌ವೆಸೆಲ್ ಅನ್ನು ಪರಿಚಯಿಸಿದರು ಮತ್ತು 2003ರಲ್ಲಿ "ಇನ್‌ಬಿಟ್ವೀನ್-ವಿಯರ್" ಉಡುಪುಗಳನ್ನು ಪರಿಚಯಿಸಿದರು. ಅದೇ ವರ್ಷದಲ್ಲಿ ಶನೆಲ್ ಉತ್ತಮ ಉಡುಪುಗಳಿಗೆ ಅಗಾಧವಾದ ಜನಪ್ರಿಯತೆ ಗಳಿಸಿ ಸಂಸ್ಥೆಯು ಎರಡನೆಯ ಅಂಗಡಿಯನ್ನು ರೂ ಕ್ಯಾಂಬನ್‌ನಲ್ಲಿ ತೆರೆಯಿತು. ಏಷ್ಯಾದ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತಾ, ಶನೆಲ್ ಒಂದು ಹೊಸ2,400 square feet (220 m2) ಅಂಗಡಿಯನ್ನು ಹಾಂಗ್ ಕಾಂಗ್‌ನಲ್ಲಿ ತೆರೆಯಿತು ಮತ್ತು ಸುಮಾರು ಯುಎಸ್‍ಡಿ 50 ಮಿಲಿಯನ್ ಡಾಲರ್‌ಗಳಷ್ಟನ್ನು ಟೋಕಿಯೋದ ಗಿಂಝದ ಕಟ್ಟಡಕ್ಕೆ ತೆತ್ತರು.[]

ಫ್ಯಾಷನ್ ಮತ್ತು ಜನಪ್ರಿಯತೆಯ ಮೇಲೆ ಪ್ರಭಾವ

[ಬದಲಾಯಿಸಿ]
ಪ್ಯಾರಿಸ್‌ನ ಪ್ಲೇಸ್ ವೆಂಡೋಮ್‌ನಲ್ಲಿರುವ ಶನೆಲ್ ಕೇಂದ್ರಸ್ಥಳ.

ಕೊಕೊ ಶನೆಲ್‌ರವರು ಆಟ್ ಕೂಟೂರ್‌ಗಳ ಫ್ಯಾಷನ್ ಅನ್ನು ಸಾಂಪ್ರದಾಯಿಕ ಸರಳವಾದ ಮೇಲುಡುಗೆಗಳು ಮತ್ತು ಉದ್ದನೆಯ ತೆಳುವಾದ ಉಡುಪುಗಳ ಫ್ಯಾಷನ್‌ನಿಂದ ಬದಲಿಸಿದರು[ಸೂಕ್ತ ಉಲ್ಲೇಖನ ಬೇಕು]. 1920 ಮತ್ತು 1930ರ ದಶಕದ ವರ್ಷಗಳನ್ನು ಅತ್ಯುತ್ತಮ ರೀತಿಯಲ್ಲಿ ಕೊಕೊರವರ ಯುಗವೆಂದು ನೆನೆಸಿಕೊಳ್ಳಬಹುದು, ಅವರ ಸರಳವಾದ ಸ್ತ್ರೀಯರ ಉಡುಪುಗಳ ಸರಣಿ "ಚಪ್ಪಟೆಯ-ಎದೆಯ" ನೋಟವುಳ್ಳ ಉಡುಪುಗಳು 1920ರಲ್ಲಿ ಜನಪ್ರಿಯವಾಗಿದ್ದವು.[][] ಆಕೆಯ ಉಡುಪುಗಳು ಆರಾಮದಾಯಕವಾಗಿದ್ದು ಸ್ತ್ರೀಯರ ಹೊರಾಂಗಣ ವಿರಾಮದ ತೊಡುಗೆಗಳನ್ನೇ ಬದಲಾಯಿಸಿದವು. ಕೊಕೊ ಬಿಗಿಯಾದ ಉಡುಪುಗಳನ್ನು ತ್ಯಜಿಸಿ, ಸ್ತ್ರೀಯರಿಗೆ ಹೆಚ್ಚಿನ ಆರಾಮದಾಯಕ ಉಡುಪುಗಳನ್ನು ಸೃಷ್ಟಿಸಿದರು.[] ಸಮಕಾಲೀನ ಫ್ಯಾಷನ್ ಹೀಗೆ ಹೇಳುತ್ತದೆ, "ಶನೆಲ್‌ರವರು ಜೀವನ ಶೈಲಿಗೆ ತಕ್ಕಂತಹ ಉಡುಪುಗಳನ್ನು ಆಧುನಿಕ ಸ್ತ್ರೀಯರಿಗೆ ನೀಡಿದರು."[] ಕೊಕೊ ಅವರಿಗೆ ಹೊಸ ಫ್ಯಾಷನ್ ಬಟ್ಟೆ ಜರ್ಸಿಯನ್ನು (ಮೃದುವಾದ ಉಣ್ಣೆಬಟ್ಟೆ ಇದನ್ನು ಒಳಉಡುಪುಗಳಿಗೆ ಬಳಸಲಾಯಿತು) ತಯಾರಿಸಿದಕ್ಕಾಗಿ ಮನ್ನಣೆ ದೊರೆಯಿತು.[] ಅವರ ನೀಲಿ ಮತ್ತು ಬೂದು ಬಣ್ಣಗಳ ಜರ್ಸಿ ಉಡುಪುಗಳಿಗೆ ಆಕಾರವನ್ನು ಕತ್ತರಿಸಿ ಚಪ್ಪಟೆ ಮಾಡುವ ಬದಲು ನೈಸರ್ಗಿಕ ಶರೀರದ ಆಕಾರವನ್ನು ನೀಡಿ ತಯಾರಿಸಲು ಮತ್ತು ಒತ್ತು ಕೊಟ್ಟರು.[] ಈ ಉಡುಪುಗಳು ಸಿರಿವಂತ ಮಹಿಳೆಯರಲ್ಲಿ ಬಹು ಜನಪ್ರಿಯವಾಗಿತ್ತು, ಮತ್ತು ಅವರ ವ್ಯಾಪ್ತಿಯನ್ನು ವಿಸ್ತರಿಸಿ ರೋಡಿಯರ್ ನಿರ್ಮಾತರಿಂದ ನಿರ್ಮಿಸಿದರು.[] ಶನೆಲ್ ಪುರುಷರ ಉಡುಪುಗಳಿಂದ ಕೆಲ ಕಲ್ಪನೆಗಳನ್ನು ಮಾಡಿ ತಮ್ಮ ವಿನ್ಯಾಸಗಳಲ್ಲಿ ಅಳವಡಿಸಿಕೊಂಡರು.[]

1969ರಲ್ಲಿ ಬೆಲ್ಜಿಯಮ್‌ನ ರಾಜ ಬಾಡಿನ್ ಮಾತು ರಾಣಿ ಫಾಬಿಯೊಲ ಅವರುಗಳು ವೈಟ್ ಹೌಸ್‌ಗೆ ಭೇಟಿ ನೀಡಿದಾಗ.ರಾಣಿಯು ಶನೆಲ್ ಕೈಚೀಲ ಹಿಡಿದಿರುವುದು.

ಫ್ಯಾಷನ್ ಉದ್ಯಮವನ್ನು ಬದಲಿಸುವಂಥಹ ಪ್ರಮುಖ ಯಶಸ್ಸುಗಳನ್ನು ಶನೆಲ್‌ರವರು ಹೊಂದಿದ್ದರು, ಸದಾ ಜನಪ್ರಿಯವಾಗಿರುವ ಶನೆಲ್ ಮೇಲುಡುಗೆ ಗಳು, ಮಂಡಿಯುದ್ದದ ಲಂಗ ಮತ್ತು ಒಪ್ಪ ಮಾಡಿದ ಮೇಲಂಗಿ, ಮುತ್ತಿನ ಸರದ ಜೊತೆ ಧರಿಸುವಂತಹ ಸಾಂಪ್ರದಾಯಿಕವಾಗಿ ಹೆಣೆದ ಉಣ್ಣೆಯ ಬಟ್ಟೆಗೆ ಕಪ್ಪು ದಾರದಿಂದ ಹೊಲೆದ ಚಿನ್ನದ ಬಣ್ಣದ ಬಟನ್‌ಗಳು ಇದರಲ್ಲಿ ಒಳಗೊಂಡಿವೆ.[][] ಉಡುಪಿನ ಅಂಚನ್ನು ಒಂದು ಸರದಿಂದ ಹೆಣೆಯಲಾಗಿತ್ತು. ಸಿರಿವಂತ ಮಹಿಳೆಯರು ಪ್ರಪಂಚದಾದ್ಯಂತ ಅವರ 31 ರೂ ಕ್ಯಾಂಬನ್ ಅಂಗಡಿಗೆ ಉತ್ತಮ ಉಡುಪುಗಳನ್ನು ಅವರಿಂದ ತೆಗೆದುಕೊಳ್ಳಲು ಮುತ್ತಿಗೆ ಹಾಕಿದರು.[] ಹೌಸ್ ಆಫ್ ಶನೆಲ್ ಆಗಿನಿಂದ ಸೊಬಗಿನ ಮೂರ್ತಿಯಾಯಿತು ಮತ್ತು, "ಶನೆಲ್" ಎಂಬ ಹೆಸರು ಸೊಬಗು, ಸಂಪಂತ್ತು, ಮತ್ತು ಪ್ರಭುತ್ವ ಪದಗಳ ಪರ್ಯಾಯ ಪದವಾಯಿತು, ಇದರ ಜೊತೆಗೆ ಫ್ರೆಂಚ್‌ನ ಉನ್ನತ ವರ್ಗದ ಅಂತಿಮ ಚಿಹ್ನೆಯಾಯಿತು.[][] ಅವರ ಶನೆಲ್ ನಂ. 5 ಸುಗಂಧದ ಅದ್ಭುತವಾದ ಯಶಸ್ಸಿನ [][][] ನಂತರ, ಕೊಕೊ ಶನೆಲ್‌ನ ಫ್ಯಾಷನ್‌ಗಳು ಇನ್ನೂ ಹೆಸರುವಾಸಿಯಾದವು ಮತ್ತು ಲಂಡನ್ ಮತ್ತು ಪ್ಯಾರಿಸ್‌ನ ಮೇಲ್ವರ್ಗದ ಜನರಿಂದ ಖರೀದಿಸಲ್ಪಟ್ಟವು. ಸುಗಂಧದ ಹಣಕಾಸಿನ ಗಳಿಕೆಯು ಅವರ ಕಷ್ಟದ ವರ್ಷಗಳಲ್ಲಿ ಸಂಸ್ಥೆಗೆ ಸಹಾಯ ಮಾಡಿತು.[]

ಒಟ್ಟಿನಲ್ಲಿ, ಶನೆಲ್ ತಮ್ಮ ಸ್ವಂತಿಕೆ ಮತ್ತು ಸರಳ ನಿಖರತೆಯಿಂದ ಅನೇಕ ಅಮೇರಿಕನ್ ಮತ್ತು ಯುರೋಪಿಯನ್ ಫ್ಯಾಷನ್ ವಿನ್ಯಾಸಕರನ್ನು ಭಾವಪ್ರೇರಿತರನ್ನಾಗಿಸಿದ್ದಾರೆ.[] "ಶನೆಲ್‌ರ ಅತ್ಯುತ್ತಮ ಗೊಂದಲಗಳಿಲ್ಲದ ಅತ್ಯುತ್ಕೃಷ್ಟ ವಿನ್ಯಾಸಗಳು ಮತ್ತು ಸಿದ್ಧ ಉಡುಪುಗಳ ಸಂಗ್ರಹಗಳನ್ನು ತಯಾರಿಸುವ ಆಕೆಯ ಕಲ್ಪನೆಗಳನ್ನು ಮುಂದುವರೆಸಿದ್ದಾರೆ—ಶನೆಲ್‌‌ರ ಆಧುನಿಕ ಶೈಲಿಯ ಉಡುಪುಗಳು ಫ್ಯಾಷನ್ ಪ್ರಪಂಚಕ್ಕೆ ಆಕೆ ಸಲ್ಲಿಸಿರುವ ಸ್ವತ್ತಿಗೆ ಒಂದು ಗೌರವ ಸಲ್ಲಿಕೆಯಾಗಿದೆ.[]

ಶನೆಲ್ ತನ್ನ ರಜಾಯಿಯಂಥ ಬಟ್ಟೆಗೆ, ಹಾಗೂ ಬಲವಾಗಿರಿಸಲು "ರಹಸ್ಯ"ವಾದ ವಸ್ತುವೊಂದನ್ನು ಹಿಂದೆ ಸೇರಿಸಿ ರಜಾಯಿ ಶೈಲಿಯಲ್ಲಿ ಹೊಲಿಯಲಾದ ಚರ್ಮದ ಬಟ್ಟೆಗಳಿಗೆ ಹೆಸರುವಾಸಿಯಾಗಿದೆ. ಇದು ಜಾಕಿಗಳ ಮೇಲಂಗಿಯಿಂದ ಸ್ಫೂರ್ತಿ ಪಡೆದದ್ದು. ಈ ವಸ್ತುವನ್ನು ಬಟ್ಟೆಗಳಲ್ಲಿ ಮತ್ತು ಉಪಸಾಧಕಗಳಲ್ಲಿ ಬೇರೆ ಬೇರೆಯಾಗಿ ಬಳಸಲಾಗುತ್ತದೆ. 2006ರಲ್ಲಿ ಚರ್ಮದೊಳಗೆ ಲೋಹದ ಸರವನ್ನು ತೂರಿಸಿ ಐಷಾರಾಮಿ ಸರಣಿಯನ್ನು ಪರಿಚಯಿಸಿದರು, ಆ ಸಮಯದಲ್ಲಿ ಅತ್ಯಂತ ಅಪೇಕ್ಷೆ ಹೊಂದಿದ್ದ ಚೀಲವಾಗಿತ್ತು. ಶನೆಲ್ ಈಗಲೂ ಅತೀ ಜನಪ್ರಿಯ ಏಕೆಂದರೆ ಅದು ಈಗಿನ ಒಲವನ್ನು, ಶ್ರೇಷ್ಠತೆ ಮತ್ತು ಮೊದಲಿಗೆ ಇದ್ದ ಸರಳತೆಯ ಜೊತೆ ಒಂದುಗೂಡಿಸುತ್ತದೆ. ಈ ಗುರುತನ್ನು ಈಗ ಬ್ರೆಝಿಲ್‌ನ ವಿನ್ಯಾಸಕ ಲಾರೆನ್ಸ್ ರಾಬರ್ಗ್ ಬರ್ನಾರ್ಡೊ ಮತ್ತು ಇಟಲಿಯ ಕೇಲ ಪಾಲಿನಿಯವರು ನಾಯಕತ್ವದಲ್ಲಿ ನಡೆಸುತ್ತಿದ್ದಾರೆ, ಇವರು ಹೌಸ್ ಆಫ್ ಫೆಂಡಿಗೂ ವಿನ್ಯಾಸಗಳನ್ನು ಮಾಡುತ್ತಾರೆ.

ಶನೆಲ್ ಲಾಂಛನ ಮತ್ತು ನಕಲಿ ತಯಾರಿಕೆ

[ಬದಲಾಯಿಸಿ]

ವೈಶಿಷ್ಟ್ಯಪೂರ್ಣ ಲಾಂಛನವೆಂದರೆ ಒಂದಕ್ಕೊಂದು ಬಂಧಿಸಿರುವ ಎರಡು-ಸಿ (ಒಂದು ಮುಂದೆ ಮುಖವಾಗಿದೆ, ಮತ್ತೊಂದು ಹಿಮ್ಮೊಗವಾಗಿದೆ.) ಮೂಲವಾಗಿ ಇದು ಕೊಕೊ ಶನೆಲ್‌ರವರಿಂದ ಬಂದ ಲಾಂಛನವಲ್ಲ. ನೈಸ್‌ನಲ್ಲಿರುವ ಶಟೊ ಡಿ ಕ್ರಿಮಟ್ ಅವರು ಈ ಲಾಂಛನವನ್ನು ಆಕೆಗೆ ನೀಡಿದರು. ಮೊದಲ ಶನೆಲ್ ಅಂಗಡಿ ತೆರೆಯುವವರೆಗೂ ಈ ಲಾಂಛನವನ್ನು ವ್ಯಾಪಾರೀ ಮುದ್ರೆಯಾಗಿಸಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಈಗ ಅಕ್ರಮವಾಗಿ ಎರಡು-ಸಿಗಳ ಲಾಂಛನವನ್ನು ಕಳಪೆ ಸರಕುಗಳಿಗೆ ಬಳಸುತ್ತಿರುವುದರ ವಿರುಧ್ಧ ಶನೆಲ್ ಹೋರಾಡುತ್ತಿದೆ, ವಿಶೇಷವಾಗಿ ನಕಲು ಮಾಡಿದ ಕೈಚೀಲಗಳು ಮತ್ತು ನಕಲು ಉತ್ಪನ್ನಗಳ ಮಾರಾಟವನ್ನು ತಡೆಯುವುದೇ ಅವರ ಮೊದಲ ಆದ್ಯತೆಯಾಗಿದೆ ಎಂದು ಶನೆಲ್ ಹೇಳಿದೆ.[] ವಿಯಟ್ನಾಂ ಮತ್ತು ಚೈನಾ ದೇಶಗಳು ಭಾರೀ ಸಂಖ್ಯೆಯಲ್ಲಿ ನಕಲೀ ಶನೆಲ್ ಕೈಚೀಲಗಳನ್ನು ನಿರ್ಮಿಸುತ್ತಿದ್ದಾರೆಂದು ಹೇಳಲಾಗುತ್ತದೆ. ಅಧಿಕೃತ ಶನೆಲ್ ಕೈಚೀಲಗಳ ಬಿಡಿ ಮಾರಾಟ ಯುಎಸ್‌ಡಿ 2,850 ಡಾಲರ್‌ಗಳಿಂದ ಆರಂಭವಾಗುತ್ತದೆ, ನಕಲೀ ಕೈಚೀಲಗಳು ಸುಮಾರು ಯುಎಸ್‌ಡಿ 100 ಡಾಲರ್‌ಗಳಷ್ಟಿದೆ, ಇದರಿಂದ ಅಗ್ಗದ ಬೆಲೆಯ ಕೈಚೀಲಗಳಿಗೆ ಬೇಡಿಕೆ ಹೆಚ್ಚಾಗಿದೆ. 1990ರ ದಶಕದ ಆರಂಭದಿಂದಲೂ ಎಲ್ಲಾ ಅಧಿಕೃತ ಕೈಚೀಲಗಳೂ ಅನುಕ್ರಮವಾಗಿವೆ.

ಆರಂಭಿಕ ವ್ಯಾಪಾರೀ ಚಿಹ್ನೆಯ ನೋಂದಣಿ

[ಬದಲಾಯಿಸಿ]
Early Chanel trademark, filed November 18, 1924
ಶನೆಲ್ ಎಂಬ ಪದದ ಗುರುತು ನೋಂದಾಯಿಸಿದ ವ್ಯಾಪಾರ ಚಿಹ್ನೆ
Early Chanel No. 5 stylized word design trademark, filed April 1, 1926
ಶನೆಲ್ ನಂ. 5 ಗುರುತು ನೋಂದಾಯಿಸಿದ ವ್ಯಾಪಾರೀ ಚಿಹ್ನೆ.

ವ್ಯಾಪಾರೀ ಮುದ್ರೆಯ ನೋಂದಣಿಯನ್ನು ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಅಂಡ್ ಟ್ರೇಡ್‌ಮಾರ್ಕ್ ಆಫೀಸ್ (ಯುಎಸ್‌ಪಿಟಿಒ)ನಲ್ಲಿ ಮಾಡಿರುವ ಮೂಲಕ ಶನೆಲ್‌ನ ಇರುವಿಕೆಯನ್ನು ಪ್ರಮಾಣೀಕರಿಸಲಾಗಿದೆ. ನವೆಂಬರ್ 18, 1924ರ ಮಂಗಳವಾರದಂದು, ನ್ಯೂಯಾರ್ಕ್‌ನಲ್ಲಿರುವ ಶನೆಲ್ Inc., ಎರಡು ನ್ಯೂ ಯಾರ್ಕ್ ವ್ಯಾಪಾರೀ ಮುದ್ರೆಯ ಅರ್ಜಿಗಳನ್ನು ಸಲ್ಲಿಸಿದರು. ಇದರಲ್ಲೊಂದು ಶನೆಲ್ ಎಂಬ ಗುರುತಿಗಾಗಿ. ಎರಡನೆಯ ಅರ್ಜಿಯು ವಿಶಿಷ್ಟವಾಗಿ ಬಂಧಿಸಲ್ಪಟ್ಟ ಸಿಸಿ ವಿನ್ಯಾಸಕ್ಕಾಗಿ ಮತ್ತು ಪದದ ಗುರುತಿಗಾಗಿ.

ಪ್ರಾಥಮಿಕ ವರ್ಗದ ಸಾಮಾನ್ಯ ಲೋಹಗಳು ಮತ್ತು ಅವುಗಳ ಮಿಶ್ರ ಲೋಹಗಳಿಂದ ತಯಾರಿಸಿದ ಸುಗಂಧ ದ್ರವ್ಯಗಳು, ಪ್ರಸಾಧನ ಸಾಮಗ್ರಿಗಳು ಮತ್ತು ಕಾಂತಿವರ್ಧಕ ಉತ್ಪನ್ನಗಳಿಗಾಗಿ ಮಾತ್ರ ಈ ಎರಡು ಶನೆಲ್ ಗುರುತುಗಳಿಗಾಗಿ ಅರ್ಜಿ ಸಲ್ಲಿಸಿತು. ಮುಖದ ಪೌಡರ್‌ಗೆ, ಸುಗಂಧ ದ್ರವ್ಯಗಳಿಗೆ, ಈ ಡಿ ಕೊಲೆನ್ಗೆ, ಶೌಚ ಗೃಹದ ನೀರಿಗೆ, ಅಧರ ಲೇಪಕ್ಕೆ, ಮತ್ತು ಕೆನ್ನೆಬಣ್ಣ ಗಳ ವಿವರಣೆಯನ್ನು ಶನೆಲ್ ಯುಎಸ್‌ಪಿಟಿಒಗೆ ನೀಡಿತ್ತು.

ಫೆಬ್ರವರಿ 24, 1925ರಂದು, ಶನೆಲ್ ಮತ್ತು ಸಿಸಿ ವ್ಯಾಪಾರೀ ಚಿಹ್ನೆಗಳನ್ನು ಒಂದೇ ದಿನ ಕೊಟ್ಟರು, ಅವುಗಳ ಸಂಖ್ಯೆಗಳು ಅನುಕ್ರಮವಾಗಿ 71205468 ಮತ್ತು 71205469 ಆಗಿದ್ದವು. ಅವುಗಳು ನೊಂದಣಿ ಮತ್ತು ನವೀಕರಣ ಹೊಂದಿವೆ, ಒಡೆತನವನ್ನು ನ್ಯೂಯಾರ್ಕ್‌ನ ಶನೆಲ್ Inc. ಆಫ್ ನ್ಯೂ ಯಾರ್ಕ್ ಹೊಂದಿದೆ.

ನಂ. 5 ಸುಗಂಧವನ್ನು ಪ್ರಾರಂಭಿಸಿದ ದಿನ ಏಪ್ರಿಲ್ 1, 1926ರಂದು ಮೊದಲ ವ್ಯಾಪಾರಿ ಚಿಹ್ನೆಯ ಅರ್ಜಿ ಸಲ್ಲಿಸಲಾಯಿತು. ಸುಗಂಧ ದ್ರವ್ಯ ಮತ್ತು ಶೌಚಗೃಹ ನೀರಿನ ಬಗ್ಗೆ ವಿವರಿಸಿ ಶನೆಲ್ ತನ್ನ ಅರ್ಜಿಯನ್ನು ಯುಎಸ್‌ಪಿಟಿಒಗೆ ಸಲ್ಲಿಸಿತು. ಮೊದಲ ಬಳಕೆ ಮತ್ತು ವಾಣಿಜ್ಯ ಬಳಕೆ ಜನವರಿ 1, 1921ರಂದು ನಡೆಯಿತು. ನೋಂದಣಿಯನ್ನು ಜುಲೈ 20, 1926ರಲ್ಲಿ ನೀಡಲಾಯಿತು, ಅನುಕ್ರಮ ಸಂಖ್ಯೆ 71229497ದ ಜೊತೆ. ನಂ. 5ರ ನೊಂದಣಿ ಮತ್ತು ನವೀಕರಣ ಹೊಂದಿವೆ, ಒಡೆತನವನ್ನು ನ್ಯೂಯಾರ್ಕ್‌ನ ಶನೆಲ್ Inc. ಆಫ್ ನ್ಯೂಯಾರ್ಕ್ ಹೊಂದಿದೆ.

ಶನೆಲ್ ಇರುವ ಸ್ಥಳಗಳು

[ಬದಲಾಯಿಸಿ]

ಶನೆಲ್‌ ದೇಶಾದ್ಯಂತ 200 ಶನೆಲ್ ಮಳಿಗೆಗಳಲ್ಲಿ ಕಾರ್ಯಾಚರಣೆ ಮಾಡುತ್ತದೆ.[] ದುಬಾರಿಯಾದ ವ್ಯಾಪಾರದ ಅಂಗಡಿಗಳಿರುವ ನಗರಗಳಲ್ಲಿ, ದುಬಾರಿಯಾದ ಸರಕಿನ ಮಳಿಗೆಗಳು ಮತ್ತು ಮಾಲ್‌ಗಳಲ್ಲಿ, ಮತ್ತು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾಣಬಹುದು ಶನೆಲ್ ಮಳಿಗೆಗಳನ್ನು.[] ಶನೆಲ್‌ನ ಮುಖ್ಯ ವ್ಯಾಪಾರೀ ಅಂಗಡಿ ಗಿಂಝನಲ್ಲಿ 3-5-3ನ ಗಿಂಝ ಚೌ-ಕು, ಟೋಕಿಯೊ 104-0061ನ ತಿರುವಿನಲ್ಲಿದೆ, ಮತ್ತು, ಇತರ ಮೂರು ತಿರುವುಗಳಲ್ಲಿ ಲೂಯಿ ವಿಟ್ಟಾನ್, ಬಲ್ಗರಿ, ಮತ್ತು ಕಾರ್ಟಿಯರ್ ಮುಖ್ಯ ಅಂಗಡಿಗಳಿವೆ.[]

  • ಶನೆಲ್ ಅಂಗಡಿಗಳು-ಯುನೈಟೆಡ್ ಸ್ಟೇಟ್ಸ್‌ನಲ್ಲಿ
  • ನ್ಯೂಯಾರ್ಕ್
  • ಬ್ಯಾಲ್ ಹಾರ್ಬರ್
  • ಬೆವರ್ಲಿ ಹಿಲ್ಸ್
  • ಬೋಸ್ಟನ್‌
  • ಚಿಕಾಗೊ
  • ಕಾಸ್ಟ ಮೆಸ
  • ಡಲ್ಲಾಸ್‌
  • ಹೊನೊಲುಲು
  • ಹೂಸ್ಟನ್‌
  • ಲಾಸ್ ವೇಗಸ್
  • ಲಾಸ್ ಏಂಜಲೀಸ್
  • ಆರ್ಲ್ಯಾಂಡೊ
  • ಪಾಮ್ ಬೀಚ್
  • ಪಾಮ್ ಬೀಚ್ ಗಾರ್ಡನ್ಸ್
  • ಸ್ಯಾನ್ ಫ್ರಾನ್ಸಿಸ್ಕೋ
  • ಷಾರ್ಟ್ ಹಿಲ್ಸ್
  • ಟೈಸನ್ಸ್ ಗ್ಯಾಲೆರಿಯ

ಸುಗಂಧ ದ್ರವ್ಯಗಳು

[ಬದಲಾಯಿಸಿ]

1920ರ ದಶಕದ ಮಧ್ಯದಲ್ಲಿ ಪಾರ್ಫಮ್ಸ್ ಶನೆಲ್ ಅನ್ನು ಮನೆಯ ಸಂಕೇತವಾದ ನಂ. 5 ಅನ್ನು 1921ರಲ್ಲಿ ಪರಿಚಯಿಸಿದ ನಂತರ ರೂಪಿಸಿದರು. ಶನೆಲ್‌ನ ಸುಗಂಧ ದ್ರವ್ಯಗಳು ತಮ್ಮ ಎಲ್ಲಾ ಉತ್ಪನ್ನಗಳ ಕೂಡಿಸಿದ ಮಾರಾಟದ ಲಾಭಕ್ಕೂ ಹೆಚ್ಚಾಗಿ ಮಹತ್ವದ ಲಾಭವನ್ನು ಸಂಸ್ಥೆಗೆ ತರುತ್ತವೆ.[]

ಪಾರ್ಫಮ್ಸ್ ಶನೆಲ್ ಆರಂಭವಾದಾಗಿನಿಂದ 3 ಆಂತರಿಕ ಸುಗಂಧ ದ್ರವ್ಯ ಮಾಡುವವರನ್ನು ಹೊಂದಿತ್ತು:

  • 1920-1961ರಲ್ಲಿ ಕಾರ್ಯನಿರ್ವಹಿಸಿದ್ದು ಅರ್ನೆಸ್ಟ್ ಬೊ
  • 1958-1987ರಲ್ಲಿ ಕಾರ್ಯನಿರ್ವಹಿಸಿದ್ದು ಹೆನ್ರಿ ರಾಬರ್ಟ್
  • 1978–ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿರುವುದು ಜಾಕ್ವೆ ಪೋಲ್ಜ್

ಕೈಗಡಿಯಾರಗಳು

[ಬದಲಾಯಿಸಿ]

ಶನೆಲ್‌ನ ಸೃಜನಾತ್ಮಕ ನಿರ್ದೇಶಕ, ಜಾಕ್ವೆ ಹೆಲ್ಲೂರವರು ಕೊಕೊ ಶನೆಲ್‌ರ ಸಿದ್ಧಾಂತಗಳನ್ನು ಅನುಸರಿಸಿ, ’ಪ್ರೀಮಿಯರ್’ ಹೆಸರಿನ ಮೊದಲ ಶನೆಲ್ ಕೈಗಡಿಯಾರವನ್ನು 1987ರಲ್ಲಿ ವಿನ್ಯಾಸಗೊಳಿಸಿದರು. ಮೊದಲನೆಯ ನಮೂನೆಯಾದ ಶನೆಲ್ ಜೆ12 ಕೈಗಡಿಯಾರಗಳ ಸರಣಿಯನ್ನು 2000ದಲ್ಲಿ ಪರಿಚಯಿಸಿದರು.

2005ರಲ್ಲಿ, ಶನೆಲ್ ವಿನ್ಯಾಸಕರು ಜೆ12ರ ಸರಣಿಯಲ್ಲಿ ಸೊಗಸಾದ ಒಡವೆಗಳ ಗಡಿಯಾರವನ್ನು ಪರಿಚಯಿಸಿದರು - ಅವರು ಒಡವೆಯ ಗಡಿಯಾರವನ್ನು ಟರ್ಬಿಲಿಯನ್ ಜೊತೆಗೆ ಅಭಿವೃದ್ಧಿಗೊಳಿಸಿದರು. ವಿಶಿಷ್ಟವಾದ ’ಶನೆಲ್ ಒ5-ಟಿ.1'ನ್ನು ಅಭಿವೃದ್ಧಿಗೊಳಿಸಲು ಸ್ವಿಸ್ ಗಡಿಯಾರದ ಅನುಭವೀ ತಯಾರಕರನ್ನು ಶನೆಲ್ ಕೇಳಿಕೊಂಡಿತು.

2006ರಲ್ಲಿ, ಸರಣಿಯನ್ನು ಶನೆಲ್ ಜೆ12 ಆಟ್ ಜೋಲರಿ ಜೊತೆಗೆ 597 ಆಯಾಕಾರದ ಸೀಳಿನ ವಜ್ರಗಳೊಂದಿಗೆ ಸೇರಿಸಿದರು, ಇದಾದ ನಂತರ ಶನೆಲ್ ಜೆ12 ಟರ್ಬಿಲಿಯನ್ ಆಟ್ ಜೋಲರಿಯ ಸೃಷ್ಟಿಯಾಯಿತು. 2007ರಲ್ಲಿ, ಶನೆಲ್ ತನ್ನ ಮೊದಲ ಜೆ12 ಜಿಎಮ್‌ಟಿ ನಮೂನೆಯನ್ನು ಆರಂಭಿಸಿತು.

2008ರಲ್ಲಿ, ಆಡೆಮರ್ಸ್ ಪಿಗಟ್ ಜೊತೆಯಲ್ಲಿ ಶನೆಲ್ ಪಾಲುದಾರಿಕೆಯನ್ನು ಉಪಕ್ರಮಿಸಿತು, ’ಜೆ12 ಕ್ಯಾಲಿಬರ್ 3125' ಸ್ವಯಂಚಾಲಿತ ಗಡಿಯಾರವನ್ನು ಶನೆಲ್ ಎಪಿ - 3125, ಎಪಿ 3120 ಚಲನೆ ಮತ್ತು ಶನೆಲ್ ’ಜೆ12’ ಸಿರಾಮಿಕ್‌ನ ಸಮ್ಮಿಲನದಿಂದ ವೃಧ್ಧಿಗೊಳಿಸಿದರು .[೧೦]

ಚಿತ್ರಗಳ ಬಗೆಗಿನ ವ್ಯಾಪಾರೋದ್ಯಮ

[ಬದಲಾಯಿಸಿ]

ಶನೆಲ್ ನಂ. 5

[ಬದಲಾಯಿಸಿ]

ಶನೆಲ್ ನಂ. 5ರ ಹೊಸ ಮುಖವಾಗಿ ನಿಕೋಲ್ ಕಿಡ್ಮನ್‌ನನ್ನು ಒಂದು ಹೊಸ ಜಾಹೀರಾತಿನ ಚಿತ್ರವನ್ನು ಮೂಲಕ ಶನೆಲ್ ಪರಿಚಯಿಸಿತು. ಇದು ಮುಲಾನ್ ರೂಜ್ ಮತ್ತು ರೋಮಿಯೊ+ಜೂಲಿಯಟ್ ಚಿತ್ರಗಳ ನಿರ್ದೇಶಕರಾದ ಬಾಝ್ ಲೂರ್ಮನ್ ಅವರಿಂದ ನಿರ್ಮಿಸಲಾಗಿದ್ದು, ಸಿಡ್ನಿಯಲ್ಲಿ ಚಿತ್ರೀಕರಿಸಲಾಗಿದೆ. ಕಿಡ್ಮನ್‌ರವರು ಅತ್ಯಂತ ವಿಶ್ವದ ಹೆಸರುವಾಸಿ ಮಹಿಳೆಯ ಪಾತ್ರ ವಹಿಸುತ್ತಾರೆ ಹಾಗೂ ಬ್ರಝಿಲಿಯನ್ ರೂಪದರ್ಶಿ/ನಟ ರಾಡ್ರಿಗೊ ಸಾನ್‌ತೊರೊ ಅವರು ಕಿಡ್ಮನ್ ಪ್ರೇಮಿಯಾಗಿ ಹಾಗೂ ಕಷ್ಟಪಡುತ್ತಿದ್ದ ಲೇಖಕನಾಗಿ ನಟಿಸಿದರು. ಜಾಹೀರಾತು ಮೂರು ನಿಮಿಷಗಳವರೆಗೆ ಇತ್ತು, ಮತ್ತು ವರದಿಗಳ ಪ್ರಕಾರ ನಿರ್ಮಾಣದ ಮುಂಚಿನ ಮತ್ತು ನಂತರದ ಹಲವಾರು ತಿಂಗಳುಗಳನ್ನು ತೆಗೆದುಕೊಂಡಿತು. ಇದು 26 ಮಿಲಿಯನ್ ಯೂರೋಗಳಷ್ಟು ($46 ಮಿಲಿಯನ್ ಡಾಲರ್‌) ಖರ್ಚಾಯಿತು, ಇದರಿಂದ ನಂ. 5 ದ ಫಿಲ್ಮ್ ಇತಿಹಾಸದಲ್ಲೇ ಒಂದು ಅತೀ ದುಬಾರಿಯಾದ ಜಾಹೀರಾತುಗಳಲ್ಲೊಂದಾಗಿದೆ.[೧೧]

ಫ್ರೆಂಚ್ ನಟಿ ಮತ್ತು ದ ಡ ವಿಂಚಿ ಕೋಡ್ (2006) ಚಿತ್ರದ ತಾರೆ ಆಡ್ರೆ ಟಟೌ ನಂ. 5ರ ಸುಗಂಧ ದ್ರವ್ಯದ ರೂಪದರ್ಶಿಯಾಗಿ ಕಿಡ್ಮನ್‌ರ ಸ್ಥಾನ ತುಂಬಿದರು.[] 2009ರಲ್ಲಿ ಸುಗಂಧ ದ್ರವ್ಯದ ಎರಡನೆಯ ಚಿಕ್ಕ ಚಿತ್ರದಲ್ಲಿ ಕಾಣಿಸಿಕೊಂಡಾಗ, ಟಟೌ ಅವರು ಸುಗಂಧದ ರೂಪದರ್ಶಿಯಾಗಿ ಆಯ್ಕೆಯಾದರು. ಈ ಚಿಕ್ಕ ಚಿತ್ರವನ್ನು ಮೇ 5ರಂದು (5ನೆಯದರಲ್ಲಿ 5ನೆಯದು - ನಂ. 5ರ ಗೌರವಾರ್ಥ) ಶನೆಲ್ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿದರು, ಸುಗಂಧದ ಪರಿಚಯಿಸಿದ 88 ವರ್ಷದ ದಿನವಾಗಿತ್ತು. ಫ್ರೆಂಚ್ ನಿರ್ದೇಶಕ ಜೀನ್-ಪಿಯರ್ ಜುನೆಟ್ ಅವರು ಚಿತ್ರವನ್ನು ನಿರ್ದೇಶಿಸಿದರು ಮತ್ತು ಟಟೌ ಅವರು ಕೊಕೊ ಶನೆಲ್ ಪಾತ್ರದಲ್ಲಿ ಅಭಿನಯಿಸಿದ ಚಿತ್ರ ಕೊಕೊ ಅವಂಟ್ ಶನೆಲ್ ಚಿತ್ರ ಬಿಡುಗಡೆಯ ಸಮಯದಲ್ಲೇ ಬಿಡುಗಡೆಗೊಳಿಸಿದರು.

ಕೊಕೊ ಮೆಡ್‌ಮೊಯಿಸೆಲ್

[ಬದಲಾಯಿಸಿ]

ಬ್ರಿಟಿಷ್ ನಟಿಯಾದ ಕೀರ ನೈಟ್ಲಿಯವರು, ಕೊಕೊ ಮೆಡ್‌ಮೊಯಿಸೆಲ್ ಸುಗಂಧದ ಈಗಿನ ರೂಪದರ್ಶಿ, ಚಿಕ್ಕ ವಯಸ್ಸಿನ ಕೊಕೊ ಶನೆಲ್ ಆಗಿ ಸಣ್ಣ ಸುಗಂಧದ ಜಾಹೀರಾತಿನಲ್ಲಿ ನಟಿಸಿದರು, ಇದನ್ನು ಇಂಗ್ಲಿಷ್ ಚಿತ್ರದ ನಿರ್ದೇಶಕ ಜೋ ರೈಟ್‌ರವರು ನಿರ್ದೇಶಿಸಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ ೧.೧೫ ೧.೧೬ ೧.೧೭ ೧.೧೮ ೧.೧೯ ೧.೨೦ ೧.೨೧ ೧.೨೨ ೧.೨೩ ೧.೨೪ ೧.೨೫ ೧.೨೬ ೧.೨೭ ೧.೨೮ ೧.೨೯ ೧.೩೦ ೧.೩೧ ೧.೩೨ ೧.೩೩ ೧.೩೪ ೧.೩೫ ೧.೩೬ "Chanel". Fashion Model Directory. Retrieved 2008-06-19.
  2. ೨.೦ ೨.೧ ಬ್ಯೂಟಿ - ಲೈಫ್ & ಸ್ಟೈಲ್ ಹೋಮ್ - theage.com.au
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ ೩.೧೪ Martin, Richard (1995). Contemporary fashion. London: St. James Press. p. 750. ISBN 1-55862-173-3.
  4. "BUSINESS ABROAD: King of Perfume". Time. September 14, 1953. Archived from the original on ಜುಲೈ 10, 2010. Retrieved April 28, 2010.
  5. ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ ೫.೧೦ ೫.೧೧ ೫.೧೨ ೫.೧೩ ೫.೧೪ ೫.೧೫ ೫.೧೬ ೫.೧೭ ೫.೧೮ ೫.೧೯ ೫.೨೦ ೫.೨೧ ೫.೨೨ ೫.೨೩ ೫.೨೪ ೫.೨೫ ೫.೨೬ ೫.೨೭ ೫.೨೮ ೫.೨೯ ೫.೩೦ ೫.೩೧ ೫.೩೨ ೫.೩೩ ೫.೩೪ ೫.೩೫ ೫.೩೬ ೫.೩೭ ೫.೩೮ ೫.೩೯ ೫.೪೦ ೫.೪೧ ೫.೪೨ ೫.೪೩ ೫.೪೪ ೫.೪೫ ೫.೪೬ ೫.೪೭ ೫.೪೮ ೫.೪೯ ೫.೫೦ ೫.೫೧ ೫.೫೨ ೫.೫೩ ೫.೫೪ "Chanel S.A." Funding Universe. Retrieved 2008-06-19.
  6. ಕಾಸ್ಟ್ಯೂಮ್", ಪುಟ.52, ಪ್ರಕಟಿಸಿದವರು ಐವಿಟ್ನೆಸ್ ಪುಸ್ತಕಗಳು.
  7. "ChanelReplica.com". Chanel Inc. Archived from the original on 2008-11-20. Retrieved 2009-05-08.
  8. ಜಪಾನ್‌ನ ಗಿಂಝ ಟೊಕ್ಯೊದಲ್ಲಿರುವ ಶನೆಲ್ ಮುಖ್ಯ ಅಂಗಡಿ
  9. Burr, Chandler (2008). The Perfect Scent: A Year Inside the Perfume Industry in Paris and New York. Henry Holt and Co. ISBN 0805080376.
  10. "ಶನೆಲ್ ಕೈಗಡಿಯಾರಗಳ ಪ್ರಪಂಚ". Archived from the original on 2008-02-11. Retrieved 2021-08-10.
  11. "Telegraph.co.uk "ನಿಕೋಲ್ ಕಿಡ್ಮನ್‌ರ ಇತ್ತೀಚಿನ ಹಾಲಿವುಡ್ ಯಶಸ್ವೀ ಚಿತ್ರ"". Archived from the original on 2008-02-03. Retrieved 2008-02-03.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಶನೆಲ್&oldid=1160146" ಇಂದ ಪಡೆಯಲ್ಪಟ್ಟಿದೆ