ಬಜ್ ಆಲ್ಡ್ರಿನ್
Buzz Aldrin | |
---|---|
ನಾಸಾ Astronaut | |
Nationality | American |
Status | Retired |
Born | Glen Ridge, New Jersey, U.S. | ೨೦ ಜನವರಿ ೧೯೩೦
Other occupation | Fighter pilot |
Rank | Colonel, USAF |
Time in space | ೧೨ days, ೧ hour and ೫೨ minutes |
Selection | 1963 NASA Group |
Missions | Gemini 12, Apollo 11 |
Mission insignia |
ಬಜ್ ಆಲ್ಡ್ರಿನ್ (ಎಡ್ವಿನ್ ಯುಜೀನ್ ಆಲ್ಡ್ರಿನ್, ಜೂನಿಯರ್ ಆಗಿ ೧೯೩೦ರ ಜನವರಿ ೨೦ರಂದು ಜನಿಸಿದರು) ಒಬ್ಬ ಅಮೇರಿಕನ್ ಮೆಕ್ಯಾನಿಕಲ್ ಇಂಜಿನಿಯರ್, ಅಮೇರಿಕಾ ಸಂಯುಕ್ತ ಸಂಸ್ಥಾನದ ವಾಯುಪಡೆಯ ನಿವೃತ್ತ ಪೈಲಟ್ ಮತ್ತು ಗಗನಯಾತ್ರಿ. ಈತ ಇತಿಹಾಸದಲ್ಲೇ ಮೊದಲ ಚಂದ್ರನಲ್ಲಿಗೆ ಜನರನ್ನು ಕೊಂಡೊಯ್ದ ಬಾಹ್ಯಾಕಾಶ ನೌಕೆ ಅಪೋಲೋ 11 ರ ಚಾಂದ್ರಕೋಶ ಪೈಲಟ್ ಆಗಿದ್ದಾರೆ. ೧೯೬೯ರ ಜುಲೈ ೨೦ರಂದು, ಮಿಷನ್ ಕಮಾಂಡರ್ ನೈಲ್ ಆರ್ಮ್‌ಸ್ಟ್ರೋಂಗ್‌ರ ನಂತರ ಚಂದ್ರನಲ್ಲಿ ಇಳಿದ ಎರಡನೇ ವ್ಯಕ್ತಿಯಾಗಿದ್ದಾರೆ.
ಬಾಲ್ಯ ಜೀವನ
[ಬದಲಾಯಿಸಿ]ಆಲ್ಡ್ರಿನ್ ನ್ಯೂಜೆರ್ಸಿಯ ಗ್ಲೆನ್ ರಿಡ್ಜ್‌ನಲ್ಲಿ[೧][೨] ವೃತ್ತಿ ಸೈನಿಕ ಎಡ್ವಿನ್ ಯುಜೀನ್ ಆಲ್ಡ್ರಿನ್ ಸೀನಿಯರ್ ಮತ್ತು ಮ್ಯಾರಿಯನ್ ಮೂನ್ ದಂಪತಿಗಳಿಗೆ ಜನಿಸಿದರು.[೩][೪] ಆತ ಸ್ಕಾಟಿಶ್, ಸ್ವೀಡಿಶ್[೫] ಮತ್ತು ಜರ್ಮನ್[೬] ಮನೆತನದವರಾಗಿದ್ದಾರೆ.[೭] ೧೯೪೬ರಲ್ಲಿ ಮೋಂಟ್‌ಕ್ಲೇರ್ ಹೈ ಸ್ಕೂಲ್‌ನಲ್ಲಿ ಪದವೀಧರನಾದ ನಂತರ[೮] ಆಲ್ಡ್ರಿನ್ ಮಸ್ಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (MIT) ಲಭಿಸಿದ ಪೂರ್ಣ-ವಿದ್ಯಾರ್ಥಿವೇತನವನ್ನು ನಿರಾಕರಿಸಿ, ವೆಸ್ಟ್ ಪಾಯಿಂಟ್‌ನ U.S. ಮಿಲಿಟರಿ ಅಕಾಡೆಮಿಯನ್ನು ಸೇರಿಕೊಂಡರು. 'ಬಜ್' ಎಂಬ ಅಡ್ಡಹೆಸರು ಬಾಲ್ಯದಲ್ಲಿ ಹುಟ್ಟಿಕೊಂಡಿತು: ಆತನ ಇಬ್ಬರು ಅಕ್ಕಂದಿರು ಸಣ್ಣವರಿರುವಾಗ 'ಬ್ರದರ್'ಅನ್ನು 'ಬಜರ್' ಎಂದು ತಪ್ಪಾಗಿ ಉಚ್ಚರಿಸುತ್ತಿದ್ದರು, ಅದು ನಂತರ ಬಜ್ ಎಂದು ಸಂಕ್ಷಿಪ್ತಗೊಂಡಿತು. ಆಲ್ಡ್ರಿನ್ ೧೯೭೯ರಲ್ಲಿ ಇದನ್ನು ತನ್ನ ಕಾನೂನುಬದ್ಧ ಮೊದಲ ಹೆಸರಾಗಿ ಮಾಡಿಕೊಂಡರು.[೯]
ಸೈನಿಕ ಜೀವನ
[ಬದಲಾಯಿಸಿ]ಆಲ್ಡ್ರಿನ್ ೧೯೫೧ರಲ್ಲಿ ವೆಸ್ಟ್ ಪಾಯಿಂಟ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ B.S. ನಲ್ಲಿ ತನ್ನ ತರಗತಿಯಲ್ಲೇ ಮೂರನೇ ಸ್ಥಾನ ಪಡೆದರು. ಆತ U.S. ವಾಯುಪಡೆಯಲ್ಲಿ ಎರಡನೇ ಲೆಫ್ಟೆನಂಟ್ ಆಗಿ ನಿಯೋಜಿಸಲ್ಪಟ್ಟರು ಮತ್ತು ಕೊರಿಯನ್ ಯುದ್ಧದ ಸಂದರ್ಭದಲ್ಲಿ ಜೆಟ್ ಕಾದಾಟ-ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸಿದರು. ಆತ F-೮೬ ಸೇಬರ್‌ಗಳಲ್ಲಿ ೬೬ ಕಾದಾಟದ ಮಿಷನ್‌ಗಳನ್ನು ಹಾರಿಸಿದರು ಮತ್ತು ಎರಡು ಮಿಕೋಯನ್-ಗುರೆವಿಚ್ MiG-೧೫ ವಿಮಾನಗಳನ್ನು ಹೊಡೆದುರುಳಿಸಿದರು. ಲೈಫ್ ನಿಯತಕಾಲಿಕದ ೧೯೫೩ರ ಜೂನ್ ೮ರ ಆವೃತ್ತಿಯು ಒಬ್ಬ ರಷ್ಯನ್ ಪೈಲಟ್ ತನ್ನ ಹಾನಿಗೊಳಗಾದ ವಿಮಾನದಿಂದ ಹೊರಕ್ಕೆ ಬರುತ್ತಿರುವುದನ್ನು ಆಲ್ಡ್ರಿನ್ ಗನ್ ಕ್ಯಾಮೆರಾದಿಂದ ಸೆರೆಹಿಡಿದ ಫೋಟೊಗಳನ್ನು ಪ್ರಕಟಿಸಿತು.[೧೦]
ಯುದ್ಧದ ನಂತರ, ಆಲ್ಡ್ರಿನ್ ನೇವಡಾದ ನೆಲ್ಲಿಸ್ ಏರ್ ಫೋರ್ಸ್ ಬೇಸ್‌ನಲ್ಲಿ ವಿಮಾನದಿಂದ ಗುಂಡುಹಾರಿಸುವುದನ್ನು ಕಲಿಸುವವರಾಗಿ ನೇಮಕಗೊಂಡರು ಹಾಗೂ ನಂತರ U.S. ಏರ್ ಫೋರ್ಸ್ ಅಕಾಡೆಮಿಯಲ್ಲಿ (ಇದು ಇತ್ತೀಚೆಗೆ ೧೯೫೫ರಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸಿತು) ವಿಭಾಗ ಮುಖ್ಯಸ್ಥರಿಗೆ ಸಹಾಯಕರಾದರು. ಆತ ೨೨ನೇ ಫೈಟರ್ ಸ್ಕ್ವಾಡ್ರನ್‌ನಲ್ಲಿ ಜರ್ಮನಿಯ ಬಿಟ್ಬರ್ಗ್ ಏರ್ ಬೇಸ್‌ನಲ್ಲಿ ವಿಮಾನ ಕಮಾಂಡರ್ ಆಗಿ F-೧೦೦ ಸೂಪರ್ ಸೇಬರ್‌ಗಳನ್ನು ಹಾರಿಸಿದರು. ನಂತರ ಆಲ್ಡ್ರಿನ್ MIT ಯಿಂದ ಗಗನಯಾಸಶಾಸ್ತ್ರದಲ್ಲಿ Sc.D. ಪದವಿಯನ್ನು ಪಡೆದರು. ಲೈನ್-ಆಫ್-ಸೈಟ್ ಗೈಡನ್ಸ್ ಟೆಕ್ನಿಕ್ಸ್ ಫಾರ್ ಮ್ಯಾನ್ಡ್ ಆರ್ಬಿಟಲ್ ರೆಂಡೆಜ್ವಸ್ ಆತನ ಪದವಿ ಪ್ರೌಢ ಪ್ರಬಂಧವಾಗಿತ್ತು. ಡಾಕ್ಟರೇಟ್ ಪೂರ್ಣಗೊಳಿಸಿದ ನಂತರ, ಆತ ಗಗನಯಾತ್ರಿಯಾಗಿ ಆಯ್ಕೆಯಾಗುವುದಕ್ಕಿಂತ ಮೊದಲು ಲಾಸ್ ಏಂಜಲೀಸ್‌ನ ಏರ್ ಫೋರ್ಸ್ ಸ್ಪೇಸ್ ಸಿಸ್ಟಮ್ಸ್ ಡಿವಿಜನ್‌ನ ಜೆಮಿನಿ ಟಾರ್ಗೆಟ್ ಆಫೀಸ್‌ಗೆ ನೇಮಕಗೊಂಡರು.
ನಾಸಾದಲ್ಲಿ ವೃತ್ತಿ
[ಬದಲಾಯಿಸಿ]ಆಲ್ಡ್ರಿನ್ ೧೯೬೩ರ ಅಕ್ಟೋಬರ್‌ನಲ್ಲಿ ನಾಸಾ ಗಗನಯಾತ್ರಿಗಳ ಮೂರನೇ ಗುಂಪಿನ ಭಾಗವಾಗಿ ಆಯ್ಕೆಯಾದರು. ಪೈಲಟ್ ಅನುಭವದ ಪರೀಕ್ಷೆಯು ಅಗತ್ಯವಿರಲಿಲ್ಲ, ಆದ್ದರಿಂದ ಆತ ಅರ್ಹನಾಗಿದ್ದಾರೆಂಬುದಕ್ಕೆ ಇದು ಮೊದಲ ಆಯ್ಕೆಯಾಗಿತ್ತು. ಮೂಲ ಜೆಮಿನಿ ೯ ರ ಪ್ರಧಾನ ಸಿಬ್ಬಂದಿಗಳಾದ ಎಲಿಯಟ್ ಸೀ ಮತ್ತು ಚಾರ್ಲ್ಸ್ ಬ್ಯಾಸ್ಸೆಟ್‌ರ ಸಾವಿನ ನಂತರ, ಮಿಷನ್‌ಗೆ ಕೊರತೆಯಾದ ಸಿಬ್ಬಂದಿಗಳ ಸ್ಥಾನಕ್ಕೆ ಜಿಮ್ ಲೋವೆಲ್ ಒಂದಿಗೆ ಆಲ್ಡ್ರಿನ್ ನೇಮಕಗೊಂಡರು. ಪರಿಷ್ಕೃತ ಮಿಷನ್‌ನ (ಜೆಮಿನಿ ೯A ) ಮುಖ್ಯ ಗುರಿಯು ಉದ್ದೇಶಿತ ವಾಹನದೊಂದಿಗೆ ಗೊತ್ತುಮಾಡಿಕೊಂಡ ರಹಸ್ಯಸ್ಥಾನದಲ್ಲಿ ಸಂಧಿಸುವುದಾಗಿತ್ತು. ಆದರೆ ಇದು ವಿಫಲಗೊಂಡಾಗ, ಆಲ್ಡ್ರಿನ್ ವಿಮಾನವು ಆಕಾಶದಲ್ಲಿ ಹೊಂದಿಕೊಂಡು ಸಂಧಿಸುವುದಕ್ಕಾಗಿ ಪರಿಣಾಮಕಾರಿ ಕಾರ್ಯವೊಂದನ್ನು ಪೂರ್ವಸಿದ್ಧತೆ ಇಲ್ಲದೆಯೇ ನಡೆಸಿದರು. ಆತ ಜೆಮಿನಿ ೧೨ ರ ಪೈಲಟ್ ಆಗಿ ದೃಢಪಟ್ಟರು, ಇದು ಕೊನೆಯ ಜೆಮಿನಿ ಮಿಷನ್ ಮತ್ತು EVAಗಾಗಿ ವಿಧಾನಗಳನ್ನು ಸಮರ್ಥಿಸುವ ಅಂತಿಮ ಅವಕಾಶವಾಗಿತ್ತು. ಆಲ್ಡ್ರಿನ್ ಗಗನನೌಕೆಯ ಹೊರಗಿನ ಕಾರ್ಯಕ್ಕಾಗಿ ದಾಖಲೆಯೊಂದನ್ನು ಸೃಷ್ಟಿಸಿದರು ಮತ್ತು ಗಗನಯಾತ್ರಿಗಳು ವಿಮಾನದಿಂದ ಹೊರಗೆಯೂ ಕೆಲಸ ಮಾಡಬಹುದೆಂಬುದನ್ನು ಸಾಬೀತುಪಡಿಸಿದರು.
೧೯೬೯ರ ಜುಲೈ ೨೦ರಂದು, ಆತ ಚಂದ್ರನಲ್ಲಿ ನಡೆದಾಡಿದ ಎರಡನೇ ಗಗನಯಾತ್ರಿಯಾಗಿದ್ದಾರೆ ಮತ್ತು ಬಾಹ್ಯಾಕಾಶದಲ್ಲಿ ನಡೆದಾಡಿದ ಮೊದಲ ವ್ಯಕ್ತಿಯಾಗಿದ್ದಾರೆ, ಆತನ ಒಟ್ಟು EVA ಸಮಯವನ್ನು ಅಪೋಲೋ ೧೪ ರಿಂದ ಮೀರಿಸುವವರೆಗೆ ಅದು ದಾಖಲೆಯಾಗಿತ್ತು. ಚಂದ್ರನನ್ನು ಪ್ರವೇಶಿಸುವ ಮೊದಲ ಗಗನಯಾತ್ರಿಯಾಗುವ ಆಲ್ಡ್ರಿನ್‌ನ ಅಪೇಕ್ಷೆಯ ಬಗ್ಗೆ ಅನೇಕ ಊಹನೆಗಳಿವೆ.[೧೧] ನಾಸಾದ ವಿವಿಧ ದಾಖಲೆಗಳ ಪ್ರಕಾರ, ಚಂದ್ರನನ್ನು ಪ್ರವೇಶಿಸುವ ಮೊದಲು ವ್ಯಕ್ತಿಯಾಗಿ ಆರಂಭದಲ್ಲಿ ಆತನನ್ನು ಸೂಚಿಸಲಾಗಿತ್ತು, ಆದರೆ ಅಚ್ಚುಕಟ್ಟಾಗಿ ಜೋಡಿಸಿದ ಚಾಂದ್ರಕೋಶದೊಳಗೆ ಗಗನಯಾತ್ರಿಗಳ ದೈಹಿಕ ನೆಲೆಗೊಳಿಸುವಿಕೆಯಿಂದಾಗಿ, ಕಮಾಂಡರ್ ನೈಲ್ ಆರ್ಮ್‌ಸ್ಟ್ರೋಂಗ್‌ಗೆ ವಿಮಾನದಿಂದ ಮೊದಲು ಹೊರಹೋಗಲು ಸುಲಭವಾಯಿತು. ಚಂದ್ರನನ್ನು ಪ್ರವೇಶಿಸುವ ಮೊದಲ ವ್ಯಕ್ತಿಯು ನಾಗರಿಕನಾಗಿರಬೇಕೆಂಬುದು ನಾಸಾದ ಅಪೇಕ್ಷೆಯಾಗಿತ್ತು, ಅಂತೆಯೇ ಆರ್ಮ್‌ಸ್ಟ್ರೋಗ್ ಸಹ ನಾಗರಿಕರಾಗಿದ್ದರು.
ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಧಾರ್ಮಿಕ ಕ್ರಿಯೆಯನ್ನು ಆಚರಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಆಲ್ಡ್ರಿನ್ ಪ್ರೆಸ್ಬಿಟೀರಿಯನ್ ಪಂಥದವರಾಗಿದ್ದಾರೆ. ಚಂದ್ರನ ಮೇಲೆ ಇಳಿದ ನಂತರ, ಆಲ್ಡ್ರಿನ್ ರೇಡಿಯೊ ಮುಖಾಂತರ ಭೂಮಿಗೆ ಈ ಸಂದೇಶವನ್ನು ಕಳುಹಿಸಿದರು: 'ಯಾರಾದರೂ ಮತ್ತು ಎಲ್ಲಿಂದಾದರೂ ಆಲಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ, ಒಂದು ಕ್ಷಣ ನಿಂತು, ಕಳೆದ ಕೆಲವು ಗಂಟೆಗಳಲ್ಲಿ ನಡೆದ ಘಟನೆಗಳ ಬಗ್ಗೆ ಆಲೋಚಿಸಿ ಮತ್ತು ತಮ್ಮದೇ ಆದ ರೀತಿಯಲ್ಲಿ ಧನ್ಯವಾದಗಳನ್ನು ಹೇಳಿ ಎಂದು ನಾನು ಈ ಸಂದರ್ಭದಲ್ಲಿ ಕೇಳಲು ಬಯಸುತ್ತೇನೆ'. ಆತ ಚಂದ್ರನ ಮೇಲೆ ತನಗೆ ತಾನೇ ಕಮ್ಯೂನಿಯನ್ಅನ್ನು ನೀಡಿದರು(ಪ್ರಭುಭೋಜನ ಸಂಸ್ಕಾರದಲ್ಲಿ ಭಾಗವಹಿಸಿದರು). ಆದರೆ ಆತ ಇದನ್ನು ರಹಸ್ಯವಾಗಿರಿಸಿದರು ಏಕೆಂದರೆ ಅಪೋಲೋ ೮ರಲ್ಲಿ ಜೆನೆಸಿಸ್(ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ ವಿಶ್ವಸೃಷ್ಟಿಯನ್ನು ವಿವರಿಸುವ ಮೊದಲ ಪರ್ವ)ಅನ್ನು ಓದಿದುಕ್ಕಾಗಿ ನಾಸ್ತಿಕ ತೀವ್ರವಾದಿ ಮ್ಯಾಡಲಿನ್ ಮುರ್ರೆ ಒಹೇರ್ ದಾವೆಯೊಂದನ್ನು ಹೂಡಿದ್ದರು.[೧೨] ಚರ್ಚಿನ ಹಿರಿಯ ಆಲ್ಡ್ರಿನ್ ಡೀನ್ ವುಡ್ರಫ್ ನೀಡಿದ ಪಾಸ್ಟರ್‌ನ ಮನೆಯ ಕಮ್ಯೂನಿಯನ್ ಕಿಟ್ಅನ್ನು ಬಳಸಿದರು ಮತ್ತು ವೆಬ್‌ಸ್ಟರ್ ಪ್ರೆಸ್ಬಿಟಿರೀಯನ್ ಚರ್ಚಿನಲ್ಲಿ ಆತನ ಪಾಸ್ಟರ್ ಬಳಸಿದ ಪದಗಳನ್ನು ಪಠಿಸಿದರು.[೧೩][೧೪] ಟೆಕ್ಸಾಸ್‌ನ ವೆಬ್‌ಸ್ಟರ್‌ನ (ಜೋನ್ಸನ್ ಸ್ಪೇಸ್ ಸೆಂಟರ್‌ನ ಹತ್ತಿರವಿರುವ ಒಂದು ಹೌಸ್ಟನ್ ಉಪನಗರ) ಸ್ಥಳೀಯ ಕೂಟ ವೆಬ್‌ಸ್ಟರ್ ಪ್ರೆಸ್ಬಿಟೀರಿಯನ್ ಚರ್ಚ್ ಚಂದ್ರನಲ್ಲಿ ಕಮ್ಯೂನಿಯನ್‌ಗೆ ಬಳಸಿದ ಚಾಲಿಸ್ಅನ್ನು ಹೊಂದಿದೆ ಮತ್ತು ಆ ಘಟನೆಯನ್ನು ವಾರ್ಷಿಕವಾಗಿ ಜುಲೈ ೨೦ಕ್ಕೆ ಹತ್ತಿರವಾದ ಭಾನುವಾರದಂದು ಕೊಂಡಾಡುತ್ತದೆ.[೧೫] ಫ್ರೀಮೇಸನ್ ಆಲ್ಡ್ರಿನ್ ಗ್ರ್ಯಾಂಡ್ ಲಾಡ್ಜ್ ಆಫ್ ಟೆಕ್ಸಾಸ್‌ನ ಪರವಾಗಿ ಚಂದ್ರನಲ್ಲಿ ಮಸೋನಿಕ್ ಭೂಪ್ರದೇಶದ ಅಧಿಕಾರವನ್ನು ಕೇಳಲು ಗ್ರ್ಯಾಂಡ್ ಮಾಸ್ಟರ್ ಜೆ. ಗೇ ಸ್ಮಿತ್‌ರ ಒಂದು ವಿಶೇಷ ಡೆಪ್ಯೂಟೈಜೇಶನ್ಅನ್ನೂ ಕೊಂಡೊಯ್ದರು.[೧೬]
ನಿವೃತ್ತಿ
[ಬದಲಾಯಿಸಿ]ನಾಸಾವನ್ನು ಬಿಟ್ಟು ನಂತರ ಆಲ್ಡ್ರಿನ್ ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ಏರ್ ಫೋರ್ಸ್ ಬೇಸ್‌ನ U.S. ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನ ದಳಪತಿಯಾಗಿ ನೇಮಕಗೊಂಡರು. ೧೯೭೨ರ ಮಾರ್ಚ್‌ನಲ್ಲಿ, ಆಲ್ಡ್ರಿನ್ ೨೧ ವರ್ಷ ಸೇವೆಯ ನಂತರ ಸಕ್ರಿಯ ಉದ್ಯೋಗದಿಂದ ನಿವೃತ್ತರಾದರು ಮತ್ತು ವ್ಯವಸ್ಥಾಪಕರಾಗಿ ವಾಯುಪಡೆಗೆ ಮತ್ತೆ ಹಿಂದಿರುಗಿದರು, ಆದರೆ ವೈಯಕ್ತಿಕ ಸಮಸ್ಯೆಗಳು ಅವರ ವೃತ್ತಿಯ ಮೇಲೆ ದುಷ್ಪ್ರಭಾವ ಬೀರಿದವು. ಆತ ಆತ್ಮಚರಿತ್ರೆಗಳಾದ ೧೯೭೩ರಲ್ಲಿ ಪ್ರಕಟವಾದ ರಿಟರ್ನ್ ಟು ಅರ್ತ್ ಮತ್ತು ೨೦೦೯ರಲ್ಲಿ ಪ್ರಕಟವಾದ ಮ್ಯಾಗ್ನಿಫಿಸೆಂಟ್ ಡಿಸೊಲೇಶನ್ , ನಾಸಾ ವೃತ್ತಿಜೀವನದ ನಂತರ ಮಾನಸಿಕ ಖಿನ್ನತೆ ಮತ್ತು ಅತಿಯಾದ ಕುಡಿತದಿಂದ ಆತ ಅನುಭವಿಸಿದ ಕಷ್ಟಗಳ ಬಗ್ಗೆ ತಿಳಿಸುತ್ತವೆ.[೧೭] ಆತನ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಕಂಡುಹಿಡಿದ ನಂತರ ಮತ್ತು ಲೋಯಿಸ್ ಆಲ್ಡ್ರಿನ್ ಒಂದಿಗೆ ಮದುವೆಯಾದ ನಂತರ ಆತನ ಜೀವನವು ಗಮನಾರ್ಹವಾಗಿ ಸುಧಾರಿಸಿತು. ನಾಸಾದಿಂದ ನಿವೃತ್ತರಾದಂದಿನಿಂದ ಆತ ಬಾಹ್ಯಾಕಾಶ ಪರಿಶೋಧನೆಗೆ ಉತ್ತೇಜನ ನೀಡುವುದನ್ನು ಮುಂದುವರಿಸಿದರು, ಬಜ್ ಆಲ್ಡ್ರಿನ್ಸ್ ರೇಸ್ ಇನ್ಟು ಸ್ಪೇಸ್ (೧೯೯೩) ಎಂಬ ಒಂದು ಕಂಪ್ಯೂಟರ್ ಆಟವನ್ನು ಸೃಷ್ಟಿಸಿದರು. ಬಾಹ್ಯಾಕಾಶ ಪರಿಶೋಧನೆಯನ್ನು ಇನ್ನಷ್ಟು ಉತ್ತೇಜಿಸಲು ಮತ್ತು ಮೊದಲು ಚಂದ್ರನನ್ನು ಪ್ರವೇಶಿಸಿದುದರ ೪೦ನೇ ವಾರ್ಷಿಕೋತ್ಸವವನ್ನು ಆಚರಿಸಲು, ಬಜ್ ಸ್ನೂಪ್ ಡೋಗ್ಗ್, ಕ್ವಿನ್ಸಿ ಜೋನ್ಸ್, ತಾಲಿಬ್ ಕ್ವೇಲಿ ಮತ್ತು ಸೌಲ್ಜ ಬಾಯ್ ಮೊದಲಾದವರೊಂದಿಗೆ ಸೇರಿ 'ರಾಕೆಟ್ ಎಕ್ಸ್‌ಪೀರಿಯನ್ಸ್' ಎಂಬ ರ‌್ಯಾಪ್ ಏಕಗೀತ ಮತ್ತು ವೀಡಿಯೊವನ್ನು ರಚಿಸಿದರು. ವೀಡಿಯೊ ಮತ್ತು ಹಾಡಿನ ಮಾರಾಟದಿಂದ ಬರುವ ಲಾಭವು ಬಜ್‌ನ ಲಾಭೋದ್ದೇಶವಿಲ್ಲದ ಸಂಸ್ಥೆ ಶೇರ್‌ಸ್ಪೇಸ್‌ಗೆ ಉಪಯೋಗಕ್ಕೆ ಬರುತ್ತದೆ.[೧೮]
೨೦೦೯ರ ಜುಲೈ ೨೨ರ C-ಸ್ಪ್ಯಾನ್ ಒಂದಿಗಿನ ಸಂದರ್ಶನದಲ್ಲಿ ಆತನನ್ನು 'ಫೋಬೋಸ್ ಏಕಶಿಲೆ' ಎಂದು ಕರೆಯಲಾಗಿದೆ: 'ಮಾನವನು ಹಿಂದೆ ಹೋಗಿರದ ಸ್ಥಳಗಳಿಗೆ ನಾವು ಧೈರ್ಯದಿಂದ ಹೋಗಬೇಕು. ಧೂಮಕೇತುಗಳ ಮೂಲಕ ಹಾರಬೇಕು, ಕ್ಷುದ್ರಗ್ರಹಗಳಲ್ಲಿಗೆ ಭೇಟಿ ನೀಡಬೇಕು, ಮಂಗಳ ಗ್ರಹದ ಉಪಗ್ರಹಗಳನ್ನು ಸಂಧಿಸಬೇಕು. ಅಲ್ಲಿ ಒಂದು ಏಕಶಿಲೆಯಿದೆ. ಇದು ಪ್ರತಿ ಏಳು ಗಂಟೆಗಳಿಗೊಮ್ಮೆ ಮಂಗಳ ಗ್ರಹದ ಸುತ್ತ ಸುತ್ತುವ ಈ ಆಲೂಗೆಡ್ಡೆ ಆಕಾರದ ವಸ್ತುವಿನ ಮೇಲಿರುವ ಒಂದು ಅಸಾಮಾನ್ಯ ರಚನೆಯಾಗಿದೆ. 'ಅದನ್ನು ಅಲ್ಲಿ ಯಾರು ಇಟ್ಟಿದ್ದಾರೆ?' ಎಂಬುದನ್ನು ಜನರು ಯಾವಾಗ ಕಂಡುಹಿಡಿಯುತ್ತಾರೆ? ಅದನ್ನು ಈ ಪ್ರಪಂಚವು ಅಲ್ಲಿ ಇಟ್ಟಿದೆ. ನೀವು ಆರಿಸಿದರೆ, ದೇವರು ಅದನ್ನು ಅಲ್ಲಿ ಇಟ್ಟಿದ್ದಾರೆ'.[೧೯]
ಆಲ್ಡ್ರಿನ್ ಸೈಕ್ಲರ್
[ಬದಲಾಯಿಸಿ]೧೯೮೫ರಲ್ಲಿ, ಆಲ್ಡ್ರಿನ್ ಒಂದು ವಿಶೇಷ ಬಾಹ್ಯಾಕಾಶನೌಕೆ ಕ್ಷಿಪಣಿ ಪಥವು ಅಸ್ತಿತ್ವದಲ್ಲಿದೆಯೆಂದು ಸೂಚಿಸಿದರು, ಅದನ್ನು ಈಗ ಆಲ್ಡ್ರಿನ್ ಸೈಕ್ಲರ್ ಎಂದು ಕರೆಯಲಾಗುತ್ತದೆ.[೨೦][೨೧] ಆಲ್ಡ್ರಿನ್ ಸೈಕ್ಲರ್ ಕ್ಷಿಪಣಿ ಪಥದಲ್ಲಿ ಚಲಿಸುವ ಬಾಹ್ಯಾಕಾಶನೌಕೆಯು ಭೂಮಿ ಮತ್ತು ಮಂಗಳ ಗ್ರಹಗಳ ಹತ್ತಿರ ಒಂದು ನಿಯತ (ಆವರ್ತ) ಕ್ರಮದಲ್ಲಿ ಸಾಗುತ್ತದೆ. ಆಲ್ಡ್ರಿನ್ ಸೈಕ್ಲರ್ ಮಂಗಳ ಸೈಕ್ಲರ್‌ಗೆ ಒಂದು ಉದಾಹರಣೆಯಾಗಿದೆ. ಅತ್ಯಂತ ಕ್ಲಿಷ್ಟವಾದ ಬಾಹ್ಯಾಕಾಶ ನಡಿಗೆಗೆ ಮತ್ತು ಬಾಹ್ಯಾಕಾಶ ನಿರ್ಹವಹಾ ಸಾಮರ್ಥ್ಯಕ್ಕೆ ಗಗನಯಾತ್ರಿಗಳನ್ನು ಉತ್ತಮ ರೀತಿಯಲ್ಲಿ ತಯಾರು ಮಾಡಲು ಅವರಿಗೆ ನೀರಿನಡಿಯಲ್ಲಿ ತರಬೇತಿ ನೀಡುವ ಯೋಚನೆಯು ಅಸ್ತಿತ್ವಕ್ಕೆ ಬರಲು ಈತ ಕಾರಣೀಭೂತರಾಗಿದ್ದಾರೆ.
ನಾಸಾದ ಖಂಡನೆ
[ಬದಲಾಯಿಸಿ]೨೦೦೩ರ ಡಿಸೆಂಬರ್‌ನಲ್ಲಿ, ಆಲ್ಡ್ರಿನ್ ನ್ಯೂಯಾರ್ಕ್ ಟೈಮ್ಸ್ ನಲ್ಲಿ ನಾಸಾದ ಗುರಿಗಳನ್ನು ಖಂಡಿಸುವ ಲೇಖನವೊಂದನ್ನು ಪ್ರಕಟಿಸಿದರು.[೨೨] ಅದರಲ್ಲಿ, ಆತ ನಾಸಾದ ಬಾಹ್ಯಾಕಾಶ-ನೌಕೆಯೊಂದರ ಅಭಿವೃದ್ಧಿಯು ಯಾವುದೇ ಸರಕಿಲ್ಲದೆ ಅಥವಾ ಸ್ವಲ್ಪ ಸರಕನ್ನು ಒಯ್ಯುವ ಸಾಮರ್ಥ್ಯದೊಂದಿಗೆ ಒಮ್ಮೆಗೆ ಕೇವಲ ನಾಲ್ಕು ಗಗನಯಾತ್ರಿಗಳನ್ನು ಸಾಗಿಸಲು ಸೀಮಿತಗೊಂಡಿದೆಯೆಂದು ಕಳವಳ ವ್ಯಕ್ತಪಡಿಸಿದರು ಹಾಗೂ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಮತ್ತೊಮ್ಮೆ ಕಳುಹಿಸುವ ಗುರಿಯು ಹೊಸ ಸಾಧನೆಗಳನ್ನು ಮಾಡಲು ಪ್ರಯತ್ನಿಸುವುದಾಗಿರದೆ ಹೆಚ್ಚು ಪ್ರಶಂಸೆಯನ್ನು ಪಡೆಯುವುದಾಗಿದೆಯೆಂದು ಹೇಳಿದರು.
ಮಾನವನಿಂದ ಹುಟ್ಟಿಕೊಂಡ ಜಾಗತಿಕ ತಾಪ ಏರಿಕೆಯ ಬಗ್ಗೆ ಸಂಶಯ
[ಬದಲಾಯಿಸಿ]೨೦೦೯ರಲ್ಲಿ, ಆಲ್ಡ್ರಿನ್ ಪ್ರಸ್ತುತದ ವಾಯುಗುಣ ಬದಲಾವಣೆಗೆ ಮಾನವರು ಕಾರಣರಾಗಿದ್ದಾರೆಂಬುದನ್ನು ನಂಬುವುದಿಲ್ಲವೆಂದು ಹೇಳಿದ್ದಾರೆ: 'ವಾಯುಗುಣವು ಶತಕೋಟಿ ವರ್ಷಗಳಿಂದಲೂ ಬದಲಾಗುತ್ತಿದೆಯೆಂದು ನಾನು ಭಾವಿಸುತ್ತೇನೆ. ಅದು ಈಗ ಬಿಸಿಯಾಗುತ್ತಿದ್ದರೆ, ನಂತರ ತಣ್ಣಗಾಗಬಹುದು. ಅಲ್ಪಕಾಲದ ಘಟನೆಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವುದನ್ನು ಮತ್ತು ವಾಯುಗುಣವನ್ನು ಈಗ ಇರುವಂತೆ ಇಡಲು ನಮ್ಮ ಸಂಪನ್ಮೂಲಗಳನ್ನು ಬರಿದುಮಾಡುವುದನ್ನು ನಾನು ಒಪ್ಪುವುದಿಲ್ಲ. ನಾವು ಇದನ್ನು ಮಾಡುತ್ತಿಲ್ಲ, ಇದಕ್ಕೆ ಪ್ರಪಂಚವೇ ಕಾರಣವಾಗಿದೆಯೆಂದು ನಾನು ಭಾವಿಸುತ್ತೇನೆ'.[೨೩]
ಪುಸ್ತಕಗಳು
[ಬದಲಾಯಿಸಿ]ಆಲ್ಡ್ರಿನ್ ಸಹ-ಲೇಖಕರಾದ ಪುಸ್ತಕಗಳೆಂದರೆ - ರಿಟರ್ನ್ ಟು ಅರ್ತ್ (೧೯೭೩), ಮೆನ್ ಫ್ರಮ್ ಅರ್ತ್ (೧೯೮೯) ಮತ್ತು ಮ್ಯಾಗ್ನಿಫಿಸೆಂಟ್ ಡಿಸೊಲೇಶನ್ (೨೦೦೯). ಆತ ಎನ್ಕೌಂಟರ್ ವಿದ್ ಟೈಗರ್ (೧೯೯೬) ಮತ್ತು ದಿ ರಿಟರ್ನ್ (೨೦೦೦) ಮೊದಲಾದ ವೈಜ್ಞಾನಿತ-ಕಾಲ್ಪನಿಕ ಕಾದಂಬರಿಗಳಲ್ಲಿ ಜಾನ್ ಬಾರ್ನೆಸ್ ಒಂದಿಗೆ ಸಹ-ಲೇಖಕರಾಗಿದ್ದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಆಲ್ಡ್ರಿನ್ ಮೂರು ಬಾರಿ ವಿವಾಹವಾಗಿದ್ದಾರೆ: ಜೋನ್ ಅರ್ಚರ್, ಈಕೆಯೊಂದಿಗೆ ಆತ ಜೇಮ್ಸ್, ಜ್ಯಾನಿಸ್ ಮತ್ತು ಆಡ್ರಿವ್ ಎಂಬ ಮೂರು ಮಕ್ಕಳನ್ನು ಹೊಂದಿದ್ದಾರೆ; ಬೆವರ್ಲಿ ಜಿಲ್; ಈಗಿನ ಪತ್ನಿ ಲೋಯಿಸ್ ಡ್ರಿಗ್ಸ್ ಕೆನನ್, ಈಕೆಯನ್ನು ಆತ ೧೯೮೮ರ ಪ್ರೇಮಿಗಳ ದಿನದಂದು ಮದುವೆಯಾದರು.
ಖಿನ್ನತೆ ಮತ್ತು ವಿಪರೀತ ಕುಡಿತದ ವಿರುದ್ಧದ ಆತನ ಸಂಘರ್ಷಗಳನ್ನು ಇತ್ತೀಚಿನ ಮ್ಯಾಗ್ನಿಫಿಸೆಂಟ್ ಡಿಸೊಲೇಶನ್ ನಲ್ಲಿ ದಾಖಲಿಸಲಾಗಿದೆ.[೨೪][೨೫] ಆಲ್ಡ್ರಿನ್ ರಿಪಬ್ಲಿಕನ್ ಪಕ್ಷದ ಸಕ್ರಿಯ ಬೆಂಬಲಿಗರಾಗಿದ್ದಾರೆ, ಕಾಂಗ್ರೆಸ್‌ನ GOP ಸದಸ್ಯರಿಗೆ ಬಂಡವಾಳ ಒದಗಿಸುತ್ತಾರೆ.[೨೬] ೨೦೦೭ರಲ್ಲಿ, ಆಲ್ಡ್ರಿನ್ ಇತ್ತೀಚೆಗೆ ಮುಖಮರ್ದನ ಮಾಡಿಕೊಂಡಿದ್ದಾರೆಂದು ಟೈಮ್ ನಿಯತಕಾಲಿಕದಲ್ಲಿ ದೃಢಪಡಿಸಿದ್ದಾರೆ;[೨೭] ತನ್ನನ್ನು ಬಾಹ್ಯಾಕಾಶಕ್ಕೆ ಪರಿಚಯಿಸಿದ G-ಪಡೆಯು ತನ್ನ ಗಲ್ಲವು ಇಳಿಬೀಳುವಂತೆ ಮಾಡಿತು, ಆದ್ದರಿಂದ ಸ್ವಲ್ಪ ಗಮನ ಹರಿಸಬೇಕಾಯಿತು ಎಂದು ಆತ ತಮಾಷೆಯಾಗಿ ಹೇಳಿದ್ದಾರೆ.[೨೭]
ಗೌರವಗಳು
[ಬದಲಾಯಿಸಿ]- ಮಿಲಿಟರಿ ಪ್ರಶಸ್ತಿಗಳೆಂದರೆ - ಏರ್ ಫೋರ್ಸ್ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಮೆಡಲ್, ಲೀಜನ್ ಆಫ್ ಮೆರಿಟ್, ಡಿಸ್ಟಿಂಗ್ವಿಶ್ಡ್ ಫ್ಲೈಯಿಂಗ್ ಕ್ರಾಸ್‌ನ ಎರಡು ಪ್ರಶಸ್ತಿಗಳು, ಏರ್ ಮೆಡಲ್‌ನ ಮೂರು ಪ್ರಶಸ್ತಿಗಳು.
- ನಾಸಾ ಪ್ರಶಸ್ತಿಗಳೆಂದರೆ - ನಾಸಾ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಮೆಡಲ್, ನಾಸಾ ಎಕ್ಸೆಪ್ಷನಲ್ ಸರ್ವಿಸ್ ಮೆಡಲ್ ಮತ್ತು ನಾಸಾ ಸ್ಪೇಸ್ ಫ್ಲೈಟ್ ಮೆಡಲ್‌ನ ಎರಡು ಪ್ರಶಸ್ತಿಗಳು.
- ನಾಗರಿಕ ಪ್ರಶಸ್ತಿಗಳು ಮತ್ತು ಬಹುಮಾನಗಳೆಂದರೆ - ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಮ್, ರಾಬರ್ಟ್ ಜೆ. ಕೊಲ್ಲಿಯರ್ ಟ್ರೋಫಿ, ರಾಬರ್ಟ್ ಹೆಚ್. ಗೊಡ್ಡಾರ್ಡ್ ಮೆಮೋರಿಯಲ್ ಟ್ರೋಫಿ ಮತ್ತು ಹಾರ್ಮನ್ ಇಂಟರ್‌ನ್ಯಾಷನಲ್ ಟ್ರೋಫಿ.
- ಚಂದ್ರನ ಮೇಲೆ ಅಪೋಲೋ ೧೧ ಇಳಿಯುವ ಸ್ಥಳದ ಹತ್ತಿರದ ಜ್ವಾಲಾಮುಖಿ ಕುಂಡ ಆಲ್ಡ್ರಿನ್ ಮತ್ತು ಕ್ಷುದ್ರಗ್ರಹ ೬೪೭೦ ಆಲ್ಡ್ರಿನ್[೨೮] ಮೊದಲಾದವಕ್ಕೆ ಆತನ ಗೌರವಾರ್ಥವಾಗಿ ಹೆಸರಿಡಲಾಗಿದೆ.
- ೧೯೬೭ರಲ್ಲಿ, ಆಲ್ಡ್ರಿನ್ ಗುಸ್ಟಾವಸ್ ಅಡೋಲ್ಫಸ್ ಕಾಲೇಜ್‌ನಿಂದ ವಿಜ್ಞಾನದಲ್ಲಿ ಗೌರವ ಡಾಕ್ಟರೇಟ್ಅನ್ನು ಪಡೆದರು.
- ೨೦೦೧ರಲ್ಲಿ, ಅಧ್ಯಕ್ಷ ಬುಶ್ ಆಲ್ಡ್ರಿನ್‌ರನ್ನು ಕಮೀಷನ್ ಆನ್ ದಿ ಫ್ಯೂಚರ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಏರೋಸ್ಪೇಸ್ ಇಂಡಸ್ಟ್ರಿಗೆ ನೇಮಿಸಿದರು.[೨೯][೩೦]
- ಆಲ್ಡ್ರಿನ್ ಮಕ್ಕಳ ದತ್ತಿಸಂಸ್ಥೆ ವೆರೈಟಿಯಿಂದ ೨೦೦೩ರ ಮಾನವಹಿತ ಪ್ರತಿಪಾದಕ ಪ್ರಶಸ್ತಿಯನ್ನು ಪಡೆದರು. ಈ ಸಂಸ್ಥೆಯ ಪ್ರಕಾರ, 'ಅದು ಮಾನವರ ಬಗ್ಗೆ ಅಸಾಮಾನ್ಯ ಗ್ರಹಿಕೆ, ಪರಾನುಭೂತಿ ಮತ್ತು ನಿಷ್ಠೆಯನ್ನು ತೋರಿಸಿದ ವ್ಯಕ್ತಿಗೆ ಈ ಪ್ರಶಸ್ತಿಯನ್ನು ನೀಡಿದೆ.'[೩೧]
- ಆಲ್ಡ್ರಿನ್ ನ್ಯಾಷನಲ್ ಸ್ಪೇಸ್ ಸೊಸೈಟಿಯ ಗವರ್ನರ್‌ಗಳ ಮಂಡಲಿಯಲ್ಲಿದ್ದಾರೆ ಮತ್ತು ಆತ ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು; ಆಸ್ಟ್ರನಾಟ್ ಹಾಲ್ ಆಫ್ ಫೇಮ್‌ನಲ್ಲಿ ದಾಖಲಾಗಿದ್ದಾರೆ; ದಿ ಪ್ಲಾನೆಟರಿ ಸೊಸೈಟಿಯ ಸದಸ್ಯರಾಗಿದ್ದಾರೆ, ಹಿಂದೆ-ರೆಕಾರ್ಡ್ ಮಾಡಿದ ಆಲ್ಡ್ರಿನ್‌ರ ಧ್ವನಿಯು ಈ ಸೊಸೈಟಿಯ ಪ್ಲಾನಿಟರಿ ರೇಡಿಯೊದ ಪ್ರತಿಯೊಂದು ಎಪಿಸೋಡ್‌ನಲ್ಲಿ ಪ್ರಸಾರವಾಗುತ್ತಿದೆ.
- ೨೦೦೬ರಲ್ಲಿ, ಸ್ಪೇಸ್ ಫೌಂಡೇಶನ್ ಅದರ ಉನ್ನತ ಗೌರವ ಜನರಲ್ ಜೇಮ್ಸ್ ಇ. ಹಿಲ್ ಲೈಫ್‌ಟೈಮ್ ಸ್ಪೇಸ್ ಅಚೀವ್ಮೆಂಟ್ ಪ್ರಶಸ್ತಿ[೩೨] ಯನ್ನು ಆಲ್ಡ್ರಿನ್‌ಗೆ ಪ್ರದಾನ ಮಾಡಿತು. ಬಾಹ್ಯಾಕಾಶದ ಬಳಕೆ, ಅಭಿವೃದ್ಧಿ ಮತ್ತು ಪರಿಶೋಧನೆ ಅಥವಾ ಬಾಹ್ಯಾಕಾಶ ತಂತ್ರಜ್ಞಾನ, ಮಾಹಿತಿ, ಅಂಶಗಳು ಅಥವಾ ಶೈಕ್ಷಣಿಕ, ಸಾಂಸ್ಕೃತಿಕ, ಕೈಗಾರಿಕಾ ಮೂಲಗಳ ಬಳಕೆಯ ಮೂಲಕ ಜನರ ಕ್ಷೇಮಾಭಿವೃದ್ಧಿ ಅಥವಾ ಸುಧಾರಣೆಗಾಗಿ ಜೀವಮಾನ ಕೊಡುಗೆಗಳು ಅಥವಾ ಮಾನವರಿಗೆ ಉಪಕರಿಸುವ ಇತರ ಕಸುಬುಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡ ಮಹೋನ್ನತರಿಗೆ ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
- ದೂರದರ್ಶನ ಉದ್ಯಮಕ್ಕೆ ನೀಡಿದ ಕೊಡುಗೆಗಳಿಗಾಗಿ, ಬಜ್ ಆಲ್ಡ್ರಿನ್‌ರಿಗೆ ಹಾಲಿವುಡ್ ಆಂಡ್ ವೈನ್‌ನ ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಒಂದು ಸ್ಟಾರ್ಅನ್ನು ನೀಡಿ ಗೌರವಿಸಲಾಗಿದೆ.[೩೩]
- ಈತ ೨೦೦೭ರಲ್ಲಿ ನ್ಯೂಜೆರ್ಸಿ ಹಾಲ್ ಆಫ್ ಫೇಮ್‌ನಲ್ಲಿ ದಾಖಲಾಗಿದ್ದಾರೆ.
- ೨೦೦೯ರಲ್ಲಿ, ಅಧ್ಯಕ್ಷ ಒಬಾಮ ಆಲ್ಡ್ರಿನ್, ಆತನ ಅಪೋಲೋ ೧೧ರ ಸಹ-ಸಿಬ್ದಂದಿಗಳು ಮತ್ತು ಜಾನ್ ಗ್ಲೆನ್ ಮೊದಲಾದವರಿಗೆ ಕಾಂಗ್ರೆಶನಲ್ ಗೋಲ್ಡ್ ಮೆಡಲ್ಅನ್ನು ನೀಡುವ ಶಾಸನಕ್ಕೆ ಸಹಿಹಾಕಿದರು.
- ೨೦೧೦ರ ಸ್ಪೇಸ್ ಫೌಂಡೇಶನ್ ಸಮೀಕ್ಷೆಯಲ್ಲಿ, ಆಲ್ಡ್ರಿನ್‌ಗೆ #೯ನೇ ಸುಪ್ರಸಿದ್ಧ ಬಾಹ್ಯಾಕಾಶ ನಾಯಕ ಸ್ಥಾನವನ್ನು ನೀಡಲಾಯಿತು (ಈ ಸ್ಥಾನವನ್ನು ಆತ ಗಸ್ ಗ್ರಿಸ್ಸಮ್ ಮತ್ತು ಅಲನ್ ಶೆಪಾರ್ಡ್ ಒಂದಿಗೆ ಹಂಚಿಕೊಂಡರು).[೩೪]
ಪಾಪ್ ಸಂಸ್ಕೃತಿ ಮತ್ತು ಮಾಧ್ಯಮ
[ಬದಲಾಯಿಸಿ]This article appears to contain trivial, minor, or unrelated references to popular culture. (May 2010) |
- ಆಲ್ಡ್ರಿನ್ ದಿ ಸಿಂಪ್ಸನ್ಸ್ ಎಂಬ ಆನಿಮೇಶನ್-ಮಾಡಿದ ಸಂದರ್ಭ-ಹಾಸ್ಯದ "ಡೀಪ್ ಸ್ಪೇಸ್ ಹೋಮರ್" ಎಂಬ ಶೀರ್ಷಿಕೆಯ ಒಂದು ಎಪಿಸೋಡ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅದರಲ್ಲಿನ ಮುಖ್ಯ ಪಾತ್ರ ಹೋಮರ್ ಸಿಂಪ್ಸನ್ ನಾಸಾಕ್ಕೆ ಅದರ ಮೊದಲ 'ಆವರೇಜ್ ಜೋ' ಗಗನಯಾತ್ರಿಯಾಗಿ ನೇಮಕಗೊಳ್ಳುತ್ತಾನೆ. ಚಂದ್ರನನ್ನು ಪ್ರವೇಶಿಸಿದ ಎರಡನೇ ವ್ಯಕ್ತಿಯೆಂಬ ತನ್ನ ಸ್ಥಾನದ ಬಗ್ಗೆ ಆಲ್ಡ್ರಿನ್ ತುಂಬಾ ಉತ್ತಮ ರೀತಿಯ ಹಾಸ್ಯ ಮಾಡಿದ್ದಾರೆ. ಆತನ ಹೀಗೆಂದು ಹೇಳಿದ್ದಾರೆ - 'ಎರಡನೆಯದು ಮೊದಲ ನಂತರ ಬರುತ್ತದೆ.
!'
- ಬ್ರಿಟಿಷ್ ದೂರದರ್ಶನ ಕಾಮಿಡಿ ಗುಂಪು ಮಾಂಟಿ ಪೈತಾನ್ ೧೯೭೦ರ ಅಕ್ಟೋಬರ್ ೨೦ರಂದು, "ಬಜ್ ಆಲ್ಡ್ರಿನ್ ಶೊ" ಎಂಬ ಒಂದು ಎಪಿಸೋಡ್ಅನ್ನು ಪ್ರದರ್ಶಿಸಿತು. ಅದರಲ್ಲಿ "ದಿ ಸ್ಟಾರ್-ಸ್ಪ್ಯಾಂಗ್ಲೆಡ್ ಬ್ಯಾನರ್" ಪ್ರದರ್ಶನ ಮಾಡಿದಾಗ ಉತ್ತಮ ಪ್ರಶಂಸೆ ಬರದಿದ್ದುದಕ್ಕೆ ಹಿನ್ನೆಲೆಯಾಗಿ ಆತನ ಬಗ್ಗೆ ಮತ್ತು ಅಧಿಕೃತ ನಾಸಾದಲ್ಲಿನ ಆತನ ಪಾತ್ರದ (ಮೇಲಿನ ಮಾಹಿತಿಯನ್ನು ಗಮನಿಸಿ) ಬಗ್ಗೆ ಉಲ್ಲೇಖಿಸಿತು.
- ಮಾನಸಿಕ ಖಿನ್ನತೆ ಮತ್ತು ಅತಿಯಾದ ಕುಡಿತದೊಂದಿಗಿನ ಆಲ್ಡ್ರಿನ್‌ರ ಸಂಘರ್ಷಗಳನ್ನು ವಿವರಿಸಿದ ಆತನ ಎರಡು ಆತ್ಮಚರಿತ್ರೆಗಳಲ್ಲಿ ಒಂದರ ಆಧಾರದಲ್ಲಿ ನಿರ್ಮಿಸಿದ ೧೯೭೬ರ ಟಿವಿ-ಚಲನಚಿತ್ರ ರಿಟರ್ನ್ ಟು ಅರ್ತ್ ನಲ್ಲಿ ಕ್ಲಿಫ್ ರಾಬರ್ಟ್ಸನ್ ಆಲ್ಡ್ರಿನ್‌ರ ಪಾತ್ರದಲ್ಲಿ ಅಭಿನಯಿಸಿದರು.
- ೧೯೮೬ರಲ್ಲಿ, ಸ್ಪೇಸ್ ಶಟಲ್ ಚಾಲೆಂಜರ್ ದುರ್ಘಟನೆಯಲ್ಲಿ ಅದರ ಎಲ್ಲಾ ಸಿಬ್ಬಂದಿಗಳು ಸಾವನ್ನಪ್ಪಿದ ನಂತರ, ಆತ ಪಂಕಿ ಬ್ರೂಸ್ಟರ್ ನ ಎಪಿಸೋಡ್ "ಆಕ್ಸಿಡೆಂಟ್ಸ್ ಹ್ಯಾಪನ್"ನಲ್ಲಿ ತಾನಾಗಿಯೇ ಕಾಣಿಸಿಕೊಂಡರು, ಅದರಲ್ಲಿ ಆತ ಎದೆಗುಂದಿದ ಪಂಕಿಗೆ ಗಗನಯಾತ್ರಿಯಾಗುವ ಕನಸನ್ನು ಗುರಿಯಾಗಿಟ್ಟುಕೊಂಡು ಹೋಗುವುದನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿದರು.
- ಆಲ್ಡ್ರಿನ್ ೧೯೯೬ರ ನವೆಂಬರ್‌ನಲ್ಲಿ ಸೆಲೆಬ್ರಿಟಿ ಜಿಯೊಪಾರ್ಡಿ! ಯ ಒಂದು ಎಪಿಸೋಡ್‌ನಲ್ಲಿ ಕಾಣಿಸಿಕೊಂಡರು.
- ೧೯೯೬ರ ಟಿವಿ-ಚಲನಚಿತ್ರ ಅಪೋಲೋ ೧೧ ರಲ್ಲಿ ಆಲ್ಡ್ರಿನ್ ರೆವರೆಂಡ್ ವುಡ್ರಫ್‌ರ ಪಾತ್ರದಲ್ಲಿ ನಟಿಸಿದರು. ಇದರಲ್ಲಿ ಆಲ್ಡ್ರಿನ್‌ರ ಪಾತ್ರವವನ್ನು ಹಿಂದೆ ಅಪೋಲೋ ೧೩ ರಲ್ಲಿ ಹೆನ್ರಿ ಹರ್ಟ್ ಎಂಬ ಸಣ್ಣ ಪಾತ್ರದಲ್ಲಿ ನಟಿಸಿದ ಕ್ಸಾಂಡರ್ ಬರ್ಕ್ಲೆ ಅಭಿನಯಿಸಿದರು.
- ಆಂಡ್ರಿವ್ ಚೈಕಿನ್‌ರ ಪುಸ್ತಕ ಎ ಮ್ಯಾನ್ ಆನ್ ದಿ ಮೂನ್ ನ ಆಧಾರದಲ್ಲಿ ನಿರ್ಮಿಸಿದ ಫ್ರಮ್ ದಿ ಅರ್ತ್ ಟು ದಿ ಮೂನ್ ಎಂಬ ೧೯೯೮ರ ಕಿರುಸರಣಿಗಳಲ್ಲಿ ಚಂದ್ರನನ್ನು ಮೊದಲು ಯಾರು ಪ್ರವೇಶಿಸಬಹುದು ಎಂಬ ವಿಷಯವನ್ನು ನಾಟಕೀಕರಿಸಲಾಯಿತು, ಅದರಲ್ಲಿ ಆಲ್ಡ್ರಿನ್‌ರ ಪಾತ್ರವನ್ನು ಬ್ರಿಯನ್ ಕ್ರ್ಯಾಂಸ್ಟನ್ ಅಭಿನಯಿಸಿದರು.
- ಪಿಕ್ಸಾರ್‌ನ ಟಾಯ್ ಸ್ಟೋರಿ ಚಲನಚಿತ್ರ ಸರಣಿಯ ಪ್ರಸಿದ್ಧ ಬಾಹ್ಯಾಕಾಶ ರೇಂಜರ್ ಪಾತ್ರ ಬಜ್ ಲೈಟ್‌ಯಿಯರ್‌ಗೆ ಆತನ ಹೆಸರನ್ನೇ ಇಡಲಾಗಿದೆ, ಏಕೆಂದರೆ ಈ ಚಲನಚಿತ್ರದ ನಿರ್ಮಾಪಕರು 'ಆತನು ಇತರ ಗಗನಯಾತ್ರಿಗಳಿಗಿಂತ ಉತ್ತಮ ಹೆಸರನ್ನು ಹೊಂದಿದ್ದಾರೆ' ಎಂದು ಸೂಚಿಸಿದರು. ಆಲ್ಡ್ರಿನ್ ನಾಸಾದಲ್ಲಿ ಭಾಷಣ ಮಾಡುವಾಗ ಆನಂದಪರವಶನಾಗಿ ಬಜ್ ಲೈಟ್‌ಯಿಯರ್ ಗೊಂಬೆಯೊಂದನ್ನು ಹೊರಗೆಳೆಯುವ ಮೂಲಕ ತನಗೆ ನೀಡಿದ ಗೌರವಕ್ಕೆ ಕೃತಜ್ಞತೆ ಸೂಚಿಸಿದರು; ಇದರ ಭಾಗವೊಂದನ್ನು ಟಾಯ್ ಸ್ಟೋರಿ ಯ ೧೦ನೇ ವಾರ್ಷಿಕ ದಿನದ DVD ಯಲ್ಲಿ ಕಾಣಬಹುದು. ಆದರೆ ಆತನ ಮೊದಲ ಹೆಸರನ್ನು ಬಳಸಿದುದಕ್ಕಾಗಿ ಆತ ಯಾವುದೇ ಅನುಮೋದನೆ ಶುಲ್ಕವನ್ನು ಪಡೆಯಲಿಲ್ಲ.[೪]
- ೨೦೦೩ರಲ್ಲಿ ಬ್ರಿಟಿಷ್ ಕಾಮಿಡಿ ಸರಣಿ ಆಲಿ ಜಿ ಇನ್ ದ USAiii ಯಲ್ಲಿ ಆಲಿ ಜಿ ಒಂದಿಗಿನ ಸಂದರ್ಶನವೊಂದರಲ್ಲಿ (ಸಾಚ ಬೇರನ್ ಕೊಹೆನ್ ಪ್ರದರ್ಶಿಸಿದ) ಆಲ್ಡ್ರಿನ್ ಕಾಣಿಸಿಕೊಂಡರು. ಆ ಸಂದರ್ಭದಲ್ಲಿ ಆಲಿ ಜಿ ಆತನನ್ನು "ಬಜ್ ಲೈಟ್‌ಯಿಯರ್" ಎಂದು ಕರೆದರು ಮತ್ತು ಆತ ಮನಸ್ಸು ಮಾಡಿದರೆ ಮಾನವರು ಸೂರ್ಯನನ್ನೂ ಪ್ರವೇಶಿಸಬಹುದು ಎಂದು ಹೇಳಿದರು.
- ೨೦೦೫ರಲ್ಲಿ, ನಾರ್ವೆಯನ್ ಲೇಖಕ ಜೊಹಾನ್ ಹಾರ್ಸ್ಟಡ್ ಬಜ್ ಆಲ್ಡ್ರಿನ್, ವಾಟ್ ಹ್ಯಾಪನ್ಡ್ ಟು ಯು ಇನ್ ಆಲ್ ದಿ ಕನ್‌ಫ್ಯೂಜನ್? ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕದ ಮುಖ್ಯ ಪಾತ್ರವು ಬಜ್ ಆಲ್ಡ್ರಿನ್‌ರನ್ನು ತನ್ನ ಮಾದರಿ ವ್ಯಕ್ತಿಯೆಂದು ಭಾವಿಸುತ್ತದೆ.
- ೨೦೦೬ರ ಡಿಸೆಂಬರ್ ೨೬ರಂದು, ಬ್ರಿಟಿಷ್ ಸಂಯೋಜಕ ಜೊನಾತನ್ ಡೋವ್ ವಿಶೇಷವಾಗಿ ದೂರದರ್ಶನಕ್ಕಾಗಿ ನಿರ್ಮಿಸಿದ ಮ್ಯಾನ್ ಆನ್ ದಿ ಮೂನ್ ಎಂಬ ೫೦ ನಿಮಿಷದ ಗೀತನಾಟಕವನ್ನು UK ಟಿವಿ ಚಾನೆಲ್ ಚಾನೆಲ್ ೪ ಪ್ರಸಾರ ಮಾಡಿತು. ಇದು ಆಲ್ಡ್ರಿನ್‌ರ ಚಂದ್ರನ ಯಾತ್ರೆಯಲ್ಲಿ, ಅನುಭವವು ಆತನ ಮೇಲೆ ಉಂಟುಮಾಡಿದ ಪರಿಣಾಮಗಳು ಮತ್ತು ಆತನ ಮದುವೆಯು ಮಧ್ಯೆ ಪ್ರವೇಶಿಸಿದ ಕಥೆಯನ್ನು ಹೇಳುತ್ತದೆ. ಆಲ್ಡ್ರಿನ್‌ರ ಪಾತ್ರವನ್ನು ನಾತನ್ ಗುನ್ನ್ ಮತ್ತು ಜೋನ್ ಆಲ್ಡ್ರಿನ್‌ರ ಪಾತ್ರವನ್ನು ಪಾಟ್ರಿಸಿಯಾ ರಾಸೆಟ್ಟೆ ಮಾಡಿದರು.
- ೨೦೦೭ರಲ್ಲಿ, ಆಲ್ಡ್ರಿನ್ ಇನ್ ದಿ ಶಾಡೊ ಆಫ್ ದಿ ಮೂನ್ ಎಂಬ ಪುಸ್ತಕ ಮತ್ತು ಸಾಕ್ಷ್ಯಚಿತ್ರದಲ್ಲಿ ಭಾಗವಹಿಸಿದರು.
- ಆತ ೩-ಡಿ ಆನಿಮೇಶನ್-ಮಾಡಿದ ಚಲನಚಿತ್ರ ಫ್ಲೈ ಮಿ ಟು ದಿ ಮೂನ್ ನ ಅಂತಿಮ ಭಾಗದಲ್ಲಿ ತನ್ನ ಪಾತ್ರದಲ್ಲಿ ಅಭಿನಯಿಸುತ್ತಾರೆ.
- ಆಲ್ಡ್ರಿನ್‌ರ ದೃಷ್ಟಿಯ ಮೂಲಕ ಅಪೋಲೋ ೧೧ರ ಕಥೆಯನ್ನು ಇತ್ತೀಚೆಗೆ ಸಂಗೀತವಾಗಿ ರೂಪಿಸಲಾಗಿದೆ. 'ಮೂನ್ ಲ್ಯಾಂಡಿಂಗ್'ಅನ್ನು ಸ್ಟೀಫನ್ ಎಡ್ವರ್ಡ್ಸ್ ಬರೆದು, ಸಂಯೋಜಿಸಿ, ನಿರ್ದೇಶಿಸಿದರು ಮತ್ತು ಇದನ್ನು ಡರ್ಬಿ ಪ್ಲೇಹೌಸ್‌ನಲ್ಲಿ ಪ್ರದರ್ಶಿಸಲಾಯಿತು. ಇದು ಒಂದು ತೇಲುವ ಶಟಲ್ ಕ್ಯಾಪ್ಸೂಲ್ಅನ್ನೂ ಒಳಗೊಂಡಂತೆ ಸೃಜನಶೀಲ ದೃಶ್ಯವನ್ನು ಒಳಗೊಂಡಿತ್ತು.
- ಆಲ್ಡ್ರಿನ್ ಮೂನ್‌ಮ್ಯಾನ್ ಎಂಬ MTV ವೀಡಿಯೊ ಮ್ಯೂಸಿಕ್ ಅವಾರ್ಡ್ಸ್ ಟ್ರೋಫಿಯ ರೂಪದರ್ಶಿಯಾಗಿದ್ದಾರೆ.[೩೫]
- ಭ್ರಾಂತಿಜನಕ ರಾಕ್ ವಾದ್ಯ-ವೃಂದ ಬಾರ್ಡೊ ಪಾಂಡ್ ಅದರ ಲ್ಯಾಪ್ಸೆಡ್ LPಯಲ್ಲಿ ಆಲ್ಡ್ರಿನ್ ಎಂಬ ಹಾಡನ್ನು ಬಿಡುಗಡೆ ಮಾಡಿತು.
- ಕ್ರಿಶ್ಚಿಯನ್ ರಾಕ್ ವಾದ್ಯ-ವೃಂದ ಗಾರ್ಡಿಯನ್ ಬಜ್ ಎಂಬ ಶೀರ್ಷಿಕೆಯ ಒಂದು ಆಲ್ಬಮ್ಅನ್ನು ಬಿಡುಗಡೆ ಮಾಡಿತು. ಈ ಆಲ್ಬಮ್ ಸ್ಲಿಪ್‌ನಲ್ಲಿ ನಾಲ್ಕು ಬದಲಿಸಬಹುದಾದ ಮುಖಪುಟಗಳನ್ನು ಹೊಂದಿತ್ತು, ಅವುಗಳಲ್ಲಿ ಒಂದು ಅಪೋಲೋ 11 ಚಂದ್ರನ ಮಿಷನ್‌ಗೆ ಸಿದ್ಧವಾಗುತ್ತಿರುವ "ಬಜ್" ಆಲ್ಡ್ರಿನ್‌ನ ಚಿತ್ರವಾಗಿತ್ತು.
- ಆಲ್ಡ್ರಿನ್‌ರನ್ನು ೨೦೦೮ರ ಜುಲೈ ೩೧ರಂದು ಫ್ಲೈ ಮಿ ಟು ದಿ ಮೂನ್ ಚಲನಚಿತ್ರಕ್ಕೆ ಪ್ರಚಾರ ನೀಡುವ ದಿ ಕೊಲ್ಬರ್ಟ್ ರಿಪೋರ್ಟ್ ನ ಎಪಿಸೋಡ್‌ನಲ್ಲಿ ಸ್ಟೀಫನ್ ಕೊಲ್ಬರ್ಟ್ ಸಂದರ್ಶನ ಮಾಡಿದರು.
- ಆಲ್ಡ್ರಿನ್ ಇನ್ ದಿ ಶಾಡೊ ಆಫ್ ದಿ ಮೂನ್ ಎಂಬ ಪುಸ್ತಕ ಮತ್ತು ಸಾಕ್ಷ್ಯಚಿತ್ರ ಹಾಗೂ "ದಿ ವಂಡರ್ ಆಫ್ ಇಟ್ ಆಲ್" ಎಂಬ ಸಾಕ್ಷ್ಯಚಿತ್ರದಲ್ಲಿ ಚಿತ್ರಿಸಲಾದ ಗಗನಯಾತ್ರಿಗಳಲ್ಲಿ ಒಬ್ಬರಾಗಿದ್ದಾರೆ.
- ೨೦೦೯ರಲ್ಲಿ, ಆಲ್ಡ್ರಿನ್ 'ದಿ ರಾಕೆಟ್ ಎಕ್ಸ್‌ಪೀರಿಯನ್ಸ್' ಎಂಬ ಒಂದು ರ‌್ಯಾಪ್ ಸಂಗೀತವನ್ನು ರೆಕಾರ್ಡ್ ಮಾಡಿದರು.[೩೬] ಆತ ತಾಲಿಬ್ ಕ್ವೇಲಿ ಮತ್ತು ಸ್ನೂಪ್ ಡಾಗ್ಗ್ ಮೊದಲಾವರೊಂದಿಗೆ ಸೇರಿ ಈ ವೀಡಿಯೊವನ್ನು ಮಾಡಿದರು. ಅದರಲ್ಲಿ ಸೇರಿದ ಇತರರೆಂದರೆ ಕ್ವಿನ್ಸಿ ಜೋನ್ಸ್ ಮತ್ತು ಸೌಲ್ಜ ಬಾಯ್.[೩೭]
- ೨೦೦೯ರ ನವೆಂಬರ್ ೧೭ರಂದು, ಆಲ್ಡ್ರಿನ್ ಆತನ ಹೊಸ ಪುಸ್ತಕಕ್ಕೆ ಪ್ರಚಾರ ನೀಡಲು ಬಾಹ್ಯಾಕಾಶ-ವಿಷಯಾಧಾರಿತ ಪ್ರದರ್ಶನ-ರಂಗದಲ್ಲಿ ದಿ ಪ್ರೈಸ್ ಈಸ್ ರೈಟ್ ನಲ್ಲಿ ಕಾಣಿಸಿಕೊಂಡರು (ಈ ಪುಸ್ತಕವೂ ಸಹ ಬೋನಸ್ ಆಗಿ ಈ ಪ್ರದರ್ಶನ-ರಂಗದಲ್ಲಿ ಒಳಗೊಂಡಿತ್ತು).
- ಆತ ಡ್ಯಾನ್ಸಿಂಗ್ ವಿದ್ ದಿ ಸ್ಟಾರ್ಸ್ ನ ೧೦ನೇ ಸರಣಿಯಲ್ಲಿ ಆಶ್ಲಿ ಡೆಲ್‌ಗ್ರೋಸ್ಸೊ ಒಂದಿಗೆ ಜತೆಯಾಗಿ ಸ್ಪರ್ಧಿಸಿದರು.[೩೮] ೨೦೧೦ರ ಮಾರ್ಚ್ ೨೨ರ ಸೋಮವಾರದಂದು, ಆಲ್ಡ್ರಿನ್ ಮತ್ತು ಡೆಲ್‌ಗ್ರೋಸ್ಸೊ ಸ್ಯಾಮ್ ಕುಕೆಯವರ ವಿರುದ್ಧದ ಚಾ-ಚಾ-ಚಾ ನೃತ್ಯ ಸ್ಪರ್ಧೆಯಲ್ಲಿ ೩೦ ಅಂಕಗಳಲ್ಲಿ ೧೪ ಅಂಕಗಳನ್ನು ಗಳಿಸಿದರು. ಆತ ೨೦೧೦ರ ಎಪ್ರಿಲ್ ೬ರ ಮಂಗಳವಾರದಂದು ಈ ಪ್ರದರ್ಶನದಿಂದ ಹೊರಬಿದ್ದರು.
- ಆಲ್ಡ್ರಿನ್ ೩೦ ರಾಕ್ ನ ತಾಯಿಯಂದಿರ ದಿನದ ಎಪಿಸೋಡ್‌ನಲ್ಲಿ ಅತಿಥಿ ಪಾತ್ರದಲ್ಲಿ ತಮ್ಮ ಹೆಸರಲ್ಲಿಯೇ ಕಾಣಿಸಿಕೊಂಡರು (ಇದು ೨೦೧೦ರ ಮೇ ೬ರಂದು ಪ್ರಸಾರವಾಯಿತು); ೩೦ ರಾಕ್ ಕಂಟಿನ್ಯುಟಿಯಲ್ಲಿ, ಆತ ಲಿಜ್ ಲೆಮನ್‌ರ ತಾಯಿಯ ಮಾಜಿ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ.
- ಆಲ್ಡ್ರಿನ್ ಟೈಪ್ ಚೆಫ್ ಏಳನೇ ಸರಣಿಯ ಒಂದು ಎಪಿನೋಡ್‌ನಲ್ಲಿ ಅತಿಥಿ ತೀರ್ಪುಗಾರರಾಗಿದ್ದರು, ಇದರಲ್ಲಿ ಸ್ಪರ್ಧಿಗಳು ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಗಗನಯಾತ್ರಿಗಳಿಗೆ ಮತ್ತು ವಿಜ್ಞಾನಿಗಳಿಗೆ ಊಟವನ್ನು ತಯಾರುಮಾಡಬೇಕಿತ್ತು.
- ಆಲ್ಡ್ರಿನ್ ಟಾಪ್ ಗೇರ್ ನ US ಆವೃತ್ತಿಯ ಸರಣಿ ಪ್ರಥಮಪ್ರದರ್ಶನದಲ್ಲಿ 'ಬಿಗ್ ಸ್ಟಾರ್ ಇನ್ ಎ ಸ್ಮಾಲ್ ಕಾರ್' ಆಗಿ ಅಭಿನಯಿಸಿದರು. ಸುಜುಕಿ SX೪ನಲ್ಲಿ ಒಂದು ಸುತ್ತು ಬರಲು ಆತ ೧:೫೫.೬ ಸಮಯ ತೆಗೆದುಕೊಂಡರು.
- ಕೋರಿ ಟಕರ್ ನಟಿಸಿದ ೨೦೧೧ರ ಚಲನಚಿತ್ರ Transformers: Dark of the Moon ನ ಚುಟುಕು ಟ್ರೇಲರ್‌ನಲ್ಲಿ ಆಲ್ಡ್ರಿನ್ ಕಾಣಿಸಿಕೊಂಡಿದ್ದಾರೆ. ಆಲ್ಡ್ರಿನ್ ಈ ಚಲನಚಿತ್ರದಲ್ಲಿ ನಟಿಸಿದ್ದಾರೆಂದು ನಿರ್ದೇಶಕ ಮೈಕೆಲ್ ಬೇ ದೃಢಪಡಿಸಿದ್ದಾರೆ.[೩೯]
UFO ವಾದಗಳು
[ಬದಲಾಯಿಸಿ]೨೦೦೫ರಲ್ಲಿ, ಫರ್ಸ್ಟ್ ಆನ್ ದಿ ಮೂನ್: ದಿ ಅನ್‌ಟೋಲ್ಡ್ ಸ್ಟೋರಿ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗ ಆಲ್ಡ್ರಿನ್ ಸಂದರ್ಶಕನೊಬ್ಬನಿಗೆ ನಾವು ಗುರುತಿಸದ ಹಾರುವ ವಸ್ತುವೊಂದನ್ನು ನೋಡಿದ್ದೇವೆಂದು ಹೇಳಿದರು. ನಾಲ್ಕು ಬೇರ್ಪಟ್ಟ ಬಾಹ್ಯಾಕಾಶನೌಕೆ ಅಡಾಪ್ಟರ್ ಪ್ಯಾನೆಲ್‌ಗಳಲ್ಲಿ ಒಂದನ್ನು ನೋಡಿದ್ದೇವೆಂಬ ಸಿಬ್ಬಂದಿಗಳ ಸಮರ್ಥನೆಯನ್ನು ಈ ಸಾಕ್ಷ್ಯಚಿತ್ರವು ಕತ್ತರಿಸಿದೆ ಎಂದು ಆಲ್ಡ್ರಿನ್ NAI ಹಿರಿಯ ವಿಜ್ಞಾನಿ ಡೇವಿಡ್ ಮೋರಿಸನ್‌ರಿಗೆ ಹೇಳಿದರು. ಅವುಗಳ S-IVB ಮೇಲಿನ ಸ್ಥಾನವು ೬,೦೦೦ ಮೈಲುಗಳಷ್ಟು ಎತ್ತರದಲ್ಲಿತ್ತು, ಆದರೆ S-IVB ಅದರ ಬೇರ್ಪಡುವ ಕುಶಲ-ಚಲನೆಯನ್ನು ಮಾಡುವುದಕ್ಕಿಂತ ಮೊದಲೇ ನಾಲ್ಕು ಪ್ಯಾನೆಲ್‌ಗಳನ್ನು ಹೊರಕ್ಕೆ ಬಿಡಲಾಯಿತು, ಆ ಮೂಲಕ ಅವು ಅಪೋಲೋ ೧೧ ಬಾಹ್ಯಾಕಾಶನೌಕೆಯನ್ನು ಅದರ ಮೊದಲ ಮಧ್ಯಾವಧಿಯ ಸರಿಪಡಿಸುವಿಕೆಯವರೆಗೆ ಹತ್ತಿರದಿಂದ ಹಿಂಬಾಲಿಸುವಂತೆ ಮಾಡುವ ಗುರಿಯನ್ನು ಹೊಂದಲಾಗಿತ್ತು.[೪೦] ಆಲ್ಡ್ರಿನ್ ೨೦೦೭ರ ಆಗಸ್ಟ್ ೧೫ರಂದು ದಿ ಹೊವಾರ್ಡ್ ಸ್ಟರ್ನ್ ಶೊ ದಲ್ಲಿ ಕಾಣಿಸಿಕೊಂಡಾಗ, ಸ್ಟರ್ನ್ ಆತನಲ್ಲಿ UFO ನ ಭಾವಿಸಿರುವ ನೆಲೆಯ ಬಗ್ಗೆ ಕೇಳಿದರು. ವಾಯುಮಂಡಲದ ಆಚೆಯಿದೆಯೆಂದು ಭಾವಿಸುವ ವಸ್ತುವಿಗೆ ಅಂತಹ ಯಾವುದೇ ನೆಲೆಯಿಲ್ಲವೆಂದು ಆಲ್ಡ್ರಿನ್ ದೃಢಪಡಿಸಿದರು ಮತ್ತು ಆ ವಸ್ತುವು ಬೇರ್ಪಟ್ಟ ಪ್ಯಾನೆಲ್ ಎಂಬುದು '೯೯.೯ ಪ್ರತಿಶತ' ನಿಜವೆಂದು ಹೇಳಿದರು.[೪೧][೪೨][೪೩]
ಸೈನ್ಸ್ ಚಾನೆಲ್‌ನಿಂದ ಸಂದರ್ಶನಕ್ಕೊಳಗಾದ ಆಲ್ಡ್ರಿನ್ ಗುರುತಿಸದ ವಸ್ತುಗಳನ್ನು ನೋಡಿದುದಾಗಿ ಸೂಚಿಸಿದ್ದಾರೆ ಮತ್ತು ತನ್ನ ಮಾತುಗಳನ್ನು ಸಂದರ್ಭದಿಂದ ತೆಗೆದುಹಾಕಲಾಗಿದೆಯೆಂದು ವಾದಿಸಿದ್ದಾರೆ; ಆತ ವೀಕ್ಷಕರಿಗೆ ತಾನು ಅನ್ಯ ಬಾಹ್ಯಾಕಾಶ ನೌಕೆಯನ್ನು ನೋಡಿಲ್ಲವೆಂಬುದನ್ನು ಸ್ಪಷ್ಟಪಡಿಸಿಯೆಂದು ಸೈನ್ಸ್ ಚಾನೆಲ್‌ಅನ್ನು ಕೇಳಿಕೊಂಡರು, ಆದರೆ ಅದು ಹಾಗೆ ಮಾಡಲು ನಿರಾಕರಿಸಿತು.[೪೪]
ಹಾಸ್ಯ ಆಪಾದನೆಗಳು
[ಬದಲಾಯಿಸಿ]೨೦೦೨ರ ಸೆಪ್ಟೆಂಬರ್ ೯ರಂದು, ಅಪೋಲೋ ಚಂದ್ರನ ಮೇಲೆ ಇಳಿದುದನ್ನು ಸುಳ್ಳೆಂದು ಹೇಳುವ ಚಲನಚಿತ್ರ ನಿರ್ಮಾಪಕ ಬಾರ್ಟ್ ಸಿಬ್ರೆಲ್ ಕ್ಯಾಲಿಫೋರ್ನಿಯಾದ ಹೋಟೆಲ್ ಬೆವರ್ಲಿ ಹಿಲ್ಸ್‌ನ ಹೊರಗೆ ಆಲ್ಡ್ರಿನ್ ಮತ್ತು ಆತನ ಮಲಮಗಳನ್ನು ಸಂಧಿಸಿದರು. ಸಿಬ್ರೆಲ್ ಆಲ್ಡ್ರಿನ್‌ರಿಗೆ 'ನೀನು ಚಂದ್ರನನ್ನು ಪ್ರವೇಶಿಸಿಲ್ಲದಿದ್ದರೂ ಅದರ ಮೇಲೆ ನಡೆದಾಡಿದಿದ್ದೇನೆಂದು ಸುಳ್ಳು ಹೇಳಿಕೊಳ್ಳುತ್ತಿದ್ದಿ' ಎಂದು ಹೇಳಿದರು ಮತ್ತು ಅವರನ್ನು ಹೇಡಿ, ಸುಳ್ಳುಗಾರ ಮತ್ತು ಕಳ್ಳನೆಂದು ಕರೆದರು.[೪೫] ಕೋಪಗೊಂಡ ಆಲ್ಡ್ರಿನ್ ಸಿಬ್ರೆಲ್‌ರ ಮುಖಕ್ಕೆ ಹೊಡೆದರು. ಮೊದಲು ಸಿಬ್ರೆಲ್ ಮೈಮುಟ್ಟಲು ಆರಂಭಿಸಿದರೆಂದು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದ ನಂತರ ಬೆವರ್ಲಿ ಹಿಲ್ಸ್ ಪೋಲೀಸ್ ಮತ್ತು ಆ ನಗರದ ಪ್ರಾಸಿಕ್ಯೂಟರ್ ದಾವೆ ಹೂಡಲು ನಿರಾಕರಿಸಿದರು. ಸಿಬ್ರೆಲ್‌ಗೆ ಹೆಚ್ಚೇನು ಗಂಭೀರ ಗಾಯಗಳಾಗಲಿಲ್ಲ.[೪೬]
ಟಿಪ್ಪಣಿಗಳು
[ಬದಲಾಯಿಸಿ]- ↑ ಸಿಬ್ಬಂದಿ. "ಟು ದಿ ಮೂನ್ ಆಂಡ್ ಬಿಯಾಂಡ್" Archived 2011-05-16 ವೇಬ್ಯಾಕ್ ಮೆಷಿನ್ ನಲ್ಲಿ., ದಿ ರೆಕಾರ್ಡ್ (ಬರ್ಗೆನ್ ಕೌಂಟಿ) , ಜುಲೈ ೨೦, ೨೦೦೯. ೨೦೦೯ರ ಜುಲೈ ೨೦ರಂದು ಸಂಕಲನಗೊಂಡಿದೆ. ಈ ಮೂಲವು ಆತನ ಜನ್ಮಸ್ಥಳದ ಬಗ್ಗೆ ಸಂಶಯವನ್ನು ಸೂಚಿಸುತ್ತದೆ. ಈ ಲೇಖನದ ಮೊದಲ ಪ್ಯಾರಾಗ್ರಾಫ್‌ನಲ್ಲಿ 'ಆತ ಮಾಂಟ್‌ಕ್ಲೇರ್‌ನಲ್ಲಿ ಹುಟ್ಟಿಬೆಳೆದರು' ಎಂದು ಹೇಳಲಾಗಿದೆ. ಅದೇ 'ಆರಂಭಿಕ ವರ್ಷಗಳ' ಹೆಚ್ಚು ವಿವರವಾದ ಎರಡನೇ ಪ್ಯಾರಾಗ್ರಾಫ್‌ನಲ್ಲಿ 'ಆತ ೧೯೩೦ರ ಜನವರಿ ೨೦ರಂದು ಗ್ಲೆನ್ ರಿಡ್ಜ್‌ನ ಮಾಂಟ್‌ಕ್ಲೇರ್ ಆಸ್ಪತ್ರೆಯಲ್ಲಿ ಎಡ್ವಿನ್ ಯುಜೀನ್ ಆಲ್ಡ್ರಿನ್ ಜೂನಿಯರ್ ಆಗಿ ಜನಿಸಿದರು' ಎಂದಿದೆ.
- ↑ Hansen, James R. (2005). First Man: The Life of Neil A. Armstrong. Simon & Schuster. p. 348."ಆತನ ಜನನ ಪ್ರಮಾಣಪತ್ರವು ಗ್ಲೆನ್ ರಿಡ್ಜ್ ಆತನ ಜನ್ಮಸ್ಥಳವೆಂದು ಹೇಳುತ್ತದೆ."
- ↑ BuzzAldrin.com - ಬಜ್ ಆಲ್ಡ್ರಿನ್ ಬಗ್ಗೆ
- ↑ ೪.೦ ೪.೧ Solomon, Deborah (June 15, 2009 and June 21, 2009). "Questions for Buzz Aldrin: The Man on the Moon". The New York Times. Retrieved 2009-06-24.
{{cite news}}
: Check date values in:|date=
(help); Unknown parameter|coauthors=
ignored (|author=
suggested) (help) ಟಿಪ್ಪಣಿ: nytimes.com ಮುದ್ರನ-ವೀಕ್ಷಣೆ ಸಾಫ್ಟ್‌ವೇರ್ ಈ ಲೇಖನವು ೨೦೦೯ರ ಜೂನ್ ೨೧ರ ದಿನಾಂಕದ್ದು ಎಂದು ತೋರಿಸುತ್ತದೆ; ಮುಖ್ಯ ಲೇಖನ ವೆಬ್‌ಪುಟವು ಜೂನ್ ೧೫ ಎಂದು ತೋರಿಸುತ್ತದೆ. - ↑ "ಫ್ರಮ್ ದಿ ಡಾಲರ್ ಟು ದಿ ಮೂನ್". Archived from the original on 2012-10-11. Retrieved 2011-05-16.
- ↑ ""ಬ್ರಿಗಿಟ್ಟೆ ವ್ಯಾಂಬ್ಸ್‌ಗ್ಯಾನ್ß, "ಬಜ್ ಆಲ್ಡ್ರಿನ್: ಮೋಂಡ್-ಮ್ಯಾನ್ ಮಿಟ್ ಟ್ರುಪ್ಬೇಚರ್ ವುರ್ಜೆಲ್ನ್" ಡರ್ ವೆಸ್ಟನ್ (ಜರ್ಮನಿ), ಜುಲೈ 17, 2009."". Archived from the original on 2009-08-02. Retrieved 2011-05-16.
- ↑ ರೂಟ್ಸ್‌ವೆಬ್ಸ್ ವರ್ಲ್ಡ್‌ಕನೆಕ್ಟ್ ಪ್ರಾಜೆಕ್ಟ್: ಮಾರ್ಕ್ ವೀಟ್ ಡೇಟಾಬೇಸ್
- ↑ "AdirondackDailyEnterprise.com Archives" (PDF). Archived from the original (PDF) on 2013-08-07. Retrieved 2011-05-16.
- ↑ Chaikin, Andrew. "A Man on the Moon". p. 585.
{{cite web}}
: Missing or empty|url=
(help) - ↑ ಲೈಫ್ ಮ್ಯಾಗಜಿನ್ ಜೂನ್ 8, 1953. ಪುಟ 29
- ↑ ಅಪೋಲೋ ಎಕ್ಸ್‌ಪೆಡಿಶನ್ಸ್ ಟು ದಿ ಮೂನ್, ಚ್ಯಾಪ್ಟರ್ ೮, ಪುಟ ೭.
- ↑ ಚೈಕಿನ್, ಆಂಡ್ರಿವ್. ಎ ಮ್ಯಾನ್ ಆನ್ ದಿ ಮೂನ್ . ಪುಟ ೨೦೪
- ↑ ("ಫರ್ಸ್ಟ್ ಆನ್ ದಿ ಮೂನ್ — ಎ ವೊಯೇಜ್ ವಿದ್ ನೈಲ್ ಆರ್ಮ್‌ಸ್ಟ್ರಾಂಗ್, ಮೈಕೆಲ್ ಕೊಲಿನ್ಸ್, ಎಡ್ವಿನ್ ಇ., ಆಲ್ಡ್ರಿನ್ ಜೂನಿಯರ್", ಜೀನ್ ಫಾರ್ಮರ್ ಮತ್ತು ದೋರ ಜಾನೆ ಹ್ಯಾಂಬ್ಲಿನ್ ಒಂದಿಗೆ ಬರೆದರು, ಅರ್ತುರ್ ಸಿ. ಕ್ಲಾರ್ಕೆ ಹಿನ್ನುಡಿ ಬರೆದರು, ಮೈಕೆಲ್ ಜೋಸೆಫ್ ಲಿಮಿಟೆಡ್, ಲಂಡನ್ (೧೯೭೦), ಪುಟ ೨೫೧).
- ↑ Hillner, Jennifer (2007-01-24). "Sundance 2007: Buzz Aldrin Speaks". Table of Malcontents - Wired Blogs. Wired. Archived from the original on 2007-02-28. Retrieved 2007-05-07.
- ↑ "Webster Presbyterian Church History". Retrieved 2009-11-09.
- ↑ ಸ್ಟೋರಿ ಆಫ್ ಟ್ರ್ಯಾಂಕ್ವಿಲಿಟಿ ಲಾಡ್ಜ್ ನಂ. 2000[ಶಾಶ್ವತವಾಗಿ ಮಡಿದ ಕೊಂಡಿ]
- ↑ Aldrin, Buzz (2009). Magnificent Desolation: The Long Journey Home from the Moon. Harmony.
- ↑ ಬಜ್ ಆಲ್ಡ್ರಿನ್ ಆಂಡ್ ಸ್ನೂಪ್ ಡಾಗ್ಗ್ ರೀಚ್ ಫಾರ್ ದಿ ಸ್ಟಾರ್ಸ್ ವಿದ್ ರಾಕೆಟ್ ಎಕ್ಸ್‌ಪೀರಿಯನ್ಸ್ Archived 2011-08-09 ವೇಬ್ಯಾಕ್ ಮೆಷಿನ್ ನಲ್ಲಿ., ಟೈಮ್ಸ್ ಆನ್‌ಲೈನ್, ಜೂನ್ ೨೫, ೨೦೦೯
- ↑ "Buzz Aldrin Reveals Existence of Monolith on Mars Moon". C-Span. July 22, 2009.
- ↑ ಆಲ್ಡ್ರಿನ್, ಇ. ಇ., "ಸೈಕ್ಲಿಕ್ ಟ್ರ್ಯಾಜೆಕ್ಟರಿ ಕಾನ್ಸೆಪ್ಟ್ಸ್,"ಇಂಟರ್‌ಪ್ಲಾನೆಟರಿ ರ‌್ಯಾಪಿಡ್ ಟ್ರಾನ್ಸಿಟ್ ಸ್ಟಡಿ ಮೀಟಿಂಗ್‌ಗೆ SAIC ಮಂಡನೆ, ಜೆಟ್ ಪ್ರೋಪಲ್ಷನ್ ಲ್ಯಾಬೊರೇಟರಿ, ಅಕ್ಟೋಬರ್ ೧೯೮೫.
- ↑ ಬಿರ್ನೆಸ್, ಡಿ. ವಿ., ಲಾಂಗುಸ್ಕಿ, ಜೆ. ಎಮ್. ಮತ್ತು ಆಲ್ಡ್ರಿನ್, ಬಿ.,"ಸೈಕ್ಲರ್ ಆರ್ಬಿಟ್ ಬಿಟ್ವೀನ್ ಅರ್ತ್ ಆಂಡ್ ಮಾರ್ಸ್," ಜರ್ನಲ್ ಆಫ್ ಸ್ಪೇಸ್‌ಕ್ರಾಫ್ಟ್ ಆಂಡ್ ರಾಕೆಟ್ಸ್, ಸಂಪುಟ ೩೦, ಸಂ. ೩, ಮೇ-ಜೂನ್ ೧೯೯೩, ಪುಟೇ ೩೩೪-೩೩೬.
- ↑ Aldrin, Buzz (2003-12-05). "Fly Me To L1". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-11-14.
- ↑ Aldrin, Buzz (2009-07-03). "Buzz Aldrin calls for manned flight to Mars to overcome global problems". The Daily Telegraph. Retrieved 2011-01-07.
- ↑ "After walking on moon, astronauts trod various paths - CNN.com". CNN. July 17, 2009. Archived from the original on ಜನವರಿ 30, 2011. Retrieved April 27, 2010.
- ↑ Read, Kimberly (2005-01-04). "Buzz Aldrin". About.com. Archived from the original on 2011-07-18. Retrieved 2008-11-02.
- ↑ http://combatveteransforcongress.org/sites/default/files/೨-೨೬-೧೦-invite.pdf[ಶಾಶ್ವತವಾಗಿ ಮಡಿದ ಕೊಂಡಿ]
- ↑ ೨೭.೦ ೨೭.೧ ಟೈಮ್ ಲೇಖನ: "10 ಕ್ವೆಶನ್ಸ್ ಫಾರ್ ಬಜ್ ಆಲ್ಡ್ರಿನ್ Archived 2011-07-13 ವೇಬ್ಯಾಕ್ ಮೆಷಿನ್ ನಲ್ಲಿ.."
- ↑ "Discovery Circumstances: Numbered Minor Planets (5001)-(10000): 6470 Aldrin". IAU: Minor Planet Center. Retrieved 2008-07-26.
- ↑ ಪರ್ಸೊನಲ್ ಅನೌನ್ಸ್‌ಮೆಂಟ್ಸ್ - ಆಗಸ್ಟ್ ೨೨, ೨೦೦೧ ವೈಟ್ ಹೌಸ್ ಪ್ರೆಸ್ ರಿಲೀಸ್ ನೇಮಿಂಗ್ ದಿ ಪ್ರೆಸಿಡೆನ್ಷಿಯಲ್ ಅಪಾಂಟೀಸ್ ಫಾರ್ ದಿ ಕಮೀಷನ್.
- ↑ [೧] - ಈ ಮೂಲವು ಆತ ೨೦೦೨ರಲ್ಲಿ ನೇಮಕಗೊಂಡರೆಂದು ಹೇಳುತ್ತದೆ, ಆದರೆ ೨೦೦೧ರ ಆಗಸ್ಟ್ ೨೨ರ ಪ್ರೆಸ್ ಪ್ರಕಟಣೆಯ ಪ್ರಕಾರದ ಆತ ೨೦೦೧ರಲ್ಲಿ ನೇಮಕಗೊಂಡರು.
- ↑ "Variety International Humanitarian Awards". Variety, the Children's Charity. Archived from the original on 2007-09-27. Retrieved 2007-05-07.
- ↑ "ಸಿಂಪೋಸಿಯಮ್ ಅವಾರ್ಡ್ಸ್ | ನ್ಯಾಷನಲ್ ಸ್ಪೇಸ್ ಸಿಂಪೋಸಿಯಮ್". Archived from the original on 2009-02-03. Retrieved 2011-05-16.
- ↑ "Hollywood Walk of Fame database". HWOF.com. Archived from Aldrin the original on 2011-07-12. Retrieved 2011-05-16.
{{cite web}}
: Check|url=
value (help) - ↑ "Space Foundation Survey Reveals Broad Range of Space Heroes". Archived from the original on 2012-08-15. Retrieved 2011-05-16.
- ↑ "BuzzAldrin.com - About Buzz Aldrin: FAQ". Retrieved 2008-06-09.
- ↑ "ಬಜ್ ಆಲ್ಡ್ರಿನ್ಸ್ ರಾಕೆಟ್ ಎಕ್ಸ್‌ಪೀರಿಯನ್ಸ್ ಫ್ರಮ್ ಬಜ್ ಆಲ್ಡ್ರಿನ್ ಆಂಡ್ FOD ಟೀಮ್ - ವೀಡಿಯೊ". Archived from the original on 2011-06-24. Retrieved 2011-05-16.
- ↑ "ಮೇಕಿಂಗ್ ಆಫ್ ಬಜ್ ಆಲ್ಡ್ರಿನ್ಸ್ ರಾಕೆಟ್ ಎಕ್ಸ್‌ಪೀರಿಯನ್ಸ್, ಸ್ನೂಪ್ ಡಾಗ್ಗ್ ಆಂಡ್ ತಾಲಿಬ್ ಕ್ವೇರಿ ಫ್ರಮ್ ಬಜ್ ಆಲ್ಡ್ರಿನ್, FOD ಟೀಮ್, ರ‌್ಯಾನ್ ಪೆರೆಜ್ ಆಂಡ್ ಸ್ನೂಪ್ ಡಾಗ್ಗ್ - ವೀಡಿಯೊ". Archived from the original on 2011-04-27. Retrieved 2011-05-16.
- ↑ "Astronaut Buzz Aldrin to dance with a different kind of star". Mother Nature Network. 2010-03-02. Archived from the original on 2010-03-06. Retrieved 2010-03-03.
- ↑ http://www.collider.com/೨೦೧೦/೧೨/೦೮/michael-bay-interview-transformers-dark-moon-edit-bay-visit/[ಶಾಶ್ವತವಾಗಿ ಮಡಿದ ಕೊಂಡಿ]
- ↑ "Apollo 11 Mission Op Report" (PDF). Archived from the original (PDF) on 2011-11-22. Retrieved 2011-05-16.
- ↑ "NASA Ask an Astrobiologist". Archived from the original on 2008-01-19. Retrieved 2011-05-16.
- ↑ "Site containing a transcript of the UFO segment of the Untold Story documentary". Archived from the original on 2016-01-31. Retrieved 2011-05-16.
- ↑ "A link to The Science Channel scheduling info for cited documentary containing Aldrin's UFO comments".
- ↑ Morrison, David (2009). "UFOs and Aliens in Space". Skeptical Inquirer. 33 (1): 30–31.
- ↑ Schwartz, John (2009-07-13). "Vocal Minority Insists It Was All Smoke and Mirrors". New York Times. Retrieved 2009-08-11.
- ↑ "Ex-astronaut escapes assault charge". BBC News. 2002-09-21. Retrieved 2008-09-03.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- ಬಜ್ ಆಲ್ಡ್ರಿನ್ಸ್ ಅಫೀಶಿಯಲ್ ನಾಸಾ ಬಯೋಗ್ರಫಿ
- ಆನ್ಸಿಸ್ಟ್ರಿ ಆಫ್ ಬಜ್ ಆಲ್ಡ್ರಿನ್
- ಎ ಫೆಬ್ರವರಿ 2009 ಬಿಬಿಸಿ ನ್ಯೂಸ್ ಐಟಮ್ ಎಬೌಟ್ ಬಜ್ ಆಲ್ಡ್ರಿನ್ಸ್ ಮೂನ್ ಮೆಮರೀಸ್, ಲುಕಿಂಗ್ ಫಾರ್ವರ್ಡ್ ಟು ದಿ 40ತ್ ಆನಿವರ್ಸರಿ ಆಫ್ ದಿ ಫರ್ಸ್ಟ್ ಮೂನ್ ಲ್ಯಾಂಡಿಂಗ್
- "ಸ್ಯಾಟಲೈಟ್ ಆಫ್ ಸಾಲಿಟ್ಯೂಡ್" Archived 2006-09-19 ವೇಬ್ಯಾಕ್ ಮೆಷಿನ್ ನಲ್ಲಿ. - ಬಜ್ ಆಲ್ಡ್ರಿನ್: ಈ ಲೇಖನದಲ್ಲಿ ಆಲ್ಡ್ರಿನ್ ಚಂದ್ರನಲ್ಲಿ ನಡೆದಾಡುವಾಗ ಉಂಟಾದ ಭಾವನೆಗಳನ್ನು ವಿವರಿಸಿದ್ದಾರೆ, ಕಾಸ್ಮಸ್ ವಿಜ್ಞಾನ ನಿಯತಕಾಲಿಕೆ
- ವೀಡಿಯೊ ಇಂಟರ್ವ್ಯೂ ವಿದ್ ಬಜ್ ಆಲ್ಡ್ರಿನ್ - ಬಜ್ ಟ್ರ್ಯಾಂಕ್ವಿಲಿಟಿ ಬೇಸ್‌ನ ವರ್ಧಿಸಿದ ಚಿತ್ರವನ್ನು ಮತ್ತು ಪ್ರಾಮುಖ್ಯತೆಯ ದೃಷ್ಟಿಯಿಂದ ಗ್ರೇಮೆ ಹಿಲ್ ಒಂದಿಗೆ ಮಾಡಿದ ಚರ್ಚೆಯನ್ನು ತೋರಿಸಿದ್ದಾರೆ.
- ವೀಡಿಯೊ ಇಂಟರ್ವ್ಯೂ Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ. - AstrotalkUK
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- CS1 errors: dates
- CS1 errors: requires URL
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: URL
- Articles with trivia sections from May 2010
- Articles with invalid date parameter in template
- Commons link is locally defined
- Official website different in Wikidata and Wikipedia
- 1930ರಲ್ಲಿ ಜನಿಸಿದವರು
- ಪ್ರಸ್ತುತದಲ್ಲಿರುವ ಜನರು
- 1966ರ ಬಾಹ್ಯಾಕಾಶ ಯಾತ್ರೆ
- 1969ರ ಬಾಹ್ಯಾಕಾಶ ಯಾತ್ರೆ
- ಅಮೇರಿಕನ್ ಗಗನಯಾತ್ರಿಗಳು
- ಅಮೆರಿಕನ್ ವಿಮಾನಚಾಲಕರು
- ಕೊರಿಯನ್ ಯುದ್ಧದಲ್ಲಿ ಭಾಗವಹಿಸಿದ ಅಮೇರಿಕನ್ ಮಿಲಿಟರಿ ಸಿಬ್ಬಂದಿ
- ಜರ್ಮನ್ ಮೂಲದ ಅಮೇರಿಕಾದ ಜನರು
- ಸ್ಕಾಟಿಷ್ ಮೂಲದ ಅಮೆರಿಕಾದ ಜನರು
- ಸ್ವೀಡಿಶ್ ಮೂಲಕ ಅಮೇರಿಕಾದ ಜನರು
- ಅಮೇರಿಕಾದ ಪ್ರೆಸ್ಬಿಟೇರಿಯನ್ಗಳು
- ಕಾಂಗ್ರೆಶನಲ್ ಗೋಲ್ಡ್ ಮೆಡಲ್ ವಿಜೇತರು
- ಹಾರ್ಮನ್ ಟ್ರೋಫಿ ವಿಜೇತರು
- ನ್ಯಾಷನಲ್ ಏವಿಯೇಶನ್ ಹಾಲ್ ಆಫ್ ಫೇಮ್ ದಾಖಲಿತರು
- ಅಮೆರಿಕನ್ ರಿಯಾಲಟಿ ದೂರದರ್ಶ ಸರಣಿಯಲ್ಲಿ ಭಾಗವಹಿಸಿದವರು
- ನ್ಯೂಜೆರ್ಸಿಯ ಎಸ್ಸೆಕ್ಸ್ ಕೌಂಟಿಯ ಜನರು
- ಮದ್ಯಪಾನ ವ್ಯಸನವನ್ನು ಸ್ವತಃ ಒಪ್ಪಿಕೊಂಡ ವ್ಯಕ್ತಿಗಳು
- ಚಂದ್ರನನ್ನು ಪ್ರವೇಶಿಸಿದ ಜನರು
- ಏರ್ ಮೆಡಲ್ ಸ್ವೀಕೃತರು
- ಕುಲ್ಲುಮ್ ಜಿಯೊಗ್ರಫಿಕಲ್ ಮೆಡಲ್ ಸ್ವೀಕೃತರು
- ಅಮೇರಿಕಾ ಸಂಯುಕ್ತ ಸಂಸ್ಥಾನದ ವಾಯುಪಡೆಯ ಅಧಿಕಾರಿಗಳು
- ಯುನೈಟೆಡ್ ಸ್ಟೇಟ್ಸ್ ಆಸ್ಟ್ರೊನಟ್ ಹಾಲ್ ಆಫ್ ಫೇಮ್ ದಾಖಲಿತರು
- ಯುನೈಟೆಡ್ ಸ್ಟೇಟ್ಸ್ ಮಿಲಿಟರ್ ಅಕಾಡೆಮಿಯ ಹಳೆ ವಿದ್ಯಾರ್ಥಿಗಳು
- ಮಸ್ಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿಗಳು
- ಬಾಹ್ಯಾಕಾಶ ಅನ್ವೇಷಣೆ